ಗೊರಪ್ಪ ಅಜ್ಜನವರಿಗೆ ಅನಾರೋಗ್ಯ ಹಿನ್ನೆಲೆ, ಸಹಾಯ ಹಸ್ತ ನೀಡುವಂತೆ ಮನವಿ

  • 15 Jan 2024 , 3:35 AM
  • Haveri
  • 102

ರಾಣೇಬೆನ್ನೂರ: ಹೂವಿನಹಡಗಲಿ ತಾಲೂಕಿನ ಸುಕ್ಷೇತ್ರ ಮೈಲಾರ ಲಿಂಗೇಶ್ವರ ದೇವಸ್ಥಾನದ ಗೊರಪ್ಪ ಮಾಲತೇಶ ಅಜ್ಜನವರಿಗೆ ಅನ್ಯಾರೋಗದ ಹಿನ್ನೆಲೆಯಲ್ಲಿ ತಾಲೂಕಿನ ದೇವರಗುಡ್ಡದ ಮಾಲತೇಶ ದೇವಸ್ಥಾನದ ಪ್ರಧಾನ ಆರ್ಚಕ ಸಂತೋಷಭಟ್ಟ ಪೂಜಾರ ಬೇಟಿ ನೀಡಿ ಅವರನ್ನು ಸನ್ಯಾನ್ಮನಿಸಿ 50ಸಾವಿರ ಸಹಾಯಧನ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂತೋಷಭಟ್ಟ ಶ್ರೀಕ್ಷೇತ್ರದಲ್ಲಿ ಪ್ರತಿ ವರ್ಷ ನುಡಿಯುವ ಕಾರ್ಣಿಕ ರಾಜಕೀಯ ಹಾಗೂ ರೈತರ ಮೇಲೆ ಪರಿಣಾಮ ಬೀರುವ ಭವಿಷ್ಯವಾಣಿಯಾಗಿದ್ದು. ರಾಜ್ಯದಲ್ಲಿಯೇ ಹೆಸರುವಾಸಿಯಾದ ಕ್ಷೇತ್ರವಾಗಿದೆ. ಕಳೆದ ಮೂವತ್ತು ವರ್ಷದಿಂದ ಭಕ್ತಿಪೂರ್ವಕವಾಗಿ ಕಾರ್ಣಿಕ ನುಡಿಯುವ ಗೊರಪ್ಪ ಅಜ್ಜನವರಿಗೆ ಕೆಲವು ದಿನಗಳಿಂದ ಪಾಶ್ವಪಾರ್ಯ ಕಾಯಿಲೆಯಿಂದ ಬಳುತ್ತಿದ್ದಾರೆಂದು ತಿಳಿದು ಬಂದಿತ್ತು. ಆದ್ದರಿಂದ ನಮ್ಮ ನೇತೃತ್ವದಲ್ಲಿ ದೇವರಗುಡ್ಡ ಗ್ರಾಮಸ್ಥರೆಲ್ಲಾ ಸೇರಿ ಅವರಿಗೆ ಚಿಕಿತ್ಸೆಗಾಗಿ ಧನಸಹಾಯ ಮಾಡಲಾಗಿದೆ. ಗೊರಪ್ಪ ಅಜ್ಜನವರ ಪರಿಸ್ಥಿತಿ ಚಿಂತಾ ಜನಕವಾಗಿದೆ. ಅವರಿಗೆ ಸರ್ಕಾರ, ಜನಪ್ರತಿನಿಧಿಗಳು ಹಾಗೂ ಶ್ರೀಕ್ಷೇತ್ರದ ಭಕ್ತಾಧಿಗಳು ಸಹಾಯ ಹಸ್ತ ನೀಡಿ ಅವರ ಬದುಕಿಗೆ ಆಸರೆಯಾಗಬೇಕೆಂದು ವಿನಂತಿಸಿಕೊಂಡಿದ್ದಾರೆ ಮಲ್ಲಪ್ಪಯ್ಯ ಒಡೆಯರ್, ಹನುಮಂತಪ್ಪ ನಾಯರ್, ಡಿಳ್ಳೆಪ್ಪ ಐಗಳ, ರುದ್ರಪ್ಪ ಜಜ್ಜರಿ, ಫಕ್ಕೀರಪ್ಪ ಐಗಳ, ನಿಂಗಪ್ಪ ದ್ಯಾಮಣ್ಣನವರ, ದೇವಪ್ಪ ವಾಸರದ, ರಾಜು ಮಾಲ್ದಾರ, ಚಿಕ್ಕಪ್ಪ ಬಡಿಗೇರ, ನಿಂಗಪ್ಪ ಹುಲ್ಲಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.

promotions

promotions

Read More Articles