ಈ ಭಾರಿ ವಿಜೃಂಭಣೆಯ ಗಣೇಶ ಉತ್ಸವ ಬೇಡ ಡಿ.ವೈ.ಎಸ್.ಪಿ ಮನೋಜ ನಾಯಿಕ
- 15 Jan 2024 , 1:02 AM
- Belagavi
- 92
ಚಿಕ್ಕೋಡಿ: ಶಹರದ ಪೋಲಿಸ್ ಕಛೇರಿಯ ಆವರಣದಲ್ಲಿ ಸೋಮವಾರ ಚಿಕ್ಕೋಡಿ ತಾಲೂಕಾ ಗಣೇಶ ಉತ್ಸವ ಮಂಡಳಿಯ ಸಭೆ ನಡೆಯಿತು ಈ ಸಂದರ್ಭದಲ್ಲಿ ಮಾತನಾಡಿದ ಡಿ.ವೈ.ಎಸ್.ಪಿ ಮನೋಜ ನಾಯಿಕ ಸಕಾರದ ನಿಯಮಾವಳಿಗಳು ಬರುವವರೆಗೆ ಗಣೇಶ ಉತ್ಸವ ಮಂಡಳಿಗಳು ಕಾಯಬೇಕು. ಈ ಕರೋನಾದ ಮದ್ಯ ಈ ಬಾರಿ ಗಣೇಶ ಉತ್ಸವ ವಿಜ್ರಂಬಣೆಯ ಆಚರಣೆ ಆಗಬಾರದು, ಸರಳವಾಗಿ ಮೂರ್ತಿಗಳನ್ನು ಪ್ರತಿಸ್ಟಾಪನೆ ಹಾಗೂ ವಿಸರ್ಜನೆ ಮಾಡಿ ಪೋಲಿಸ್ ಇಲಾಖೆಯವರಿಗೆ ಸಹಕಾರ ನೀಡಬೇಕು. ನಿಮ್ಮ ಆರೋಗ್ಯ ಹಿತ ದೃಷ್ಠಿಗೆ ಇದು ಒಳ್ಳೆಯದು ಎಂದರು. ಪುರಸಭೆ ಮುಖ್ಯಾಧಿಕಾರಿ ಡಾ.ಸುಂದರ ರೋಗಿ ಮಾತನಾಡಿ ಪುರಸಭೆಯಿಂದ ಎನ್.ಓ.ಸಿ ಗಳನ್ನು ನೀಡಲಾಗುವದು, ಜನರು ಗುಂಪು ಗಾರಿಕೆಗೆ ಅವಕಾಶ ಕಲ್ಪಿಸದೆ, ಯಾವುದೇ ದ್ವನಿರ್ವಕಗಳಾಗಲಿ ಹಾಗು ಸಿಡಿಮದ್ದುಗಳನ್ನು ಹಚ್ಚುವದಾಗಲಿ ಮಾಡಬಾರದು ಎಂದರು. ಗಣೇಶ ಉತ್ಸವ ಮಂಡಳಿಯ ಸೋಮು ಗವಣಾಳೆ ಮಾತನಾಡಿ, ದೇಶಕ್ಕ ಅಂಟಿ ಕೊಂಡಿರುವ ಕರೋನಾ ಪೀಡುಗು ತೋಲಗಿಸುವಲ್ಲಿ ಸಕಾರದೊದಿಗೆ ಸದಾ ಕೈ ಜೋಡಿಸುತ್ತೆವೆ. ಸಾಂಪ್ರದಾಯಿಕತೆ ಮಾತ್ರ ಈ ಬಾರಿಯ ಗಣೇಶ ಉತ್ಸವ ಸೀಮೀತ ಗೊಳಿಸಲಾಗುವದು ಎಂದು ಹೇಳಿದರು. ಈ ಸಂದರ್ಭದಲ್ಲಿ ಆರ್.ಟಿ.ಓ ಅಧಿಕಾರಿ, ಟ್ರಾಪೀಕ್ ಪೊಲೀಸ್ ಅಧಿಕಾರಿ, ಪಿ.ಎಸ್.ಐ ರಾಕೇಶ ಬಗಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.












