ಜಮೀನಿನಲ್ಲಿ ಅಕ್ರಮ ಗಣಿಗಾರಿಕೆ : ರೈತನ ಆಕ್ರೋಶ

  • 14 Jan 2024 , 11:04 PM
  • Haveri
  • 116

ರಾಣೇಬೆನ್ನೂರ: ತಾಲೂಕಿನ ಶಿಡಗನಾಳ ಗ್ರಾಮದ ಹೊರವಲಯದಲ್ಲರುವ ಸರ್ವೆ ನಂಬರ್ 77/7 ಜಮೀನಿನಲ್ಲಿ ಸಿ.ಆರ್.ಬಳ್ಳಾರಿ ಎಂಬುವರು ಅಕ್ರಮ ಗಣಿಗಾರಿಕೆ ಮಾಡಿದ್ದು. ಕೂಡಲೇ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಅಲ್ಲದೆ ಇದರಿಂದಾದ ಲಕ್ಷಾಂತರ ರೂ. ನಷ್ಟವನ್ನು ತುಂಬಿಕೊಡಬೇಕೆಂದು ಅನ್ಯಾಯಕ್ಕೊಳಗಾದ ರೈತ ಶಂಕ್ರಪ್ಪ ಮಲ್ಲಪ್ಪ ನ್ಯಾಮತಿ ಒತ್ತಾಯಿಸಿದ್ದಾರೆ. ನಮ್ಮ ಜಮೀನಿನ ಸುಮಾರು 7 ಗುಂಟೆ ಜಮೀನಿನಲ್ಲಿ 150 ಅಡಿ ಆಳದ ಗುಂಡಿ ತೋಡಿ ಕಲ್ಲು ತೆಗೆಯುವ ಮೂಲಕ ಜಮೀನನ್ನು ನಾದುರಸ್ತಿ ಮಾಡಿರುವದನ್ನು ಸರಿಪಡಿಸಿಕೊಡಬೇಕು.

promotions

ನಮ್ಮ ಜಮೀನಿನ ಪಕ್ಕದ ಸರ್ವೆ ನಂಬರ್ 76 ರ ಮಾಲೀಕರಾದ ಕೆ.ಮಲ್ಲೇಶ ತಂದೆ ಕೆ.ಉಮಾಪತಿ ಇವರ 5 ಎಕರೆ 18 ಗುಂಟೆ ಜಮೀನಿನಲ್ಲಿ ಸಿ.ಆರ್.ಬಳ್ಳಾರಿ ಎಂಬುವವರು ಗಣಿಕಾರಿಕೆ ಮಾಡುತ್ತಿದ್ದಾರೆ. ಆದರೆ ಸರ್ವೆ ನಂಬರ್ 77 ರಲ್ಲಿ ನಮ್ಮ ಜಮೀನು ಸೇರಿಕೊಂಡು ಅಕ್ರಮವಾಗಿ ಗಣಿಗಾರಿಕೆ ಮಾಡುತ್ತಾ ಸುಮಾರು 150 ಅಡಿ ಉದ್ದ, 40 ಅಡಿ ಆಳದ ಗುಂಡಿಯನ್ನು ಮಾಡಿ ಕಲ್ಲು ತೆಗೆದಿದ್ದಾರೆ. ಇದರಿಂದಾಗಿ ಜಮೀನಿನಲ್ಲಿ ಯಾವುದೇ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಸಿ.ಆರ್. ಬಳ್ಳಾರಿ ಅವರನ್ನು ಕೇಳಿದರೆ, ನಾವು ಶಾಸಕರ ಕಡೆಯವರು ಎಂದು ಗೊತ್ತಿದೆ ಅಲ್ವಾ? ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಅಳಲು ತೊಂಡಿಕೊಂಡರು. ತಕ್ಷಣ ತಹಶೀಲ್ದಾರರು ಹಾಗೂ ಜಿಲ್ಲಾಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಬೇಕು. ಅಲ್ಲದೇ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು. ಹಾಗೂ ಹಾಳಾಗಿರುವ ನಮ್ಮ ಜಮೀನನ್ನು ದುರಸ್ಥಿಪಡಿಸಿಕೊಡಲು, ಅಲ್ಲದೆ ಇದರಿಂದಾದ ನಷ್ಟವನ್ನು ತುಂಬಿಕೊಡಬೇಕೆಂದು ಅಕ್ರಮ ಗಣಿಗಾರಿಕೆ ಮಾಡಿದವರ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

promotions

Read More Articles