ಕೋವಿಡ್ ಹಿನ್ನಲೆ ಡಯಾಲಿಸಸ್ ಘಟಕ ಬಂದ್ ರೋಗಿಗಳ ಪರದಾಟ

  • 15 Jan 2024 , 2:33 AM
  • Haveri
  • 191

ಹಾವೇರಿ: ಜಿಲ್ಲೆಯ ರಾಣೇಬೆನ್ನೂರ ತಾಲೂಕಿನಲ್ಲಿ ಕಳೆದ ಮೂರು ತಿಂಗಳಿಂದ ಕೋರೋನ್ ಮಹಾಮಾರಿ ವೈರಸ್‍ನಿಂದಾಗಿ ಸಾಕಷ್ಟು ಜನರು ಪ್ರಾಣವನ್ನು ಕಳೆದುಕೊಂಡರೇ ಇನ್ನೂ ಕೆಲವರ ಬದುಕನ್ನೆ ಕಿತ್ತುಕೊಂಡಿದೆ. ಆದರೇ ಈಗ ತಾಲೂಕಿನ ಡಯಾಲಿಸಸ್ ಮೂತ್ರಪಿಂಡ (ಕಿಡ್ನಿ) ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೂ ಕೋವಿಡ್‍ನಿಂದಾಗಿ ಸಮಸ್ಯೆ ಎದುರಾಗಿದೆ. ನಗರ ಸೇರಿ ತಾಲೂಕಿನಲ್ಲಿ 13 ಜನ ರೋಗಿಗಳು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಇಲ್ಲಿಯ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿರುವ ಡಯಾಲಿಸಸ್ ಘಟಕದಲ್ಲಿಯೇ ಇಲ್ಲಿಯವರಿಗೂ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರೂ. ಆದರೇ ಈಗ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್-19 ರೋಗಿಗಳ ಚಿಕಿತ್ಸೆಗಾಗಿ ಬೆಡ್‍ಗಳನ್ನು ನಿರ್ಮಿಸಲಾಗಿದ ಕಾರಣ ಕೋವಿಡ್ ವಾರ್ಡ್‍ಗಳನ್ನು ದಾಟಿಕೊಂಡು ಡಯಾಲಿಸಸ್ ಘಟಕಕ್ಕೆ ಹೋಗಬೇಕು. ಇದರಿಂದ ಬೇರೆಯವರಿಗೆ ಸೋಂಕು ಹರಡಬಾರದು ಎಂಬ ಕಾರಣಕ್ಕೆ ವೈದ್ಯರು, ಡಯಾಲಿಸಸ್ ಘಟಕವನ್ನು ಬಂದ್ ಮಾಡಿದ್ದಾರೆ. ಇದರಿಂದಾಗಿ ಡಯಾಲಿಸಸ್ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

promotions

ಆದರೇ ಈಗ ವೈದ್ಯರು ಘಟಕವನ್ನು ಸಂಪೂರ್ಣ ಬಂದ ಮಾಡಿದ್ದು, ರೋಗಿಗಳಿಗೆ ಡಯಾಲಿಸಸ್‍ಗಾಗಿ ಹಿರೇಕೆರೂರ ಅಥವಾ ಬ್ಯಾಡಗಿ ತಾಲೂಕು ಆಸ್ಪತ್ರೆ ತೆರಳುವಂತೆ ಸೂಚಿಸಿದ್ದಾರೆ. ಇದರಿಂದಾಗಿ ರೋಗಿಗಳು ಡಯಾಲಿಸಸ್ ಮಾಡಿಸುವುದೇ ಪ್ರತಿ ನಿತ್ಯದ ಕೆಲಸವಾಗಿ ಬಿಟ್ಟಿದೆ. ರೋಗಿಗಳ ಮಾತು ಏನು? ಅನ್ನು ಪ್ರಶ್ನೆ ಯಾವುದೇ ಆಸ್ಪತ್ರೆ ಒಳಭಾಗದಿಂದ ಹೋದರೆ ಕೋವಿಡ್ ವಾರ್ಡ್‍ಗಳು ಸಿಗುತ್ತದೆ. ಬದಲಾಗಿ ಆಸ್ಪತ್ರೆಯ ಬಲ ಬದಿಯಿಂದ ತೆರಳಿದರೆ, ನೇರವಾಗಿ ಡಯಾಲಿಸಸ್ ಘಟಕ ತಲುಪುತ್ತೇವೆ. ಆದ್ದರಿಂದ ನಮಗೆ ಆಸ್ಪತ್ರೆಯ ಬಲ ಬದಿಯಲ್ಲಿ ಡಯಾಲಿಸಸ್ ಘಟಕ್ಕೆ ಬಾಗಿಲು ನಿರ್ಮಿಸಿ ದಾರಿ ಮಾಡಿಕೊಡಿ ಎಂದು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳು ವೈದ್ಯರಿಗೆ ಒತ್ತಾಯ ಮಾಡಿದ್ದಾರೆ. ಈ ಬಗ್ಗೆ ತಿಂಗಳು ಕಳೆದರೂ ವೈದ್ಯರು ಮಾತ್ರ ಇಂದು-ನಾಳೆ ಎಂದು ದಿನಗಳನ್ನು ದುಡುತ್ತಿದ್ದಾರೆ ಹೊರತು ರೋಗಿಗಳ ಸಮಸ್ಯೆಗೆ ಸಂದ್ಪಿಸುತ್ತಿಲ್ಲ ಎಂದು ರೋಗಿಗಳು ಆರೋಪಿಸಿದರು.

promotions

Read More Articles