ಉಕ್ಕಿ ಹರಿಯುತ್ತಿರುವ ಘಟಪ್ರಭಾ ಹಿರಣ್ಯಕೇಶಿ ನದಿಗಳು: ಹುಕ್ಕೇರಿ ಪ್ರಮುಖ ಸೇತುವೆ ಜಲಾವೃತ
- 15 Jan 2024 , 5:10 AM
- Belagavi
- 333
ಹುಕ್ಕೇರಿ: ಘಟಪ್ರಭಾ ಹಾಗೂ ಹಿರಣ್ಯಕೇಶಿ ನದಿಗಳು ಉಕ್ಕಿ ಹರಿಯುತ್ತಿದ್ದು ಹುಕ್ಕೇರಿ ತಾಲೂಕಿನ ನೊಗನಿಹಾಳ, ಅವರಗೋಳ ಹಾಗೂ ಘೊಡಗೇರಿಗೆ ಸಂಪರ್ಕ ಕಲ್ಪಿಸುವ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ. ಹಾಗೂ ಕೊಟಬಾಗಿ ಅವರಗೋಳ ಸಂಪರ್ಕಿಸುವ ಸೇತುವೆ ಕೂಡಾ ಜಲಾವೃತ ವಾಗಿದೆ ಮಳೆಯ ಅರ್ಭಟ ಮತ್ತೆ ಮುಂದುವರೆದಿದ್ದು ಹಿಡಕಲ್ ಜಲಾಶಯಕ್ಕೆ ಒಳಹರಿವು ಹೆಚ್ಚಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಮುಂಜಾಗೃತೆಗಾಗಿ ನಲವತ್ತು ಸಾವಿರ 40000 ಕ್ಯುಸಕ್ ಹಾಗೂ ಹಿರಣ್ಯಕೇಶಿ ಇಂದ 20000 ಕ್ಯುಸಕ್ ನೀರನ್ನು ಹರಿ ಬಿಡಲಾಗಿದೆ ಘಟಪ್ರಭಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ ಹಲವು ಗ್ರಾಮದ ಜನರ ಆತಂಕ ಮೂಡಿದ್ದು . ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಈಗಾಗಲೆ ಸೂಚಿಸಲಾಗಿದ್ದು ಜಿಲ್ಲೆಯಾದ್ಯಂತ ಹೈ-ಅಲರ್ಟ್ ಘೋಷಿಸಲಾಗಿದೆ ರಾತ್ರಿ ಹೊತ್ತು ಯಾರು ನದಿಯ ಹತ್ತಿರ ಹೋಗದಂತೆ ಎಚ್ವರಿಸಲಾಗಿದೆ .











