ಸಿಎಂ ಬಿಎಸ್​ವೈಗೆ ಕೊರೋನಾ ಪಾಸಿಟಿವ್​​ ಹಿನ್ನೆಲೆ ಪುತ್ರ ಬಿ.ವೈ ವಿಜಯೇಂದ್ರಗೆ ಸೆಲ್ಫ್ ಕ್ವಾರಂಟೈನ್

ಬೆಂಗಳೂರು: ಕೇಂದ್ರಗೃಹಸಚಿವಅಮಿತ್ ಶಾ, ತಮಿಳುನಾಡುರಾಜ್ಯಪಾಲಬನ್ವಾರಿಲಾಲ್ ಗೆ ಕೊರೋನಾದೃಢಪಟ್ಟಿರುವಬೆನ್ನಲ್ಲೇಸಿಎಂಯಡಿಯೂರಪ್ಪಅವರಿಗೂಕೊರೋನಾಸೋಂಕುದೃಢಪಟ್ಟಿದೆ. ನಿನ್ನೆ ಅವರು ತಮ್ಮ ಅಧಿಕೃತ ಟ್ವಿಟ್ಟರ್ ನಲ್ಲಿ ಈ ಬಗ್ಗೆ ಟ್ವಿಟ್ ಮಾಡಿ ಮಾಹಿತಿ ನೀಡಿದ್ದರು ನನಗೆ ಕೊರೊನಾ ಪಾಸಿಟಿವ್ ಬಂದಿದ್ದು , ಯಾವುದೇ ರೋಗ ಲಕ್ಷಣಗಳು ಇಲ್ಲದಿದದ್ದಿರು ಮುನ್ನೆಚ್ಚರಿಕೆಯ ದೃಷ್ಟಿಯಿಂದ ವೈದ್ಯರ ಸಲಹೆಯಂತೆ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ. ಕಳೆದ ಹಲವು ದಿನಗಳಿಂದ ನನ್ನ ಜೊತೆ ಸಂಪರ್ಕದಲ್ಲಿದ್ದವರು ತಪಾಸಣೆ ಮಾಡಿಸಿಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ. ನಗರದಹಳೆಮದ್ರಾಸ್ರಸ್ತೆಯಲ್ಲಿರುವಮಣಿಪಾಲ್ಆಸ್ಪತ್ರೆಯಲ್ಲಿದಾಖಲಾಗಿದ್ದಾರೆ. ಸದ್ಯಮಣಿಪಾಲ್ಆಸ್ಪತ್ರೆಬಳಿಯಾರುಬರದಂತೆಹೆಚ್ಚಿನಪೊಲೀಸ್ಭದ್ರತೆಒದಗಿಸಲಾಗಿದೆ. ಸಂಬಂಧಮಣಿಪಾಲ್ಯಡಿಯೂರಪ್ಪಅವರಆರೋಗ್ಯಸ್ಥಿರವಾಗಿದೆ. ಯಾರೊಬ್ಬರೂ ಆತಂಕ ಪಡುವ ಅಗತ್ಯವಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಇನ್ನು ಸಿಎಂ ಆರೋಗ್ಯದ ಬಗ್ಗೆ ಟ್ವಿಟ್ ಮಾಡಿರುವ ವಿಪಕ್ಷ ನಾಯಕ ಸಿದ್ಧರಾಮಯ್ಯ ಯಡಿಯೂರಪ್ಪನವರು ಬೇಗನೆ ಗುಣಮುಖರಾಗಿ ಬಂದು ಜನಪರ ಕೆಲಸಗಳಲ್ಲಿ ತೊಡಗಲಿ ಎಂದು ಹಾರೈಸಿದ್ದಾರೆ. ಜೊತೆಗೆ ಬಿಎಸ್ವೈ ಪುತ್ರ ವಿಜಯೇಂದ್ರ ಅವರು ಟ್ವೀಟ್ ಮಾಡಿದ್ದು ಮುಂಜಾಗರೂಕತೆ ದೃಷ್ಟಿಯಿಂದ ಪೂಜ್ಯ ತಂದೆಯವರು ನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದು, ಅವರಲ್ಲಿ ಯಾವುದೇ ರೋಗಲಕ್ಷಣಗಳಿಲ್ಲ. ಆರೋಗ್ಯಸ್ಥಿತಿ ಎಂದಿನಂತೆ ಸಹಜವಾಗಿದೆ. ತಜ್ಞ ವೈದ್ಯರುಗಳು ನಿರಂತರ ನಿಗಾ ವಹಿಸಿದ್ದಾರೆ. ಅಭಿಮಾನಿಗಳು, ಕಾರ್ಯಕರ್ತರು ಆತಂಕಗೊಳ್ಳಬೇಡಿ, ನೀವಿದ್ದಲ್ಲಿಂದಲೇ ಹಾರೈಸಿ. ನಾನು ಗೃಹ ಕ್ವಾರಂಟೈನ್ ನಲ್ಲಿ ಇರಲಿದ್ದೇನೆ. ಎಂದು ತಿಳಿಸಿದ್ದಾರೆ. ಇನ್ನು ಯಡಿಯೂರಪ್ಪ ಅವರು ಶೀಘ್ರವೇ ಗುಣಮುಖರಾಗಲಿ ಎಂದು ಸಂಪುಟದ ಸಹೋದ್ಯೋಗಿಗಳು ಹಾರೈಸಿದ್ದಾರೆ. ಇದೇ ರೀತಿ ಸಾಮಾಜಿಕ ಜಾಲತಾಣದಲ್ಲಿ ಯಡಿಯೂರಪ್ಪ ಅಭಿಮಾನಿಗಳು ಕೂಡ ತಮ್ಮ ಮೆಚ್ಚಿನ ನಾಯಕ ಶೀಘ್ರ ಗುಣಮುಖರಾಗಿ ಮತ್ತೆ ಜನಸೇವೆಗೆ ತೊಡಗಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ.

promotions

promotions

Read More Articles