ಕೆಲಗೇರಿಯ ಜೆಎಸ್ ಎಸ್ ಪಬ್ಲಿಕ್ ಶಾಲೆಯ ಹಿಂದಿನ ಪ್ರಿನ್ಸಿಪಲ್ ಗುರುಪಾದ ಹೆಗಡಿ ಇನ್ನು ನೆನಪು ಮಾತ್ರ
- 15 Jan 2024 , 12:31 AM
- Dharwad
- 112
ಧಾರವಾಡ: ಕೆಲಗೇರಿಯಲ್ಲಿರುವ ಜೆಎಸ್ ಎಸ್ ಪಬ್ಲಿಕ್ ಶಾಲೆಯ ಈ ಹಿಂದಿನ ಪ್ರಿನ್ಸಿಪಾಲ್ ರಾಗಿದ್ದ ಹಿರಿಯ ಶಿಕ್ಷಕರಾದ ಗುರುಪಾದ ಹೆಗಡಿ ಅವರು ಸೋಮವಾರ ಸಂಜೆ ನಿಧನರಾಗಿದ್ದಾರೆ. ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಈ ಹಿಂದೆ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು .

ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಇತ್ತೀಚೆಗಷ್ಟೇ ದೆಹಲಿಗೆ ಕರೆದುಕೊಂಡು ಹೋಗಲಾಗಿತ್ತು . ಆದರೆ ಚಿಕಿತ್ಸೆ ಫಲಿಸದೆ ಅವರು ದೆಹಲಿಯಲ್ಲಿಯೇ ಇಹಲೋಕ ತ್ಯಜಿಸಿದ್ದಾರೆ . ತಮ್ಮ ಸರಳತೆ , ಆತ್ಮೀಯತೆಯಿಂದಲೇ ಸಾವಿರಾರು ಮಕ್ಕಳ ಮನಸೂರೆಗೊಂಡಿದ್ದ ಗುರುಪಾದ ಹೆಗಡೆ ಅವರು ಮಕ್ಕಳಿಗೆ ಬಹುದೊಡ್ಡ ಶಕ್ತಿ ಹಾಗೂ ಚೈತನ್ಯದ ಚಿಲುಮೆಯಾಗಿದ್ದರು. ಕಳೆದ ವರ್ಷವಷ್ಟೇ ಜೆ ಎಸ್ ಎಸ್ ಶಾಲೆಯಿಂದ ಹೊರಬಂದಿದ್ದ ಅವರು ಧಾರವಾಡದಲ್ಲಿಯೇ ತಮ್ಮದೇ ಆದ ಶಿಕ್ಷಣ ಸಂಸ್ಥೆ ಸ್ಥಾಪಿಸಿ , ಅದರ ಮೂಲಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದರು. ಅವರ ಅಗಲಿಕೆಯಿಂದ ಶೈಕ್ಷಣಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾದಂತಾಗಿದೆ ಎಂದು ಅನೇಕರು ಕಂಬನಿ ಮಿಡಿದಿದ್ದಾರೆ.











