ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ರೈತನ ಮಗನ ಸಾಧನೆ ವಿಷ್ಣು ಮುತ್ನಾಳ 98%
- 15 Jan 2024 , 3:42 AM
- Belagavi
- 107
ಬೆಳಗಾವಿ: ರಾಜ್ಯದಲ್ಲಿ ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟವಾಗಿದ್ದು ರಾಜ್ಯದಲ್ಲಿ ಈ ಬಾರಿ ಕೊರೊನಾ ಮಧ್ಯವು ಉತ್ತಮ ಅಂಕಗಳನ್ನು ವಿದ್ಯಾರ್ಥಿಗಳು ಗಳಿಸಿದ್ದಾರೆ ಅದೇ ರೀತಿ ಬೆಳಗಾವಿ ಜಿಲ್ಲೆಯ ಎಂಕೆ ಹುಬ್ಬಳ್ಳಿ ಗ್ರಾಮದ ರೈತನ ಮಗನ ವಿಷ್ಣು ಶಶಿಧರ್ ಮುತ್ನಾಳ ಎಸ್‍ಎಸ್‍ಎಲ್‍ಸಿ ಯಲ್ಲಿ ಕಲ್ಲೇಶ್ವರ ಪ್ರೌಢ ಶಾಲೆಯ ವಿದ್ಯಾರ್ಥಿ 98% ಅಂಕಗಳಿಸುವ ಮೂಲಕ ಇಡೀ ಶಾಲೆಗೆ ಹೆಮ್ಮೆ ತಂದಿದ್ದಾರೆ .


ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕನ್ನಡ (125) ಇಂಗ್ಲಿಷ್ (96),ಹಿಂದಿ (100),ಗಣಿತ (97),ವಿಜ್ಞಾನ (100) ಸಮಾಜ ವಿಜ್ಞಾನ (96),ಅಂಕಗಳಿಸಿ 625 ಕ್ಕೆ 612 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಅವರ ತಂದೆ ಶಶಿಧರ ಮುತ್ನಾಳ ವೃತ್ತಿಯಲ್ಲಿ ವ್ಯವಸಾಯ ನಂಬಿದ್ದಾರೆ ತಾಯಿ ಮಂಜುಳಾ ಶಶಿಧರ ಮುತ್ನಾಳ ದಿನನಿತ್ಯ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದರು ಇಂತಹ ಕಡೂ ಬಡತನದಲ್ಲಿ ಚಲಬಿಡದೆ ದಿನನಿತ್ಯ ಅಭ್ಯಾಸ ಮಾಡಿ ಎಸ್‍ಎಸ್‍ಎಲ್‍ಸಿ ಉತ್ತಮ ಫಲಿತಾಂಶ ತಂದು ತಂದೆ ತಾಯಿಗೆ ಹೆಮ್ಮೆಯ ಮಗನಾಗಿದ್ದಾನೆ.










