ಮಾಣಿಕ್ ಷಾ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಸಿಎಂ : ರಾಜ್ಯದ ಜನತೆಯನ್ನುದ್ದೇಶಿಸಿ ಭಾಷಣ

ಬೆಂಗಳೂರು: ನಗರದ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ನಗರ ಜಿಲ್ಲಾಡಳಿತ ಹಾಗೂ ಬಿಬಿಎಂಪಿ ಜಂಟಿಯಾಗಿ ಆಯೋಜಿಸಿರುವ 74 ನೇ ಸ್ವಾತಂತ್ರೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಧ್ವಜಾರೋಹಣ ಕಾರ್ಯಕ್ರಮ ನೆರವೇರಿದರು.

promotions

ನಂತರ ರಾಜ್ಯವನ್ನುದೇಶಿಸಿ ಭಾಷಣ ಮಾಡಿದ ಸಿಎಂ ಯಡಿಯೂರಪ್ಪನವರು ಇತ್ತೀಚಿನ ದಿನಗಳಲ್ಲಿ ನಮ್ಮ ಸರ್ಕಾರಕ್ಕೆ ಹಲವು ಅಗ್ನಿ ಪರೀಕ್ಷೆ ಎದುರಾಗಿವೆ ರಾಜ್ಯದಲ್ಲಿ  ಅನಾವೃಷ್ಟಿ ಹಾಗೂ ಅತಿವೃಷ್ಟಿಯಿಂದ ರಾಜ್ಯದಲ್ಲಿ ಅತಿ ಹೆಚ್ಚು ಸಂಕಷ್ಟ  ಸಂಭವಿಸಿ ಆರ್ಥಿಕ ಸಂಕಷ್ಟ ಎದುರಾಗಿದೆ. 

promotions

ವಿಶ್ವದಲ್ಲಿ ಕೋವಿಡ್ 19 ನಿಂದ ಜನರು ತತ್ತರಿಸಿಹೋಗಿದ್ದಾರೆ.  ಈಗಾಗಲೇ ಕೊರೊನಾ ವಾರಿಯರ್ಸ್‌ ಜನರ ಸುರಕ್ಷೆಗಾಗಿ ಹೋರಾಡುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ‌ ಕೊರೋನಾ ಮಹಾಮಾರಿ ವಿರುದ್ಧ ಹೋರಾಡುತ್ತಿವೆ. ಸಮಗ್ರ ಕರ್ನಾಟಕ ನಿರ್ಮಾಣ ನಮ್ಮ ಧ್ಯೇಯವಾಗಿದೆ.  ಕೋವಿಡ್ 19 ದೇಶದಲ್ಲಿ ಆರ್ಥಿಕ ಹೋಡೆತ ತಂದಿದೆ ಇದರಿಂದ ಇಡೀ ದೇಶದಲ್ಲಿ ಉದ್ಯೋಗದಲ್ಲಿ ಬಾರಿ ಹೋಡೆತ ಬಿದ್ದಿದೆ ಯುವಕರಿಗೆ ಉದ್ಯೋಗಗಳನ್ನು ನೀಡಲು ಶೀಘ್ರವೇ ಅರ್ಜಿಗಳನ್ನು ಕರೆಯಲಾಗುವದು. ಭಾರತದ ಪ್ರಧಾನಿ ಕೈಗೊಂಡ ಕ್ರಮಗಳು ರಾಜ್ಯಸರ್ಕಾರ‌ ಕೈಗೊಂಡ ಕಟ್ಟು ನಿಟ್ಟಿಮ ಕ್ರಮಗಳನ್ನು ಸಾರ್ವಜನಿಕರು ಸರ್ಕಾರದ ಆದೇಶಗಳನ್ನು ಪಾಲಿಸಬೇಕು ಎಲ್ಲರೂ ಕೊರೊನಾ ಮಹಾಮಾರಿ ವಿರುದ್ಧ ಹೊರಾಡಿ ಸರ್ಕಾರದ ಆದೇಶ ಪಾಲಿಸಿ ಎಂದು ವಿನಂತಿಸಿದರು.

ರಾಜ್ಯ ಸರ್ಕಾರ ಯಶಸ್ವಿಯಾಗಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮುಗಿಸಿದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ‌ ನಿಮ್ಮೊಂದಿಗೆ ಸದಾ ಸಿದ್ದ ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನಿಡಲು ವಿದ್ಯಾರ್ಥಿಗಳ ಮನೆ ಅಂಗಳಕ್ಕೆ ಆಗಮಿಸಿ ಶಿಕ್ಷಕರು ಶಿಕ್ಷಣ ನೀಡುತ್ತಿದ್ದಾರೆ. ಶಿಕ್ಷಣ ಪದ್ಧತಿಯಲ್ಲಿ ಹಲವು ಬದಲಾವಣೆಗಳಾಗಿವೆ ಆನ್ಲೈನ್ ಶಿಕ್ಷಣ ಪದ್ದತಿ ಶುರುವಾಗಿದೆ ಡಿಡಿ ಚಂದನ ವಾಹಿನಿ ಮೂಲಕ ಶಿಕ್ಷಣ ನೀಡಲಾಗುತ್ತದೆ. 

ಅನ್ನದಾತರಿಗೆ ರೈತರಿಗೆ 6000 ಧನ ನೀಡಿ ಪ್ರತಿ ತಿಂಗಳು ಕಂತುಗಳ ರೂಪದಲ್ಲಿ ರೈತರ ಖಾತೆಗಳಿಗೆ ಹಣ ವರ್ಗಾವಣೆ ಮಾಡಿದೆ. ರಾಜ್ಯದ 10 ಲಕ್ಷ ರೈತರಿಗೆ ಹಾಗೂ  6500  ಕೋಟಿ ನೀಡಿದೆ. ಕೃಷಿ, ಕೃಷಿಯೇತರ ಚಟುವಟಿಕೆಗಳು ಹಾಗೂ ಎಲ್ಲ ಕ್ಷೇತ್ರದಲ್ಲಿಯು ಸಹ ಉತ್ತಮವಾಗಿ ರಾಜ್ಯಸರ್ಕಾರ ಕಾರ್ಯ ನಿರ್ವಹಿಸಿದೆ. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸಾರ್ವಜನಿಕರಿಗೆ ಅನೂಕುಲ ವಾಗಲುವ ಗ್ರಾಹಕ ಸ್ನೇಹಿ ರೀತಿಯಲ್ಲಿ ಕಾರ್ಯ ನಿರ್ವಹಿಸಿವೆ.

ಒಟ್ಟಿನಲ್ಲಿ ನಮ್ಮ ಸರ್ಕಾರದ ಪ್ರಮುಖ ನಿದರ್ಶನವೆಂದರೆ, ಹೈದರಾಬಾದ್ ಕರ್ನಾಟಕ ವಿಭಜಿಸಿ ಅಖಂಡ ಕರ್ನಾಟಕ ಕಟ್ಟಲು ಸಿದ್ದವಾಗಿದೆ. ರಾಜ್ಯದ ಕಲಬುರಗಿಯಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು‌ ಸ್ಥಾಪಿಸಲಾಗುತ್ತಿದೆ.  ರಾಜ್ಯದ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ‌ ಸದಾ ಸಿದ್ದ ಎಂದು ಸಿಎಂ ಯಡಿಯೂರಪ್ಪನವರು ರಾಜ್ಯದ ಜನತೆಯನ್ನುದ್ದೇಶಿಸಿ ಹೇಳಿದರು.

Read More Articles