ವಿಶ್ವ ಹಿಂದೂಪರಿಷತ್ ಮತ್ತು ಭಜರಂಗದಳದ ವತಿಯಿಂದ ಕರಸೇವಕರಿಗೆ ಸನ್ಮಾನ

ರಾಣೇಬೆನ್ನೂರ : ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರಕ್ಕೆ ಭೂಮಿ ಪೂಜೆ ನಡೆಯುತ್ತಿರುವ ಹಿನ್ನೆಲೆ ಬುಧವಾರ ನಗರದ ಪೊಸ್ಟ್ ಸರ್ಕಲ್ ಬಳಿ ಇಲ್ಲಿನ ವಿಶ್ವ ಹಿಂದೂಪರಿಷತ್ ಮತ್ತು ಭಜರಂಗದಳದ ವತಿಯಿಂದ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸ್ಥಳೀಯ ಐವರು ಕರ ಸೇವಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಮಯದಲ್ಲಿ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಕೋಟ್ಯಾಂತರ ಹಿಂದುಗಳ ಕನಸು ಇಂದು ನನಸಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣಕರ್ತರಾದ ಎಲ್.ಕೆ.ಅದ್ವಾಣಿ, ಉಮಾಭಾರತಿ, ಮುರಳಿ ಮನೋಹರ ಜೋಶಿ, ಪ್ರಧಾನಿ ಮೋದಿ ಇವರುಗಳಿಗೆ ಭಾರತೀಯರೆಲ್ಲರೂ ಅಭಾರಿಯಾಗಿದ್ದಾರೆ. ಇದಲ್ಲದೆ ರಾಮ ಜನ್ಮಭೂಮಿ ಹೋರಾಟಕ್ಕಾಗಿ ಜೀವ ತೆತ್ತವರ ಆತ್ಮಕ್ಕೆ ಶಾಂತಿ ದೊರಕಿದಂತಾಗಿದೆ. ಮುಂದಿನ ದಿನಗಳಲ್ಲಿ ಭವ್ಯ ಮಂದಿರ ನಿರ್ಮಾಣದ ಜತೆ ದೇಶದಲ್ಲಿ ರಾಮರಾಜ್ಯ ಸ್ಥಾಪನೆಯಾಗಲಿದೆ ಎಂದರು. ಕರ ಸೇವಕರುಗಳಾದ ಪ್ರಕಾಶ ಹಿರೇಮಠ, ಜಗದೀಶ ಕಾಕೋಳ, ಶಿವಪ್ರಕಾಶ ಚಿನ್ನಿಕಟ್ಟಿ, ಉಮೇಶ ಹರಿಭಟ್ಟ ಸನ್ಮಾನಿಸಿ ಗೌರವಿಸಲಾಯಿತು.

promotions

ವಿಶ್ವ ಹಿಂದು ಪರಿಷತ್‍ನ ಅಜೇಯ ಮಠದ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪವನಕುಮಾರ ಮಲ್ಲಾಡದ, ಡಾ.ಬಸವರಾಜ ಕೇಲಗಾರ, ರಮೇಶ ಗುತ್ತಲ, ಮೈಲಪ್ಪ ಗೋಣಿಬಸಮ್ಮನವರ, ಮಂಜುನಾಥ ಓಲೇಕಾರ, ಅನಿಲ ಸಿದ್ದಾಳಿ, ಪ್ರವೀಣ ಇಂಡಿಗೇರಿ, ಪವನ ಮಲ್ಲಾಡದ, ಸುಭಾಸ ಸಿರಿಗೇರಿ, ಮಂಜುಳಾ ಹತ್ತಿ, ಭಾರತಿ ಜಂಬಗಿ ಮತ್ತಿತರರಿದ್ದರು.

promotions

ನಗರದಲ್ಲಿ ಪೂಜೆ, ಸನ್ಮಾನ್ಯ ಹಾಗೂ ಸಿಹಿ ಹಂಚಿಕೆ ಶಾಸಕ ಅರುಣಕುಮಾರ ಪೂಜಾರ ನೇತೃತ್ವದಲ್ಲಿ ಇಲ್ಲಿಯ ವಿನಾಯಕ ದೇವಸ್ಥಾನದಲ್ಲಿ ಶ್ರೀರಾಮ ಸೇನೆ ವತಿಯಿಂದ ಶ್ರೀರಾಮ, ಲಕ್ಷಣ, ಸೀತಾ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು ಹಾಗೂ ರೋಟರಿ ಶಾಲೆಯ ಬಳಿಯಿರುವ ಶ್ರೀ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮಾರುತಿ ನಗರದ ಶ್ರೀರಾಮ ಮಂದಿರದಲ್ಲಿ ಪೂಜೆ ನೆರವೇರಿಸಿದರು. ನಂತರ ಬಿಜೆಪಿ ವತಿಯಿಂದ ಪಕ್ಷದ ಕಾರ್ಯಾಲಯದಲ್ಲಿ ಕರ ಸೇವಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಇನ್ನೂ ಪಿ.ಬಿ. ರಸ್ತೆಯ ಕೆ.ಕೆ.ಟವರ್ಸ್‍ನ ಮುಂಬಾಗ ಶ್ರೀನಿವಾಸ ಹಳ್ಳಳ್ಳಿ ಹಮ್ಮಿಕೊಂಡಿದ್ದ ಸಹಿ ಹಂಚು ಕಾರ್ಯಕ್ರಮದಲ್ಲಿ ಶಾಸಕರು ಭಾಗವಹಿಸಿ ಸಾರ್ವಜನಿಕರಿಗೆ ಸಿಹಿ ಹಂಚಲಾಯಿತು. ಇನ್ನೂಳಿದಂತೆ ಶ್ರೀ ರಾಮ ಸೇನೆ, ವಿಶ್ವ ಹಿಂದು ಪರಿಷತ್, ಭಜರಂಗ ದಳ ಸೇರಿ ವಿವಿಧ ಸಂಘ-ಸಂಸ್ಥೆಗಳಿಂದ ವಿವಿಧೆಡೆ ಶ್ರೀರಾಮ ದೇವರಿಗೆ ಪೂಜೆ ಸಲ್ಲಿಸಿದರು.

Read More Articles