ಬಿದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಆಗ್ರಹ
- 15 Jan 2024 , 1:01 AM
- Haveri
- 153
ಹಾವೇರಿ: ನಗರದ 29 ನೇ ವಾರ್ಡಿನಲ್ಲಿ ಬಿದಿ ನಾಯಿಗಳ ಹಾವಳಿಯನ್ನು ವಿಪರಿತವಾಗಿದೆ. ಇದು ತರಕಾರಿ ಮಾರುಕಟ್ಟೆಗೆ ಹೋಗುವ ಪ್ರಮುಖ ರಸ್ತೆ ಇದೆ ಇಲ್ಲಿ ಸಾರ್ವಜನಿಕರಿಗೆ ಬೀದಿ ನಾಯಿಗಳು ತೊಂದರೆ ಕೊಡುತ್ತಿದ್ದು, ಮಕ್ಕಳು ವೃದ್ದರು, ಭಯ ಬೀತರಾಗುತ್ತಿದ್ದಾರೆ, ವೃದ್ದರ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ ಘಟನೆಗಳು ಸಹ ನಡೆದಿದೆ ಕೂಡಲೇ ನಗರಸಭೆಯವರು ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸಬೇಕೆಂದು ನಗರಸಭೆಯ ಅಧಿಕಾರಿಗಳಿಗೆ ಕನ್ನಡ ಪರ ಹೋರಾಟಗಾರರಾದ ಶಾಹೀದ ದೇವಿಹೊಸುರ ಹಾಗೂ ನವೀದ ಅಮ್ಮಿನಭಾವಿ ಯುವ ಮುಖಂಡರ ನೇತೃತ್ವದಲ್ಲಿ ಸಾರ್ವಜನಿಕರು ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಹುಸೇನಸಾಬ ದೇವಿಹೊಸುರ ಮುಖಂಡರಾದ ಅತಾವುಲ್ಲಾ ಖಾಜಿ, ಇರ್ಷಾದ ಬಸನಾಳ, ಸೈಯದ ಶರೀಫ ನಾಲಬಂದ, ಮೈನುದ್ದೀನ ಮುಲ್ಲಾ, ಇತರರು ಉಪಸ್ಥಿತರಿದ್ದರು.












