ಸುರಿಯುತ್ತಿರುವ ಮಳೆಯಿಂದ ಪರದಾಡಿದ ಜನರು,ಗಾಳಿಯ ರಬಸಕ್ಕೆ ದರೆಗುರುಳಿದ ಮರ ಮತ್ತು ವಿದ್ಯುತ್ ಕಂಬಗಳು

  • 14 Jan 2024 , 11:12 PM
  • Haveri
  • 114

ಬಂಕಾಪುರ : ಕಳೆದ ಕೆಲ ದಿನಗಳಿಂದ ಸತತವಾಗಿ ಸುರಿಯುತ್ತಿರುವ ಗಾಳಿ,ಮಳೆಗೆ ಪಟ್ಟಣದ ಕೆಲವಡೆ ಮರ, ಗಿಡ, ವಿದ್ಯುತ್ ಕಂಬಗಳು ದರೆಗುರುಳಿದ್ದು ಬಿದಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡು ಜನ, ಜೀವನ ಅಸ್ತವ್ಯಸ್ತವಾಗಿದೆ. ಬಿಡುವಿಲ್ಲದೆ ಸುರಿಯುತ್ತಿರುವ ಮಳೆಯಿಂದಾಗಿ ಜನರು ಮನೆಯಿಂದ ಹೊರಗೆ ಬರದಂತಾಗಿದ್ದು, ಸುಮಾರು 15ಕ್ಕೂ ಅಧಿಕ ವಿದ್ಯುತ್ ಕಂಬಗಳು ಉರುಳಿವೆ ಇದರಿಂದ ಶನಿವಾರ ಮದ್ಯರಾತ್ರಿ ಕಡಿತವಾದ ವಿದ್ಯುತ್ ಸಂಪರ್ಕ ಮಂಗಳವಾರ ರಾತ್ರಿ ಬಂದಿದ್ದರಿಂದ ಮೋಬೈಲ್, ಟಿ.ವಿ, ಕಂಪ್ಯೂಟರ, ಲ್ಯಾಪ್‍ಟಾಪ ಸೇರಿದಂತೆ ವಿದ್ಯುತ್ ಉಪಕರಣಗಳ ಕೆಲಸ ಸಂಪೂರ್ಣ ಸ್ಥಗಿತವಾಗಿದ್ದು ಅಷ್ಟೇ ಅಲ್ಲದೆ ಮೊಬೈಲ್ ಚಾರ್ಜ್ ಇಲ್ಲದೆ ಜನರು ಪರದಾಡಿದ ಸ್ಥಿತಿಯು ನಿರ್ಮಾಣ ಆಗಿದೆ. ಲೈನ್‍ಮನ್‍ಗಳು ಮಳೆಯಲ್ಲಿಯೇ ಜೆ.ಸಿ.ಬಿ. ಮೂಲಕ ವಿದ್ಯುತ್ ಕಂಬಗಳ ಜೋಡಣೆ ಮಾಡಿ ತಮ್ಮ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಶ್ರೀ ರೇಣುಕಾ ಚಿತ್ರಮಂದಿರದ ಹತ್ತಿರ ಬೃಹತ್ ಜಾಲಿ ಮರ ವಿದ್ಯುತ್ ಲೈನ್‍ಗಳ ಮೇಲೆ ಬಿದ್ದ ಕಾರಣ ವಿದ್ಯುತ್ ಕಂಬ ತುಂಡರಿಸಿ ರಸ್ತೆಗೆ ಬಾಗಿತ್ತು ಈ ಪರಿಣಾಮ ಕೆಲಕಾಲ ವಾಹನ ಸಂಚಾರ ಸ್ಥಗಿತಗೋಂಡಿತು. ಕೆಲ ಹೋಲಗಳಲ್ಲಿ ನೀರು ನಿಂತು ಬೆಳೆಗಳು ನಾಶವಾಗುವ ಹಂತದಲ್ಲಿದ್ದು, ಜಿಟಿ,ಜಿಟಿ ಮಳೆಯಿಂದಾಗಿ ಬೆಳಗಿನ ಜಾವ ಹಾಲು ಹಾಗೂ ಪತ್ರಿಕೆಗಳನ್ನು ಮನೆ,ಮನೆಗೆ ತಲುಪಿಸುವ ಪತ್ರಿಕಾ ವಿತರಕರು ಪರದಾಡುವಂತಾಯಿತು.

promotions

promotions

Read More Articles