ಐ.ಸಿ.ಎ.ಆರ್ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ : ಪ್ರಗತಿಪರ ರೈತರಿಗೆ ತೊಗರಿ ಬೆಳೆಯ ಬಗ್ಗೆ ಮಾಹಿತಿ ಹಂಚಿಕೆ

  • 15 Jan 2024 , 1:49 AM
  • Haveri
  • 206

ರಾಣೇಬೆನ್ನೂರ : ತಾಲೂಕಿನ ಹನುಮನಮಟ್ಟಿಯ ಐ.ಸಿ.ಎ.ಆರ್ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಹಿರೇಕೆರೂರಿನ ಯಡಗೋಡಿ ಗ್ರಾಮದ ಪ್ರಗತಿಪರ ರೈತ ಬಸನಗೌಡ ಗಂಗಪ್ಪಳವರ ಜಮೀನಿಗೆ ಬೇಟಿ ನೀಡಿ, ತೊಗರಿಯಲ್ಲಿ ಕುಡಿ ಚಿವುಟಿಕೆಯ ಪ್ರಾತ್ಯಕ್ಷತೆ ಮತ್ತು ಮೊಗ್ಗು ಹೂ ಉದುರುವುದಕ್ಕೆ ಪರಿಹಾರದ ಕುರಿತು ಮಾಹಿತಿ ನೀಡಲಾಯಿತು. ರೈತ ಬಸನಗೌಡ ಗಂಗಪ್ಪಳವರ 3 ಎಕರೆ ಹೊಲದಲ್ಲಿ ತೊಗರಿಯ ತಳಿಯಾದ ಜೊತೆಯಲ್ಲಿ ಅಂತರ ಬೆಳೆಗಳಾಗಿ ನವಣೆ ಮತ್ತು ಸಾಮೆಯನ್ನು ಬೆಳೆದಿದ್ದಾರೆ. ಈ ಕುರಿತು ಮಾತನಾಡಿದ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಅಶೋಕ ಪಿ, ಜಿಲ್ಲೆಯಲ್ಲಿ ತೊಗರಿ ಬೆಳೆಯು ದ್ವಿದಳ ಧಾನ್ಯಗಳ ಇತ್ತೀಚೆಗೆ ಏಕ ಬೆಳೆ ಹಾಗೂ ಅಂತರ ಬೆಳೆಗಳ ಜೊತೆಯಲ್ಲಿ ಬೆಳೆಯುತಿದ್ದು, ಮಣ್ಣಿನ ಫಲವತ್ತತೆಗೂ ಹಾಗೂ ಪೋಷಕಾಂಶಗಳ ಒಳಗೊಂಡಿದೆ. ಬಡವರ ಬಾಡು ಎಂದು ಕರೆಯಲ್ಪಡುವ ದ್ವಿದಳ ಧಾನ್ಯಗಳ ಪ್ರಾಮುಖ್ಯತೆಯನ್ನು ಕಂಡುಕೊಂಡಿದೆ.

promotions

ಹಲವಾರು ದೇಶ, ಗ್ರಾಹಕ, ಆಹಾರ ಉದ್ಯಮಗಳಲ್ಲಿ ದ್ವಿದಳ ಧಾನ್ಯಗಳ ಮಹತ್ವ ಹೊಂದಿದೆ. ಅದರ ಗುಣವಿಶೇಷಗಳು, ಆಹಾರಕ್ಕೆ ಸಂಬಂಧಿಸಿದ ಪರಿಹಾರಗಳನ್ನು ಒದಗಿಸುವ ಶಕ್ತಿ ದ್ವಿದಳ ಧಾನ್ಯಗಳಿಗಿವೆ ಎಂಬ ಜ್ಞಾನ ಕುಂಠಿತವಾಗಿದೆ. ದ್ವಿದಳ ಧಾನ್ಯ ವರ್ಗದ ರೈತಮಿತ್ರರು ಬೆಳೆಯುವ ಬೆಳೆಯಾಗಿದ್ದು, ಶೇಕಡ 70ರಷ್ಟು ದ್ವಿದಳ ಧಾನ್ಯಗಳು ಅಭಿವೃದ್ಧಿ ಹೊಂದಿದ ದೇಶಗಳಿಂದ ಬರುತ್ತಿದೆ. ಭಾರತ 18.30 ಮಿಲಿಯನ್ ಟನ್ ಉತ್ಪಾದಿಸುತ್ತಿದ್ದು, ಇಂದಿನ ಜನಸಂಖ್ಯೆಗೆ ಬೇಕಾದ ಪ್ರಮಾಣವನ್ನು ಅಂದರೆ 22.45 ಮಿಲಿಯನ್ ಟನ್‍ನಷ್ಟು ಧಾನ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದೆ. ಪ್ರಪಂಚದಲ್ಲಿ ಭಾರತವು ಅತೀ ಹೆಚ್ಚು ಉತ್ಪಾದಿಸುವ ದೇಶವಾಗಿದ್ದರೂ ಹೆಚ್ಚು ದ್ವಿದಳ ಧಾನ್ಯಗಳನ್ನು ಆಮದು ಮಾಡಿಕೊಳ್ಳುವ ದೇಶವಾಗಿದೆ. ಕರ್ನಾಟಕದಲ್ಲಿ 24.32 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಿದ್ದು, 15.24 ಮಿಲಿಯನ್ ಟನ್ ಉತ್ಪಾದನೆ, 630 ಕೆ.ಜಿ/ಹೆಕ್ಟೇರ್ ಉತ್ಪಾದಕತೆಯಷ್ಟೆ ಆಗುತ್ತಿರುವುದರಿಂದ ಇದರ ಉತ್ಪಾದನೆಯನ್ನು ಹೆಚ್ಚಿಸಿ ಆರೋಗ್ಯ ರಕ್ಷಣೆಯಲ್ಲಿ ಮುಂದಾಗಬೇಕು ಎಂದರು.

promotions

ಈ ತಳಿಯ ವಿಶೇಷತೆ ಅಂದರೆ ಇದು ದೀರ್ಘಾವಧಿ ತಳಿಯಾಗಿದ್ದರೂ ಸಹಿತ ಉತ್ತಮ ಇಳುವರಿ ಕೊಡುವ ಶಕ್ತಿ ಹೊಂದಿದೆ. ಬೆಳೆಯ ಅವಧಿ 190-200 ದಿವಸಗಳು, ಸಿಡಿ ರೋಗ ಮತ್ತು ಗೊಡ್ಡು ರೋಗಕ್ಕೆ ನಿರೋದಕ ಶಕ್ತಿಯನ್ನು ಹೊಂದಿದೆ. ಬಿತ್ತನೆಯಾದ 45-50 ದಿನಗಳಲ್ಲಿ ಮೇಲಿನಿಂದ ಬೆಳೆಯುವ ಕುಡಿಯನ್ನು 5-6 ಸೆಂ.ಮೀ. ಚಿವುಟುವುದರಿಂದ ಅತಿ ಎತ್ತರ ಬೆಳೆಯುವುದನ್ನು ತಡೆದು ಹೆಚ್ಚಿನ ಸಂಖ್ಯೆಯಲ್ಲಿ ಕವಲೊಡೆದು ಕಾಯಿಗಳ ಸಂಖ್ಯೆ ಹೆಚ್ಚಾಗಿ ಇಳುವರಿ ಹೆಚ್ಚಾಗುತ್ತದೆ. ತೊಗರಿಯಲ್ಲಿ 75-80 ಮೊಗ್ಗು ಮತ್ತು ಹೂ ಉದುರುವುದು ಸ್ವಾಭಾವಿಕ, ಇದರಿಂದ ಇಳುವರಿ ಕಡಿಮೆಯಗುತ್ತದೆ. ಇಡಿಟಿಎ ರೂಪದ ಶೇ. 0.5 ಸತುವಿನ ಸಲ್ಪೇಟ್ ಮತ್ತು ಶೇ. 0.1 ಪೊಟ್ಯಾಶಿಯಂ ಮಾಲಿಬ್ಡೇಟ್ ಮತ್ತು ಶೇ. 0.2 ಬೋರಾಕ್ಸ್ ಮಿಶ್ರಣವನ್ನು ಹೂವಾಡುವ ಹಂತದಲ್ಲಿ ಎರಡುಬಾರಿ ಸಿಂಪರಣೆ (ಹತ್ತು ದಿನಗಳ ಅಂತರದಲ್ಲಿ) ಮಾಡಬೇಕು ಎಂದರು. ತೊಗರಿಯಲ್ಲಿ ಮೊಗ್ಗು ಮತ್ತು ಹೂ ಉದುರುವುದಕ್ಕೆ ಅನೇಕ ಕಾರಣಗಳಿದ್ದು ಅವುಗಳಲ್ಲಿ ಸತತವಾಗಿ ಮೋಡ ಕವಿದ ವಾತಾವರಣ ಹಾಗೂ ಮಂಜು ಬೀಳುವ ಕಾರಣ, ಸಸ್ಯ ಪ್ರಚೋದಕಗಳ ಉತ್ಪಾದನೆಗಳಲ್ಲಿ ಏರುಪೇರಾಗುವುದು ಮತ್ತು ಸರ್ಕೋಸ್ಪೋರಾ ಎಲೆ ಚಿಕ್ಕೆ ರೋಗ ಉಲ್ಬಣವಾಗುತ್ತದೆ.

ಇದರ ನಿರ್ವಹಣೆಗಾಗಿ ನ್ಯಾಫ್ತಲೀನ್ ಅಸಿಟಿಕ್ ಆಸಿಡ್ 4.5% ಎಸ್. ಎಲ್. ಸಸ್ಯ ಪ್ರಚೋದಕ (0.5 ಮೀ.ಲೀ) ಮತ್ತು ಕಾರ್ಬನ್‍ಡೈಜಿಮ್ ಶಿಲೀಂದ್ರನಾಶಕವನ್ನು (1 ಗ್ರಾಂ.ಲೀ),ತೊಗರಿ ಕಾಯಿ ಕೊರಕಕ್ಕೆ ಶಿಫಾರಸ್ಸು ಮಾಡಿದಂತಹ ಕೀಟ ನಾಶಕಗಳ ಜೊತೆ ಬೆರೆಸಿ ಎಲೆಚುಕ್ಕೆ ರೋಗದ ಲಕ್ಷಣ ಕಂಡ ಕೂಡಲೆ ಅಥವಾ ಸಂಪೂರ್ಣವಾಗಿ ಹೂ ಬಿಟ್ಟಾಗ 10-15 ದಿವಸಗಳ ಅಂತರದಲ್ಲಿ ಎರಡು ಸಲ ಸಿಂಪಡಿಸಬೇಕು. ಪ್ರತಿ ಲೀಟರ್ ನೀರಿಗೆ 10 ಗ್ರಾಂ ಪಲ್ಸ್ ಮ್ಯಾಜಿಕ್ ಬೆರೆಸಿ, ಶೇ. 50 ರಷ್ಟು ಹೂವಾಡುವಾಗ ಹಾಗೂ 15 ದಿನಗಳ ನಂತರ ಸಿಂಪಡಿಸಬೇಕು ಎಂದು ವಿವರಿಸಿದರು. ತೋಟಗಾರಿಕೆ ವಿಜ್ಞಾನಿ ಡಾ. ಸಂತೋಷ ಹೆಚ್.ಎಮ್ ಇದ್ದರು.

Read More Articles