ಅವ್ಯವಸ್ಥೆಯ ಆಗರವಾಗಿ, ಕುಡುಕರ ತಂಗುದಾಣಗಳಾಗಿ ಮಾರ್ಪಾಟ್ಟ ಬಸ್ ತಂಗುದಾಣ
- 31 Dec 2023 , 2:08 PM
- Belagavi
- 114
ಬೆಳಗಾವಿ: ಜಿಲ್ಲೆಯ ನಿಪ್ಪಾಣಿ ತಾಲ್ಲೂಕಿನ ವಿವಿಧ ಗ್ರಾಮಗಳ ಬಸ್ ನಿಲ್ದಾಣಗಳು ಅವ್ಯವಸ್ಥೆಯಿಂದ ಕೂಡಿವೆ. ಬಸ್ ತಂಗುದಾಣಗಳು ಕುಸಿದು ಬೀಳುವ ಹಂತದಲ್ಲಿದ್ದು ಗಳತಗಾ, ಭೋಜ್ ಕ್ರಾಸ್, ಕಸನಾಳ, ಬೊರಗಾಂವ ವಾಡಿ,ಧೋನವಾಡಿ, ಭಿಮಾಪೂರ ವಾಡಿ, ಚಿಂಚಣಿ, ಸೇರಿದಂತೆ ಗಿರಗಾವ್, ಶಿರಾಗಾವ, ಗಿರಗಾವವಾಡಿ, ನಾಗಝರಿಮಠ, ಜನವಾಡ ಕ್ರಾಸ್ ಮತ್ತು ನೇಜ್ ಕ್ರಾಸ್ ಸೇರಿ ಕೆಲ ಬಸ ತಂಗುದಾಣ ಗಳು ಸಂಪೂರ್ಣ ಶಿಥಿಲಗೊಂಡಿವೆ ಹಾಗೂ ಈ ಬಸ ತಂಗುದಾಣಗಳು ಸಂಪೂರ್ಣ ವಾಗಿ ಕುಡುಕರ ಅಡ್ಡೆ ಗಳಾಗಿದ್ದು. ಅನೈತಿಕ ಚಟುವಟಿಕೆಗಳ ಸ್ಥಳಗಳಾಗಿ ಮಾರ್ಪಟ್ಟಿವೆ. ಈ ತಂಗುದಾಣಗಳಲ್ಲಿ ಸಾರಾಯಿ ಪಾಕೆಟ್, ಪ್ಲಾಸ್ಟಿಕ್ ಗ್ಲಾಸ್, ನೀರಿನ ಬಾಟಲ್, ಸಾರಾಯಿ ಪಾವುಚ್ ಬಿದ್ದಿದ್ದರಿಂದ ಸಾರ್ವಜನಿಕರಿಗೆ ಮುಜುಗರ ಉಂಟಾಗುತ್ತಿದೆ. ರಾಜ್ಯ ಸಾರಿಗೆ ಸಂಸ್ಥೆ ಪ್ರತಿ ಗ್ರಾಮಗಳಲ್ಲಿ ಸುಸಜ್ಜಿತವಾದ ಬಸ್ ತಂಗುದಾಣ ನಿರ್ಮಿಸಿ ಕೊಡಲು ಮುಂದಾಗಬೇಕು. ಈಗಿರುವ ಬಸ್ ತಂಗುದಾಣಗಳನ್ನು ಸ್ವಚ್ಛತೆಯಿಂದಿಡ ಬೇಕು. ಅಲ್ಲದೆ ಕಡ್ಡಾಯವಾಗಿ ಶೌಚಗೃಹ ಮತ್ತು ನೀರಿನ ವ್ಯವಸ್ಥೆ ಕಲ್ಪಿಸಿಕೊಟ್ಟು ಗ್ರಾಮೀಣ ಜನರಿಗೆ ಅನುಕೂಲ ಮಾಡಿಕೊಡಬೇಕು ಈ ಕನಸು ಯಾವಾಗ ನನಸಾಗುತ್ತೆ ಗೊತ್ತಿಲ್ಲ ಎಂದು ಅಲ್ಲಿನ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.












