ಸಂಗೊಳ್ಳಿ ರಾಯಣ್ಣನ ಮೂರ್ತಿ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿದ್ದ ಪೊಲೀಸರ ವಿರುದ್ಧ ಗರಂ ಆದ ಜನರು
- 14 Jan 2024 , 10:18 PM
- Belagavi
- 97
ಬೆಳಗಾವಿ: ತಾಲೂಕಿನ ಪಿರನವಾಡಿ ಗ್ರಾಮದಲ್ಲಿ ಸಂಗೋಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ಸಂಬಂಧ ಇಂದು ಬೆಳಿಗ್ಗೆ ಗ್ರಾಮಸ್ಥರು ಹಾಗೂ ಪೋಲಿಸರ ನಡುವೆ ವಾಗ್ವಾದ ನಡೆದ ಘಟನೆ ನಡೆದಿದೆ. ಸ್ವಾತಂತ್ರ್ಯ ದಿನಾಚರಣೆಯಂದು ಗ್ರಾಮದ ವೃತ್ತದಲ್ಲಿ ಅನುಮತಿ ಇಲ್ಲದೆ ಸಂಗೊಳ್ಳಿ ರಾಯಣ್ಣನ ಮೂರ್ತಿ ಸ್ಥಾಪನೆ ಮಾಡುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಪ್ರತಿಮೆಯನ್ನು ವಶಪಡಿಸಿಕೊಂಡು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.

ಇದಕ್ಕೆ ಗ್ರಾಮಸ್ಥರು ಹಾಗೂ ಕನ್ನಡ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು. ಕಳೆದ ಮೂರ್ನಾಲ್ಕು ವರ್ಷಗಳಿಂದ ನಾವು ಜಿಲ್ಲಾಡಳಿತಕ್ಕೆ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆ ಮಾಡಬೇಕೆಂದು ಮನವಿ ಮಾಡುತ್ತಿದ್ದೇವೆ ಆದರೆ ಅದು ಸಾಧ್ಯವಾಗಿಲ್ಲ ಹೀಗಿರುವಾಗ ನಾವು ಸ್ವಾತಂತ್ರ್ಯ ದಿನದಂದು ರಾಯಣ್ಣ ಮೂರ್ತಿ ಸ್ಥಾಪಿಸಲು ಸತತ ಒಂದು ತಿಂಗಳಿಂದಲು ಎಲ್ಲಾ ರೀತಿಯ ಕಾರ್ಯಗಳನ್ನು ಮಾಡಿಕೊಂಡಿದ್ದೇವೆ. ದೇಶಕ್ಕಾಗಿ ತಮ್ಮ ಪ್ರಾಣವನ್ನು ಬಲಿದಾನ ಮಾಡಿದ ಶೂರ ಸಂಗೊಳ್ಳಿ ರಾಯಣ್ಣನ ಹುಟ್ಟುಹಬ್ಬದ ದಿನವೇ ಈ ಘಟನೆ ಸಂಭವಿಸಿದ್ದು, ಸಂಗೊಳ್ಳಿ ರಾಯಣ್ಣ ಮೂರ್ತಿ ಜೊತೆಗೆ ರಾಷ್ಟ್ರ ಧ್ವಜವನ್ನೂ ಹಾಕಿ ಎಲ್ಲ ಸಿದ್ದತೆಗಳನ್ನು ಗ್ರಾಮಸ್ಥರು ಮಾಡಿಕೊಂಡಿದ್ದರು. ಮುಂಜಾನೆ ಸಮಯದಲ್ಲಿ ರಾಯಣ್ಣನ ಅಭಿಮಾನಿಗಳಿಂದ ಮೂರ್ತಿ ಸ್ಥಾಪನೆ ಮಾಡುತ್ತಿದ್ದರು ಆದರೆ ಪೊಲೀಸ್ ಇಲಾಖೆಯವರು ಇದನ್ನ ತಡೆಹಿಡಿದಿದ್ದು ರಾಯಣ್ಣನ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಈ ಘಟನೆ ಇಂದು ನಡೆದಿದೆ ಇದಕ್ಕೆ ರಾಯಣ್ಣ ಮೂರ್ತಿ ಸ್ಥಾಪನೆ ಆಗಬೇಕು ಆಗುವರೆಗೂ ನಾವು ಬಿಡಲ್ಲ ಎಂದು ರಾಯಣ್ಣ ಅಭಿಮಾನಿಗಳು ತಮ್ಮ ಆಕ್ರೋಶ ವನ್ನು ಹೊರ ಹಾಕಿ ಮೂರ್ತಿ ಸ್ಥಾಪನೆಗೆ ಅವಕಾಶ ನೀಡದ ಪೊಲೀಸರ ವಿರುದ್ಧ ಕಿಡಿ ಕಾರಿದ್ದಾರೆ.











