ನದಿ ತೀರದ ಜನರು ಪ್ರವಾಹಕ್ಕೆ ಆತಂಕಗೊಳ್ಳುವ ಅವಶ್ಯಕತೆಯಿಲ್ಲ : ಜಿಲ್ಲಾಧಿಕಾರಿ ಎಂಜಿ ಹಿರೇಮಠ

ಬೆಳಗಾವಿ : ಜಿಲ್ಲೆಯಲ್ಲಿ ಎರಡು ದಿನಗಳಿಂದ ಮಳೆ ಪ್ರಮಾಣ ತೆಗ್ಗಿದ್ದರಿಂದ ಪ್ರವಾಹ ಪರಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ನದಿ ತೀರದ ಜನರು ಪ್ರವಾಹಕ್ಕೆ ಆತಂಕಗೊಳ್ಳುವ ಅವಶ್ಯಕತೆ ಇಲ್ಲ ಎಂದು ಬೆಳಗಾವಿ ಜಿಲ್ಲಾಧಿಕಾರಿ ಎಂಜಿ ಹಿರೇಮಠ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ರಾಜಾಪುರ ಡ್ಯಾಂ ಮತ್ತು ಧೂದ್‍ಗಂಗಾ ನದಿಯಿಂದ ಹರಿದು ಬರುತ್ತಿದ್ದ 1.62 ಸಾವಿರ ಕ್ಯೂಸೆಕ್ ನೀರಿನ ಮಟ್ಟ ಈಗಾಗಲೇ 1.26 ಸಾವಿರ ಕ್ಯೂಸೆಕ್ ಗೆ ಇಳಿಕೆಯಾಗಿದೆ. ಹಿಡಕಲ್ ಮತ್ತು ಆಲಮಟ್ಟಿ ಡ್ಯಾಂನ ನೀರಿನ ಮಟ್ಟ ಕೂಡ ಕಡಿಮೆಯಾಗಿದೆ. ಹಾಗೂ ಕೊಯ್ನಾ ಜಲಾಶಯದ ನೀರನ್ನು ತಡೆ ಹಿಡಿಯಲಾಗಿದೆ. ಆದರೂ ಜಿಲ್ಲಾಡಳಿತ ಎಲ್ಲ ರೀತಿಯ ಮುಂಜಾಗೃತೆಯನ್ನು ವಹಿಸುತ್ತಿದೆ ಎಂದು ತಿಳಿಸಿದರು. ಪ್ರವಾಹದ ಪರಿಸ್ಥಿತಿ ಸದ್ಯ ನಿಯಂತ್ರಣಕ್ಕೆ ಬಂದ ಹಿನ್ನೆಲೆಯಲ್ಲಿ ನಿಪ್ಪಾಣಿ ತಾಲೂಕಿನ 5 ಕಾಳಜಿ ಕೇಂದ್ರಗಳನ್ನ ಬಂದ್ ಮಾಡಲಾಗಿದೆ. ಕೃಷ್ಣಾ ನದಿ ತುಂಬಿ ಹರಿದ ಪರಿಣಾಮವಾಗಿ ಸುಮಾರು 704 ಹೆಕ್ಟರ್ ಬೆಳೆದ ತೋಟಗಾರಿಕೆ ಬೆಳೆ ಹಾಗೂ 9,958 ಹೆಕ್ಟರ್ ಬೆಳೆದ ಕೃಷಿ ಬೆಳೆ ಹಾನಿಗೊಳಗಾಗಿದೆ. ಜಿಲ್ಲೆಯಲ್ಲಿ ಒಟ್ಟು 9 ಮನೆಗಳಿಗೆ ನೀರು ನುಗ್ಗಿದೆ ಮತ್ತು ಒಂದು ಜೀವಹಾನಿಯಾಗಿದೆ. ಪ್ರವಾಹ ಪರಿಸ್ಥಿತಿಯನ್ನ ಅವಲೋಕಿಸಲೂ ತಂಡ ರವಹಿಸಲಾಗುವುದು ಹಾಗೂ ಕಂದಾಯ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ವಿಶೇಷ ತಂಡವನ್ನ ರಚಿಸಲಾಗುವುದು ಎಂದು ಬೆಳಗಾವಿ ಡಿಸಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

promotions

promotions

Read More Articles