ಮತ್ತೆ ಶುರುವಾದ ವರುಣನ ಆರ್ಭಟ ಜನರಲ್ಲಿ ಹೆಚ್ಚಿದ ಪ್ರವಾಹ ಭಿತಿ

ಬೆಳಗಾವಿ: ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ, ಮಲ್ಲ ಪ್ರಭಾ ನದಿಯ ನೀರಿನ ಮಟ್ಟ ಹೆಚ್ಚಾಗುತ್ತಿದೆ .ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಬಾರಿ ಮಳೆಯಿಂದ ಜಿಲ್ಲೆಯ ಖಾನಾಪುರ ತಾಲೂಕಿನ ಮಲಪ್ರಭಾ ನದಿಗೆ ಹರಿದು ಬರುತ್ತಿರುವ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಇದರಿಂದ ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರೈಲು ಮಾರ್ಗದಲ್ಲಿ ಗುಡ್ಡ ಕುಸಿತದ ಪರಿಣಾಮ ನಿಜಾಮುದ್ದೀನ್ ದಿಂದ ವಾಸ್ಕೋಡಗಾಮ ಎಕ್ಸಪ್ರೆಸ್ ರೈಲು ಎಂಜಿನ್ ಮೇಲೆ ಗುಡ್ಡ ಕುಸಿತವಾಗಿದೆ ಈ ಘಟನೆ ಕ್ಯಾಸರ್ಲೊಕ್ ದಿಂದ ಕರಂಜೋಲ್ ರೈಲ್ವೆ ಸ್ಟೇಷನ್ ನಡುವೆ ಸಂಭವಿಸಿದೆ.

promotions

ಜಾಂಬೋಟಿ ಹತ್ತಿರದ ಹೆಬ್ಬಾನಟ್ಟಿ ಗ್ರಾಮದ ಹನುಮಾನ ಮಂದಿರ ಜಲಾವೃತ ವಾಗಿದೆ ಮಲಪ್ರಭಾ ನದಿಯ ಮಧ್ಯ ಭಾಗದಲ್ಲಿ ಇರುವ ಪ್ರಸಿದ್ಧ ಹನುಮಾನ್ ಮಂದಿರ ಸಂಪೂರ್ಣ ಮುಳುಗಡೆ ಯಾಗಿದ್ದು ಹಾಗೂ ಸವದತ್ತಿ ತಾಲೂಕಿನ ಇನಾಹೋಂಹಲ್ ಸೇತುವೆ ಸಂಪೂರ್ಣ ಮುಳುಗಡೆ ಯಾಗಿದೆ ಸವದತ್ತಿ ಹಾಗೂ ಧಾರವಾಡ ನಡುವಿನ ಸಂಪರ್ಕ ಕಡಿತವಾಗಿದೆ. ಇದರಿಂದ ನದಿಪಾತ್ರದ ಜನರು ಪ್ರವಾಹ ಭೀತಿ ಎದುರಿಸುತ್ತಿದ್ದಾರೆ. ಎಲ್ಲೆಡೆ ಧಾರಾಕಾರ ಮಳೆಯಾಗುತ್ತಿದ್ದು, ಗಡಿನಾಡು ಬೆಳಗಾವಿ ಹಾಗೂ ಗೋವಾ ಇಂದು ಧಾರಾಕಾರವಾಗಿ ಸುರಿಯುವತ್ತಿರುವ ಮಹಾಮಳೆಗೆ ಮಲೆನಾಡು ಪ್ರದೇಶದ ಜನರು ತತ್ತರಿಸಿದ್ದಾರೆ.

promotions

Read More Articles