ಶಿಕ್ಷಕರಿಗೆ ವರ್ಕ್ ಪ್ರಾಂ ಹೋಂ ಕರ್ತವ್ಯ ನಿರ್ವಹಿಸಲು ಶಿಫಾರಸ್ಸಿಗೆ ಆಗ್ರಹಿಸಿ ಮನವಿ
- 14 Jan 2024 , 10:05 PM
- Haveri
- 111
ಹಾವೇರಿ: ರಾಣೇಬೆನ್ನೂರ ತಾಲೂಕಿನಲ್ಲಿ ಕೊರೊನಾ ಮಾಹಾಮಾರಿ ದಿನೆದಿನೆ ವ್ಯಾಪಕವಾಗಿ ಎಲ್ಲೆಡೆ ಹರಡುತ್ತಿದೆ ಈಗಾಗಲೇ ತಾಲ್ಲೂಕಿನಲ್ಲಿ ಇಬ್ಬರ ಶಿಕ್ಷಕರನ್ನು ಕೊರೊನಾ ಬಲಿ ತೆಗೆದುಕೊಂಡು ಇನ್ನು ಅನೇಕರು ಗಂಟಲು ದ್ರವ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಕಾರಣ ಶಿಕ್ಷಕರಿಗೆ ಶಾಲಾ ಶೈಕ್ಷಣಿಕ ಚಟುವಟಿಕೆಗಳನ್ನು ವರ್ಕ್ ಪ್ರಾಂ ಹೋಂ ಕರ್ತವ್ಯ ನಿರ್ವಹಿಸಲು ಶಿಫಾರಸ್ಸು ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ಶಾಸಕ ಅರುಣಕುಮಾರ ಪೂಜಾರ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಶ್ರೀಧರ್ ಅವರಿಗೆ ಮನವಿ ಸಲ್ಲಿಸಿದರು.

ಕೊರೊನಾ ಸಮುದಾಯ ಹಂತಕ್ಕೆ ಹರಡಿದ್ದರಿಂದ ಶಿಕ್ಷಕರು ಗ್ರಾಮೀಣ ಪ್ರದೇಶಗಳಲ್ಲಿ ಯೋಜನೆಯನ್ನು ಅನುಷ್ಟಾನಕ್ಕೆ ತರಲು, ಪಾಲಕರು ತಮ್ಮ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಶಾಲೆಗೂ ಈ ಕಲಿಕಾ ಯೋಜನೆಗೂ ಸಹಕರಿಸುತ್ತಿಲ್ಲ ಸದ್ಯದ ಪರಿಸ್ಥಿತಿಯಲ್ಲಿ ಶಿಕ್ಷಕರ, ವಿದ್ಯಾರ್ಥಿಗಳ ಸಮುದಾಯದ ಎಲ್ಲರ ಆರೋಗ್ಯದ ಹಿತದೃಷ್ಟಿಯಿಂದ ಯಾವುದೇ ಶೈಕ್ಷಣಿಕ ಚಟುವಟಿಕೆಗಳನ್ನು ಜಾರಿಗೊಳಿಸಲು ಶಾಲಾ ಪ್ರದೇಶಗಳಲ್ಲಿ ಕಷ್ಟ ಸಾಧ್ಯ. ಅದಕ್ಕಾಗಿ ನಾವೆಲ್ಲರೂ ವರ್ಕ ಪ್ರಾಂ ಹೋಂ ನಿಂದಲೇ ಕರ್ತವ್ಯ ನಿರ್ವಹಿಸಲು ಸಿದ್ದರಿದ್ದೇವೆ. ಅದಕ್ಕೆ ಶಾಸಕರು ಅವಕಾಶ ಕಲ್ಪಿಸಲು ಶಾಸಕರು ಶಿಫಾರಸ್ಸು ಮಾಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ರವಿ ಗೋಣೆಪ್ಪನವರ, ಎಸ್.ಎಚ್. ಮೇಟಿ, ಎಂ.ಸಿ.ಬಲ್ಲೂರ, ಆರ್.ಡಿ. ಹೊಂಬರಡಿ, ಪ್ರಕಾಶ ಹೊಸಳ್ಳಿ, ಎಂ.ಎ ದಾರೂಗಾರ, ಎಸ್,ಜಿ. ಮಾಕಾಳ, ಎಸ್.ಎಂ. ಮಲ್ಲನಗೌಡ್ರ, ಅನ್ನಪೂರ್ಣ ಬಣಕಾರ, ಬಿ.ಜಿ.ಬಡಿಗೇರ, ಎಲ್.ಎಚ್. ಹನುಮರಡ್ಡೇರ, ರಾಜು ಎಮ್ಮೇರ ಸೇರಿದಂತೆ ಉಪಸ್ಥಿತರಿದ್ದರು.










