ಎಪಿಎಂಸಿ ಕಾರ್ಯದರ್ಶಿ, ನಿರ್ದೇಶಕರ‌ ವಿರುದ್ಧ ಆಕ್ರೋಶ ಹೊರ ಹಾಕಿದ‌‌ ಸಿದ್ದಗೌಡ

ಬೆಳಗಾವಿ:ಗಾಂಧಿ ನಗರದ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಅನಧಿಕೃತವಾಗಿ ಆರಂಭವಾಗಿರುವ ಜೈ ಕಿಸಾನ್ ಹೋಲ್ ಸೇಲ್ ವೆಜಿಟೇಬಲ್ ಮರ್ಚಂಟ್ಸ್ ಅಸೋಸಿಯೆಷನ್ ಖಾಸಗಿ ಮಾರುಕಟ್ಟೆಯನ್ನು ಪ್ರಾರಂಭಿಸಲು ಅನುಮತಿ ಪಡೆದಿರುವುದು ಕೃಷಿ ಮಾರಾಟ ಇಲಾಖೆಯ ರಾಜ್ಯ ನಿರ್ದೇಶಕ ಕರಿಗೌಡ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿ ಸರಕಾರದ ಬೊಕ್ಕಸಕ್ಕೆ ನಷ್ಟ ಮಾಡಿದ್ದಾರೆ ಇದಕ್ಕೆ ಬೆಳಗಾವಿ ಎಪಿಎಂಸಿ ಕಾರ್ಯದರ್ಶಿ ಕೈ ಜೊಡಿಸಿದ್ದಾರೆ ಎಂದು ಭಾರತೀಯ ಕೃಷಿಕ ಸಮಾಜದ ಅಧ್ಯಕ್ಷ ಸಿದಗೌಡ ಮೋದಗಿ ಆರೋಪಿಸಿದರು.

promotions

ಶುಕ್ರವಾರ ಎಪಿಎಂಸಿ ಪ್ರಾಂಗಣದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಜೈ ಕಿಸಾನ್ ಹೋಲ್ ಸೇಲ್ ಭಾಜಿ ಮಾರ್ಕೆಟ್ ಪ್ರಾರಂಭಿಸಲು ಫಲವತ್ತಾದ ಕೃಷಿ ಜಮೀನನ್ನು ಭೂ ಪರಿವರ್ತನೆ ಮಾಡುವಲ್ಲಿ ಜಿಲ್ಲಾಧಿಕಾರಿ, ತಹಶಿಲ್ದಾರರ ಹೊರತಾಗಿಲ್ಲ. 2011ರಲ್ಲಿ ಮೃತಪಟ್ಟಿದ್ದ ಬಸಲಿಂಗಪ್ಪ ಸಿದ್ದನಾಯಕಪ್ಪ ಭಾವಿ ಅವರ ಹೆಸರಿನಲ್ಲಿ 2015ರಲ್ಲಿ ಭೂ ಪರಿವರ್ತನಾ ಮಾಡಿಸಿ ತಹಶಿಲ್ದಾರರು, ಜಿಲ್ಲಾಧಿಕಾರಿಗಳಿಗೆ ತಪ್ಪು ವರದಿ ಸಲ್ಲಿಸಿದ್ದು ದಾಖಲೆಯ ಪ್ರಕಾರ ತಿಳಿದು ಬರುತಗತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

promotions

ಕಳೆದ 2014-15ರಲ್ಲಿ ಮಹಾನಗರ ಪಾಲಿಕೆ ಖಾಸಗಿ ಕಟ್ಟಡ ಕಾಮಗಾರಿಗೆ ಅನುಮತಿ ನೀಡಿರುವುದಿಲ್ಲ. ಗಾಂಧಿ ನಗರದ ಹೆದ್ದಾರಿಯ ಪಕ್ಕದಲ್ಲಿ ನಿರ್ಮಾಣ‌ ಮಾಡಿರುವ ಅನಧಿಕ ಕಟ್ಟಡವನ್ನು 30 ಜನೇವರಿ 2017ರಂದು ಪಾಲಿಕೆ ಆಯುಕ್ತರು ತಾತ್ಕಾಲಿಕ ನೋಟಿಸ್ ಮತ್ತು ಮೇಯರ್ ಅವರು 8 ಮಾ.2019ರಂದು ಪಾಲಿಕೆಗೆ ಟಿಪ್ಪಣೆ ಮಾಡಿದರೂ ಇಲ್ಲಿಯವರೆಗೆ ನೋಟಿಸ್ ಗೆ ಉತ್ತರ ಸಿಕ್ಕಿಲ್ಲ ಎಂದು ಆಕ್ರೋಶಕ್ಕೆ ವ್ಯಕ್ತಪಡಿಸಿದರು. ಬೆಳಗಾವಿ ದಕ್ಷಿಣ‌ ಮತಕ್ಷೇತ್ರದ ‌ಶಾಸಕ ಅಭಯ ಪಾಟೀಲ ಅವರು 2019ರಲ್ಲಿ ಅಂದಿನ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಅವರಿಗೆ ಹತ್ತು ಅಂಶಗಳು‌ ಉಲ್ಲಂಘನೆ ಮಾಡಿದ್ದಾರೆ ಎಂದು‌ ಪತ್ರ ಬರೆದು ಖಾಸಗಿ ಮಾರುಕಟ್ಟೆ ಉದ್ಘಾಟನೆಗೆ‌ ಹೋಗಿದ್ದು ಯಾವ ಉದ್ದೇಶದಿಂದ.‌ಅಲ್ಲದೆ ಹೆಸ್ಕಾಂ‌ ಅಧಿಕಾರಿಗಳು ತಾತ್ಕಾಲಿಕವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ ಇದು ವ್ಯವಸ್ಥಿತವಾಗಿ ತರಕಾರಿ ಮಾರುಕಟ್ಟೆ ಮುಚ್ಚಿ ಹಾಕುವ ಹುನ್ನಾರ ‌ನಡೆಸಿದ್ದಾರೆ ಎಂದು‌ ಆರೋಪಿಸಿದರು.

ಜಿಪಂ‌ ಮಾಜಿ ಉಪಾಧ್ಯಕ್ಷ ಅರುಣ ಕಟಾಂಬಳೆ, ಬಸನಗೌಡ ಪಾಟೀಲ, ಸತೀಶ ಪಾಟೀಲ, ರಾಜಕುಮಾರ ಟೋಪಣ್ಣವರ, ಸುಜೀತ ಮುಳಗುಂದ ಮಾಣಿಕ ಹೊನಗೇಕರ,‌ ವಿಕ್ಕಿ‌ ಸಚಿದೇವ, ಶಿವಲೀಲಾ‌‌ ಮಿಸಾಳೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Read More Articles