ವಿಶೇಷಾಲಂಕಾರದಿಂದ ಕಂಗೊಳಿಸುತ್ತಿರುವ ರಾಮ ಜನ್ಮಭೂಮಿ : ಐತಿಹಾಸಿಕ ಕ್ಷಣ ಕಣ್ತುಂಬಿಕೊಳ್ಳಲು ಭಕ್ತರ ಕಾತುರ
- 15 Jan 2024 , 3:45 AM
- Uttarpradesh
- 105
ಅಯೋಧ್ಯೆ : ಸುಮಾರು 5 ದಶಕದ ಹೋರಾಟದ ಫಲವಾಗಿ ಇಂದು ರಾಮ ಜನ್ಮ ಭೂಮಿಯಾದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ನಡೆಯಲಿರುವ ಭೂಮಿಪೂಜೆ ಕಾರ್ಯಕ್ರಮವನ್ನು ಒಂದು ಮಹೋತ್ಸವದ ರೀತಿಯಲ್ಲಿ ದೇಶದ ಜನ ಸಂಭ್ರಮಿಸುತ್ತಿದ್ದು, ಈಗಾಗಲೇ ಹೂ, ತೋರಣ, ದೀಪ ಅಲಂಕಾರದಿಂದ ಅಯೋಧ್ಯೆ ನಗರ ವಿಶೇಷವಾಗಿ ಕಂಗೊಳಿಸುತ್ತಿದೆ. ಮಧ್ಯಾಹ್ನ 11:30 ರ ಸುಮಾರಿಗೆ ಸಲ್ಲುವ ಅಭಿಜಿತ್ ಮುಹೂರ್ತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಿದ್ದಾರೆ.


ಭೂಮಿಪೂಜೆ ಕಾರ್ಯಕ್ರಮದ ಯಶಸ್ಸಿಗಾಗಿ ದೇಶಾದ್ಯಂತ ಹಲವು ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಲಿದ್ದು. ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಈ ಸಂಬಂಧ ಎಲ್ಲ ದೇವಾಯಗಳಿಗೂ ಸೂಚನೆ ನೀಡಿದ್ದಾರೆ. ಖಾಸಗಿ ದೇವಾಲಯಗಳಲ್ಲೂ ಪೂಜೆ ನಡೆಸಬೇಕು ಎಂದು ಅವರು ಸುತ್ತೋಲೆಯಲ್ಲಿ ಹೇಳಿದ್ದಾರೆ. ಅಯೋಧ್ಯೆಯಲ್ಲಿ ಶಿಲಾನ್ಯಾಸ ನಡೆಯುವ ಸಂದರ್ಭದಲ್ಲೇ ದೇವಾಲಯಗಳಲ್ಲೂ ಪೂಜೆ ನಡೆಯಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.


ಅದರಂತೆ ಈಗಾಗಲೇ ಕರ್ನಾಟಕದಲ್ಲಿಯೂ ಕೂಡ ಹಲವು ದೇವಾಲಯಗಳಲ್ಲಿ ವಿಶೇಷ ಪೂಜೆ ಹೋಮ ಹವನ ನಡೆಯುತ್ತಿವೆ. ಕೊಪ್ಪಳದ ಅಂಜನಾದ್ರಿ ಬೆಟ್ಟದಲ್ಲಿ ವಿಶೇಷವಾಗಿ ಕೇಸರಿ ದ್ವಜ ದಿಂದ ಅಲಂಕರಿಸಿ ಹೋಮ-ಹವನಗಳನ್ನು ಮಾಡಿ ಸಂಭ್ರಮಿಸುತ್ತಿದ್ದಾರೆ.











