ಪೊಲೀಸರಿಗೆ ಕಬಾಸುರ ಕುಡಿನೀರ ಸಿದ್ಧ ಚೂರ್ಣ ವಿತರಣೆ

ಬೆಳಗಾವಿ: ಜಿಲ್ಲೆಯ ಗೋಕಾಕ, ಮೂಡಲಗಿಯ ಕುಲಗೋಡ ನಗರದಲ್ಲಿ ಕೊರೋನಾ ವೇಳೆಯಲ್ಲಿ ಹಗಲಿರುಳು ಶ್ರಮಿಸುತ್ತಿರುವ ಪೋಲಿಸರಿಗೆ ಮಹಾಂತ ವಕ್ಕುಂದ ಫೌಂಡೇಶನ್ ವತಿಯಿಂದ ಕಾರ್ಯ ನಿರತ ಪೋಲಿಸ್ ಠಾಣೆಯ ಸಿಬ್ಬಂದಿಗಳಿಗೆಲ್ಲ ಮತ್ತು ಅರಭಾವಿ ಹಾಗೂ ಗೋಕಾಕ್ ಮತಕ್ಷೇತ್ರದ ಶಾಸಕರ ಕಚೇರಿಯಲ್ಲಿ ಇಂದು ಕಬಾಸುರ ಕುಡಿನೀರ ಸಿದ್ಧ ಚೂರ್ಣವನ್ನು ಉಚಿತವಾಗಿ ವಿತರಿಸಲಾಯಿತು.ಈ ಕಿಲ್ಲರ್ ಕೋರೊನಾ ಮಹಾಮಾರಿಯ ಸಂದರ್ಭದಲ್ಲಿ ಮುಂಚೂಣಿಯಲ್ಲಿ ನಿಂತು ಸೇವೆ ಸಲ್ಲಿಸುತ್ತಿರುವ ಎಲ್ಲ ಕರೋನಾ ವಾರಿಯರ್ಸಗಳಿಗೆ ಹಾಗೂ ಅವರ ಪರಿವಾರದವರ ಸುರಕ್ಷತೆಗಾಗಿ ನಮ್ಮದೊಂದು ಅಳಿಲು ಸೇವೆ ಎಂದು ವಕ್ಕುಂದ ಪೌಂಡೇಶನ್ ಕಾರ್ಯಕರ್ತರು ಹೇಳಿದರು.

promotions

promotions

Read More Articles