ಹಿಡಕಲ್ ಜಲಾಶಯದಿಂದ ಯಾವುದೇ ಕ್ಣಣದಲ್ಲಿ ನೀರು ಬಿಡುವ ಸಾದ್ಯತೆ! ನದಿ ಪಾತ್ರದ ಜನರು ಎಚ್ಚರ; ಪ್ರಕಟಣೆ

ಬೆಳಗಾವಿ: ಹಿಡಕಲ್ (ಘಟಪ್ರಭಾ) ಜಲಾಶಯದ ಪ್ರದೇಶದಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿರುವದರಿಂದ ಹಿಡಕಲ್ ಜಲಾಶಯಕ್ಕೆ ಬಾರಿ ಪ್ರಮಾಣದ ನೀರು ಹರಿದು ಬರುತ್ತಿದೆ ಹಾಗೂ ಒಳ ಹರಿವಿನ ಪ್ರಮಾಣವು ಸಹಾ ಹೆಚ್ಚಾಗಿದೆ. ಇದರಿಂದ ಶೇಕಡಾ 80 ರಷ್ಟು  ಜಲಾಶಯ ಭರ್ತಿ ಯಾಗುವ ಸಾದ್ಯತೆ ಹೆಚ್ಚಾಗಿದೆ ಹಿಡಕಲ್ ಜಲಾಶಯಕ್ಕೆ ಬರುವ ನೀರಿನ ಪ್ರಮಾಣ ಹೀಗೆ ಹೆಚ್ವಾದರೆ ಹಾಗೂ ಇದೇ ರೀತಿ ಮುಂದುವರಿದರೆ ಜಲಾಶಯದ ಪ್ರಮುಕ ಕ್ರಸ್ಟ್ ಗೇಟ್ ಗಳ ಮೂಲಕ ಯಾವುದೇ ಕ್ಷಣದಲ್ಲಿ ಘಟಪ್ರಭಾ ನದಿಗೆ ನೀರು ಹರಿ ಬಿಡಲಾಗುವದು ಎಂದು ನದಿ ಪಾತ್ರದ ಜನರನ್ನು ಎಚ್ಚರಿಸಲಾಗಿದೆ.

promotions

ಮತ್ತೊಂದೆಡೆ ಘಟಪ್ರಭಾ ನಧಿಗೆ ಸೇರುವ ಹಿರಣ್ಯಕೇಶಿ ನದಿಯು ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಆದ್ದರಿಂದ ಘಟಪ್ರಭಾ ಹಾಗೂ ಹಿರಣ್ಯಕೇಶಿ ನದಿಯ  ದಡದಲ್ಲಿ ಬರುವ ಎಲ್ಲ ಗ್ರಾಮಗಳ ಗ್ರಾಮಸ್ಥರು ಹಾಗೂ ತಮ್ಮ ಜಾನುವಾರುಗಳ ಸಮೇತ ನದಿಯ ಪಾತ್ರ ದಿಂದ ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ಹಿಡಕಲ್ ಜಲಾಶಯದ ಹಾಗೂ ಕರ್ನಾಟಕ ನೀರಾವರಿ ನಿಗಮ ಅಧೀಕ್ಷಕ ಅಭಿಯಂತರ ಆರ್ಬಿರಾಮಣ್ಣನವರ ಈ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

promotions

Read More Articles