ಡಾ.ಬಿ.ಆರ್. ಅಂಬೇಡ್ಕರ್ ಗೆ ಉಟೋಪಚಾರ ಮಾಡಿದ್ದ 95 ವರ್ಷದ ಸಿದ್ಧವ್ವ ಮೇತ್ರಿ ಇನ್ನಿಲ್ಲ

ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರು ಬೆಳಗಾವಿಗೆ ಬಂದಾಗ ಅವರನ್ನು ತಮ್ಮ ಮನೆಯಲ್ಲಿ ಇರಿಸಿಕೊಂಡು ಉಟೋಪಚಾರ ಮಾಡಿದ್ದ ಸಿದ್ಧವ್ವಮೇತ್ರಿ ಅವರ ನಿಧನಕ್ಕೆ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ಜಾರಕಿಹೊಳಿ‌ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. 

promotions

ಸಹಜ ಕಾಯಿಲೆಯಿಂದ ಬಳಲುತ್ತಿದ್ದ  ಸಿದ್ಧವ್ವಮೇತ್ರಿ ಇಂದು ಬೆಳಿಗ್ಗೆ ತಮ್ಮ ನಿವಾಸ ಬೆಳಗಾವಿ ನಗರದ ಕಂಗ್ರಾಳಿ ಗಲ್ಲಿಯಲ್ಲಿ ಸಿದ್ದವ್ವ ಕೊನೆಯುಸಿರೆಳೆದರು. ಅವರು95ವರ್ಷಗಳಸುದೀರ್ಘಜೀವನನಡೆಸಿದ್ದರು‌.1939ರಲ್ಲಿ ಬೆಳಗಾವಿಗೆ ಆಗಮಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್  ಅವರಿಗೆ ತಮ್ಮ ಮನೆಯಲ್ಲಿ ಉಳಿದುಕೊಳ್ಳಲು ಇವರು ಅವಕಾಶ ನೀಡಿದ್ದರು ಎಂದು ಸಚಿವರು ಸ್ಮರಿಸಿಕೊಂಡಿದ್ದಾರೆ.

promotions

ಅಂಬೇಡ್ಕರ್ ಅವರಿಗೆ ಇವರೇ ಅಡಿಗೆ ಮಾಡಿ ಊಟ‌ ಬಡಿಸುತ್ತಿದ್ದರು. ಇದರಿಂದ ತೀವ್ರ ಸಂತೋಷಗೊಂಡಿದ್ದ ಡಾ. ಅಂಬೇಡ್ಕರ್ ಅವರು, ನಿಮ್ಮಂಥಹಾ ಹೆಣ್ಣು ಮಕ್ಕಳು ವಿದ್ಯಾಭ್ಯಾಸ ಮಾಡಿ, ಸಮಾಜದಲ್ಲಿ ಬೆಳೆಯಬೇಕೆಂಬ ಸಲಹೆ ಮನ್ನಿಸಿ ತೀವ್ರ ಪ್ರಭಾವಿತಳಾಗಿದ್ದ ಸಿದ್ಧವ್ವ, ಜೀವಿತ ಅವಧಿಯಲ್ಲಿ ಅಂಬೇಡ್ಕರ್ ಸಿದ್ಧಾಂತದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು ಎಂದು ಸಚಿವ ರಮೇಶ್ ಜಾರಕಿಹೊಳಿ‌ ಸ್ಮರಿಸಿಕೊಂಡಿದ್ದಾರೆ.

ಇವರ ಆತ್ಮಕ್ಕೆ ಚಿರಶಾಂತಿ‌ ದೊರಕಲಿ‌ ಮತ್ತು ಇವರ ಕುಟುಂಬದ ಸದಸ್ಯರಿಗೆ ಮತ್ತು ಅಂಬೇಡ್ಕರ್ ಸಿದ್ಧಾಂತದ ಪ್ರಚಾರದಲ್ಲಿದ್ದ ಇವರ ತಂಡದವರಿಗೆ ಅಗಲಿಕೆಯ ನೋವು ಭರಿಸುವ ಶಕ್ತಿ ನೀಡಲೆಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ‌ ರಮೇಶ್ ಜಾರಕಿಹೊಳಿ‌  ತಮ್ಮಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

Read More Articles