ಕೊರೊನಾ ವಾರಿಯರ್ಸ್ ಎಂದು ಕರೆಯುವ ಸರಕಾರ ಆಶಾ ಕಾರ್ಯಕರ್ತರನ್ನು ಕಡೆಗಣಿಸಿದೆ

ಹಾವೇರಿ: ಜಿಲ್ಲೆಯ ರಾಣೇಬೆನ್ನೂರ ಪಟ್ಟಣದಲ್ಲಿ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತರು ಎಐಟಿಯುಸಿ ನೇತೃತ್ವದಲ್ಲಿ ಬುಧವಾರ ನಗರದಲ್ಲಿ ಪ್ರತಿಭಟಿಸಿ ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಜೀವನವನ್ನು ಪಣವಾಗಿಟ್ಟು ಕೋವಿಡ್ ವಿರುದ್ಧ ಹೋರಾಟದಲ್ಲಿ ತೊಡಗಿಸಿಕೊಂಡಿದ್ದೇವೆ. ಆದರೆ ದುಡಿತಕ್ಕೆ ತಕ್ಕ ಪ್ರತಿಫಲವಿಲ್ಲದೆ ಅನಿಶ್ಚಿತ ವೇತನದಿಂದ ನಮ್ಮ ಜೀವನ ಹೈರಾಣಾಗಿದೆ. ಒಂದು ಕಡೆ ನಮ್ಮನು ಕೊರೊನಾ ವಾರಿಯರ್ಸ್ ಎಂದು ಕರೆಯುವ ಸರಕಾರ ಮತ್ತೊಂದೆಡೆ ನಮ್ಮ ವೇತನ ಹೆಚ್ಚಳಕ್ಕೆ ಯಾವುದೇ ಕ್ರಮ ಜರುಗಿಸದಿರುವುದು ದುಃಖದ ಸಂಗತಿಯಾಗಿದೆ. ಇನ್ನು ಮೇಲಾದರೂ ಕೇಂದ್ರ ಹಾಗೂ ರಾಜ್ಯ ಸರಕಾರಗಳು ನಮಗೆ ಮಾಸಿಕ 12 ಸಾವಿರ ಗೌರವ ಧನ ನಿಗದಿಪಡಿಸಬೇಕು, ಕೋವಿಡ್-19 ವಿರುದ್ಧ ಹೋರಾಟಕ್ಕೆ ಅಗತ್ಯ ರಕ್ಷಣಾ ಸಾಮಗ್ರಿಗಳನ್ನು ಒದಗಿಸಬೇಕು, ಆಗಾಗ ಎಲ್ಲಾ ಕಾರ್ಯಕರ್ತೆಯರಿಗೆ ಆರೋಗ್ಯ ತಪಾಸಣೆ ಮಾಡಿಸಿ ಪಾಸಿಟಿವ್ ಬಂದಿರುವವರಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡಬೇಕು ಸೇರಿದಂತೆ ಮುಂತಾದ ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಕವಿತಾ ಆನ್ವೇರಿ, ಎಚ್.ಎಸ್.ಪಾಟೀಲ, ಜೆ.ಪಿ.ಪೂಜಾರ, ರೇಣುಕಾ ಎಚ್.ಕೆ., ತ್ರೀವೇಣಿ, ಲಕ್ಷ್ಮೀ, ಗಾಯತ್ರಿ, ಹೂವಕ್ಕ, ಮಂಜುಳಾ, ಸುನೀತಾ, ಆಶಾ ದೇವರಡ್ಡಿ, ಹೊನ್ನಮ್ಮ ಪಾಟೀಲ, ರೇವತಿ ಚಿನ್ನಿಕಟ್ಟಿ, ಶೈಲಾ ಅಜ್ಜೇವಡಿಮಠ, ಲತಾ ಬ್ಯಾಡಗಿ, ಗರಿಬಲಿ ಕಲಕಣಿ, ನಿರ್ಮಲಾ ಮಠದ, ದ್ರಾಕ್ಷಾಯಣಿ ಬನ್ನೂರ, ಸುನಂದಮ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.

promotions

promotions

Read More Articles