ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಇಬ್ಬರು ಖಾನಾಪೂರ ಪೊಲೀಸ್ ಕಾನಸ್ಟೆಬಲ್ ಗಳು

ಬೆಳಗಾವಿ: ಮಟಕಾ‌ ಪ್ರಕರಣ ದಾಖಲಿಸುವುದಾಗಿ ಹೆದರಿಸಿ ಲಂಚ ಪಡೆಯುತ್ತಿದ್ದ ಖಾನಾಪೂರ ಪೊಲೀಸ್ ಠಾಣೆಯ ಇಬ್ಬರು ಕಾನಸ್ಟೆಬಲ್ ಗಳು ಇಂದು ಭ್ರಷ್ಟಾಚಾರ ನಿರ್ಮೂಲನಾ ದಳ (ಎಸಿಬಿ)ದ ಬಲೆಗೆ ಬಿದ್ದಿದ್ದಾರೆ.

promotions

ಕಾನಸ್ಟೆಬಲ್ ಗಳಾದ ಸಿದ್ಧು ಮೊಕಾಶಿ ಮತ್ತು ವಿಠ್ಠಲ ಚಿಪ್ಪಲಕಟ್ಟಿ ರೂ. 15,000 ಲಂಚ ಪಡೆಯುವಾಗ ಎಸಿಬಿ‌ ಅಧಿಕಾರಿಗಳ ಬಲೆಗೆ ಬಿದ್ದರು.

promotions

ಕಳೆದ ಶುಕ್ರವಾರ  ಕೆಲಸಕ್ಕೆಂದು ಖಾನಾಪೂರಕ್ಕೆ ಹೋಗಿದ್ದ ಬೆಳಗಾವಿಯ ಪರಶುರಾಮ ಗಾಡಿವಡ್ಡರ  ಮೇಲೆ ಮಟಕಾ ಪ್ರಕರಣ ದಾಖಲಿಸುವುದಾಗಿ ಇಬ್ಬರೂ ಕಾನಸ್ಟೆಬಲ್ ಗಳು ಹೆದರಿಸಿದ್ದರು. ಪ್ರಕರಣ ದಾಖಲಿಸದೆ ಇರಲು ರೂ.50,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಕೊನೆಗೆ ರೂ.15,000 ಕ್ಕೆ ವ್ಯವಹಾರ ಕುದುರಿಸಿದ್ದರು. 

ಲಂಚ ಕೇಳಿದ್ದಕ್ಕೆ ಸಂಬಂಧಪಟ್ಟಂತೆ ಪರಶುರಾಮ ಗಾಡಿವಡ್ಡರ ಸೋಮವಾರ ಎಸಿಬಿಗೆ ದೂರು ನೀಡಿದ್ದರು. ದೂರು ಸ್ವೀಕರಿಸಿ ಕಾರ್ಯಾಚರಣೆ ನಡೆಸಿರುವ ಎಸಿಬಿ ಅಧಿಕಾರಿಗಳು, ಲಂಚ ಪಡೆಯುವಾಗ ದಾಳಿ ನಡೆಸಿ ಇಬ್ಬರೂ ಕಾನಸ್ಟೆಬಲ್ ಗಳನ್ನು ಇಂದು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.

ಎಸಿಬಿ ಎಸ್ಪಿ ಬಿ. ಎಸ್.ನೇಮಗೌಡ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಕರುಣಾಕರ ಶೆಟ್ಟಿ ನೇತೃತ್ವದಲ್ಲಿ ಇನ್ಸಪೆಕ್ಟರ್ ಗಳಾದ ಅಡಿವೇಶ ಗುದಿಗೊಪ್ಪ ಹಾಗೂ ಸುನಿಲಕುಮಾರ ಮತ್ತು ಸಿಬ್ಬಂದಿ ದಾಳಿ‌ ನಡೆಸಿದರು.

Read More Articles