ದೇವಸ್ಥಾನಗಳ ಮೇಲೆ ಓಂ ಅಕ್ಷರದ ಕೇಸರಿ ಧ್ವಜ ರಾರಾಜಿಸಲಿದೆ : ಜಗದೀಶ ಕವಟಗೀಮಠ

ಚಿಕ್ಕೋಡಿ: ಶ್ರೀರಾಮ ಮಂದಿರ ನಿರ್ಮಾಣದ ಶಿಲಾನ್ಯಾಸಕ್ಕೆ ಶುರುವಾಗಿದೆ ಭಾರತೀಯರ ಮನ ಮನದಲ್ಲಿ ಹರ್ಷೋದ್ಧಾರ ಮನೆ ಮಾತಾಗಿದೆ ಪ್ರತಿಯೊಬ್ಬ ಹಿಂದೂ ಕಾತುರತೆಯಿಂದು ಕಾಯತ್ತಿರುವ ಐತಿಹಾಸಿಕ ರಾಮ ಜನ್ಮ ಮಂದಿರಕ್ಕೆ ಭೂಮಿಗೆ ಭೂಮಿ ಪುಜೆ ಹಾಗು ಶಿಲಾನ್ಯಾಸ ಇಂದು ನೆರವೇಲಿದೆ. ಚಿಕ್ಕೋಡಿ ಪಟ್ಟಣದಲ್ಲೂ ಹಾಗೂ ಪ್ರತಿ ಗ್ರಾಮ ಗ್ರಾಮಗಳಲ್ಲಿ ಧಾರ್ಮಿಕ ಸಂಭ್ರಮ ಮನೆ ಮಾಡಲಿದೆ. ಪ್ರತಿ ದೇವಸ್ಥಾನಕ್ಕೆ ಪುಜೇ ಹಾಗು ದೇವಸ್ಥಾನಗಳ ಮೇಲೆ ಓಂ ಅಕ್ಷರದ ಕೇಸರಿ ಧ್ವಜ ರಾರಾಜಿಸಲಿದೆ ಎಂದು ಪುರಸಬೆ ಸದಸ್ಯ ಜಗದೀಶ ಕವಟಗೀಮಠ ಹೇಳಿದರು.

promotions

ಚಿಕ್ಕೋಡಿ ಪಟ್ಟಣದ ಸಿ.ಎಲ್.ಇ ಆಡಳಿತ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪುರಸಬೆ ಸದಸ್ಯ ಜಗದೀಶ ಕವಟಗೀಮಠ ಅವರು ಮಾತನಾಡಿ ದೇಶದ ಪ್ರಧಾನಿ ಹಾಗು ಮಹಾನ ಸಾದು ಸಂತರ ಅಮೃತ ಹಸ್ತದಿಂದ ಶಿಲಾನ್ಯಾಸಕ್ಕೆ ಚಾಲಣೆ ದೊರೆಯಲಿದೆ ದೀಪಾವಳಿ ಯಂತೆ ಸಂಭ್ರಮದಿಂದ ದೇಶವ್ಯಾಪ್ತಿ ಜನರು ಸಂಭ್ರಮಿಸುತ್ತಿದ್ದಾರೆ ನಗರದ ಎಲ್ಲಾ ದೇವಸ್ಥಾನಗಳಲ್ಲಿ ಪುಜೇಗಳು ನೇರವೇರಲಿದೆ. ಪ್ರತಿ ದೇವಸ್ಥಾನಗಳ ಮೇಲೆ ಓಂ ಅಕ್ಷರದ ಧ್ವಜ ರಾರಾಜಿಸಲಿವೆ ಹಾಗು ಪ್ರತಿ ಮನೆಗಳ ಮುಂದೆ ಸಾಯಂಕಾಲ ಬಣ್ಣದ ರಂಗೋಲಿ ಹಾಗು ದೀಪಗಳು ಬೆಳಗಲಿವೆ ಎಂದರು. ಈ ಸಂಧರ್ಭದಲ್ಲಿ ಸಂಜಯ ಕವಟಗೀಮಠ ಹಾಗೂ ಪುರಸಭೆ ಸದಸ್ಯರು,ಇತರರು ಉಪಸ್ಥಿತರಿದ್ದರು .

promotions

Read More Articles