<strong>ಹಾವೇರಿ</strong>: ರಾಣೇಬೆನ್ನೂರ ತಾಲೂಕಿನ ಕಾಕೋಳ ಗ್ರಾಮದ ನಿವಾಸಿ, ತಾಪಂ ಮಾಜಿ ಸದಸ್ಯ, ಕೆಸಿಸಿ ಬ್ಯಾಂಕ್ ಹಾಲಿ ನಿರ್ದೇಶಕ ಬಸನಗೌಡ ಈಶ್ವರಗೌಡ ಪಾಟೀಲ (65) ಮಂಗಳವಾರ ರಾತ್ರಿ ನಿಧನರಾದರು. ಇವರಿಗೆ ಪತ್ನಿ, ಒಬ್ಬ ಪುತ್ರಿ, ಒಬ್ಬ ಪುತ್ರಿ ಇದ್ದಾರೆ. ಮೃತರ ನಿಧನಕ್ಕೆ ವಿಧಾನಸಭೆ ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ, ಶಾಸಕ ಅರುಣಕುಮಾರ ಪೂಜಾರ, ಎಪಿಎಂಸಿ ಮಾಜಿ ಅಧ್ಯಕ್ಷ,ಪಿಕೆಕೆ ಇನಿಷಿಯೇಟಿವ್ಸ್ ಅಧ್ಯಕ್ಷ ಪ್ರಕಾಶ ಕೋಳಿವಾಡ, ಮಂಜನಗೌಡ ಪಾಟೀಲ, ಜಿಪಂ ಮಾಜಿ ಸದಸ್ಯ ಸಂತೋಷಕುಮಾರ ಪಾಟೀಲ, ಜಿಪಂ ಸದಸ್ಯ ಏಕನಾಥ ಭಾನುವಳ್ಳಿ ಹಾಗೂ ಇತರರು ತೀವ್ರ ಸಂತಾಪ ಸೂಚಿಸಿದ್ದಾರೆ.