ಸಮಾಜದ ಸೇವೆಗೆ ಯೋಧ ವೀರುವಿನ ಅವಶ್ಯಕತೆ ಇದೆ; ಶಿವಾನಂದ ಕೆಂಚನಗೌಡ್ರ

ಬೆಳಗಾವಿ: ಬೈಲಹೊಂಗಲ ತಾಲೂಕಿನ ಚಿವಟಗುಂಡಿ ಗ್ರಾಮದ ಸರ್ಕಾರಿ ಕನ್ನಡ ಶಾಲೆಯ ಆವರಣದಲ್ಲಿ ಸೈನಿಕ  ವೀರು ದೋಡವೀರಪ್ಪನವರ ಹುಟ್ಟು ಹಬ್ಬದ ನಿಮಿತ್ಯ ವೀರುಗೆಳೆಯರ ಬಳಗದ ವತಿಯಿಂದ ಕೊರೋನಾ ಮಾಹಾಮಾರಿ ವಿರುದ್ದ ಹಗಲಿರುಳು ಹೋರಾಡುತ್ತಿರುವ ಗ್ರಾಮದ ಕೊರೋನಾ ವಾರಿಯರ್ಸ್ ಗಳಿಗೆ ಮತ್ತು ಅತಿ ಹೆಂಚು ಅಂಕ ಪಡೆದು ಗ್ರಾಮದ ಕೀರ್ತಿ ತಂದ ವಿದ್ಯಾರ್ಥಿಗಳಾದ ಗೌಡೇಶ ಗೌಡಪ್ಪನವರ, ಸಹನಾ ಗೌಡಪ್ಪನವರ, ಜ್ಯೋತಿ ಶಿವನಾಯ್ಕರ, ಬಸವರಾಜ ಬಾಗನವರ ಅವರನ್ನು ಸನ್ಮಾನಿಸಿ ಪ್ರೋತ್ಸಹ ಪುರಸ್ಕಾರ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ  ಗೆಳೆಯರ  ಬಳಗದ ಅಧ್ಯಕ್ಷ ಶಿವಾನಂದ ಕೆಂಚನಗೌಡ್ರ ನಮ್ಮೂರಿನ ವೀರ ಸೈನಿಕ ಹಾಗೂ ನಮ್ಮೆಲ್ಲರ ಮಾರ್ಗ ದರ್ಶಕರಾದ ವೀರು ರವರು ಗೆಳೆಯರ ಬಳಗ ಎಂಬ ಸಂಘವನ್ನು ಕಟ್ಟಿಕೊಂಡು ಎಲ್ಲ ಯುವಕರಲ್ಲಿ ಸಾಮಾಜಿಕ ಅರಿವು ಮೂಡಿಸುತ್ತಾ ಸಮಾಜ ಸೇವೆ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ.

promotions

ವೀರು ಇನ್ನು ಕೆಲವು ದಿನಗಳಲ್ಲಿ 17 ವರ್ಷ ಪೂರೈಸಲಿದ್ದು, ದೇಶದ ವಿವಿದೆಡೆ ಸೇವೆ ಗೈದು ಕನ್ನಡ ತಾಯನಾಡಿಗೆ ಮರಳುತ್ತಿರುವುದು ನಮಗೆ ಸಂತಸದ ವಿಷಯವಾಗಿದೆ. ಅವರಿಂದ ಇನ್ನು ಹೆಚ್ಚಿನ ಸಮಯವನ್ನು ಸಾಮಾಜಿಕ ಕಾರ್ಯ ಮಾಡಲು ಮತ್ತು ಸಮಾಜದಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಡಿ ಜನ ಸಾಮಾನ್ಯರಿಗೆ ನ್ಯಾಯ ಒದಗಿಸಲು ವೀರು ಅಂತಹ ವ್ಯಕ್ತಿಯ ಅವಶ್ಯಕತೆ ಈ ಸಮಾಜಕ್ಕಿದೆ ಎಂದು ಹೇಳಿದರು ಜೊತೆಗೆ ವೀರು ಸ್ನೇಹಿತರು, ಆಪ್ತರು ತಮ್ಮ ಸ್ವಗ್ರಾಮಗಗಳಲ್ಲಿ ಹುಟ್ಟು ಹಬ್ಬ ಆಚರಿಸಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಗಿರೀಶ್ ಸಂಗನಗೌಡ್ರ,  ಸಂಗಪ್ಪ ಚಂದಣ್ಣವರ್, ಹುಬ್ಳಿಕರ್, ನೀಲಗುಂದ, ಗುರು ಮಲ್ಲೂರ, ದಾನಯ್ಯಾ ಚಿಕ್ಕಮಠ, ಬಸವರಾಜ ಮಲ್ಲೂರ, ವಿಶಾಲ ಬೊಗುರ, ರವಿ ದೋಡವೀರಪ್ಪನವರ ಸೇರಿದಂತೆ ಸದಸ್ಯರು, ಅಭಿಮಾನಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

promotions

Read More Articles