ಮೇಘರಾಜನ ಆರ್ಭಟ : ಕಳೆದ ವರ್ಷದ ಸ್ಥಿತಿ ಮತ್ತೆ ಮೆಲುಕು ಹಾಕುವ ಪರಿಸ್ಥಿತಿ..?

‌ಬೆಳಗಾವಿ:ನೆರೆಯ ಮಹಾರಾಷ್ಟ್ರ ಹಾಗೂ ಜಿಲ್ಲೆಯಲ್ಲಿ ಸತತವಾಗಿ ನಾಲ್ಕು ದಿನದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯಾದ್ಯಂತ ನದಿ ಡ್ಯಾಮ್ ಗಳು ತುಂಬಿ ತುಳುಕುತ್ತಿವೆ. ಇನ್ನೊಂದು ಕಡೆ ಎಲ್ಲ ಜಲಾಶಯಗಳು, ಅಣೆಕಟ್ಟುಗಳು ಸಂಪೂರ್ಣ ಭರ್ತಿಯಾದ ಹಿನ್ನೆಲೆ ಜಲಾಶಯದಿಂದ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗುತ್ತಿದೆ.  ಇದರಿಂದಾಗಿ ಹಲವಾರು ಗ್ರಾಮಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ, ನದಿ ತೀರದ ಗ್ರಾಮದವರು ರಾತ್ರಿ ಇಡಿ ನಿದ್ದೆಗೆಟ್ಟು ಕಾಯುವ ಪರಿಸ್ಥಿತಿ ಬಂದೊದಗಿದೆ.

promotions

ಈಗಾಗಲೇ ರಸ್ತೆ ಸೇತುವೆಗಳು ನದಿ ನೀರಿಗೆ ಸಂಪೂರ್ಣ ಜಲಾವೃತವಾಗಿದ್ದು ಗ್ರಾಮೀಣ ಪ್ರದೇಶದ ಜನರು ಸಂಚರಿಸುವ ಮಾರ್ಗಗಳು ಬಂದಾಗಿವೆ. ರೈತರು ಕೃಷಿ ಭೂಮಿಯಲ್ಲಿ ಬೆಳೆದ ಒಳ್ಳೆಯ ಪಸಲು ನೀರಿನಲ್ಲಿ ಮುಳುಗಡೆಯಾಗಿ ಅವರ ಶ್ರಮವೆಲ್ಲ ನೀರಾಗಿ ಹರಿದು ಹೋಗುತ್ತಿದೆ.

promotions

ಇದೇ ರೀತಿ ಮಳೆ ಮುಂದುವರೆದಿದ್ದೆ ಆದರೆ ಪ್ರವಾಹದ ಭೀತಿ ಜನರಲ್ಲಿ ಕಾಡುವುದು ನಿಶ್ಚಯ. ಹಗಲು-ರಾತ್ರಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮನುಷ್ಯರ ಜನಜೀವನ ಅಸ್ತವ್ಯಸ್ಥಗೊಂಡಿದೆ. ಮನುಷ್ಯರ ಅಷ್ಟೇ ಅಲ್ಲ ಜಾನುವಾರಗಳನ್ನು ರಕ್ಷಿಸುವುದು ಕೂಡ ತಿಳಿಯದಾಗುತ್ತಿದೆ.

ಕಳೆದ ವರ್ಷದ ಘಟನೆಯಿಂದ ಜನ ಇನ್ನೂ ಸುಧಾರಣೆಯಾಗುತ್ತಿದ್ದಾರೆ. ಅಂತದ್ರಲ್ಲಿ ಮತ್ತೆ ಕಳೆದ ವರ್ಷದ ಸ್ಥಿತಿ ಮತ್ತೆ ಮೆಲುಕು ಹಾಕುವ ಪರಿಸ್ಥಿತಿ ಎದುರಾಗುತ್ತಾ ? ಎಂಬ ಚಿಂತೆ ಕಾಡುತ್ತಿದೆ. ಇನ್ನೊಂದು ಕಡೆ ಮಹಾಮಾರಿ ಕೊರೋನಾ ಹಾವಳಿ, ಇವೆಲ್ಲವುದರ ಸಂಕಷ್ಟದಿಂದ ಹೇಗೆ ಪಾರಾಗಬಹುದು ಎಂಬ ಚಿಂತೆ ಎಲ್ಲರಲ್ಲೂ ಆವರಿಸಿದೆ. ಇದೆಲ್ಲವನ್ನೂ ನೋಡಿದರೆ ಮನುಷ್ಯನಿಗೆ ನಿಸರ್ಗವು ತಕ್ಕ ಶಿಕ್ಷೆ ನೀಡುತ್ತಿದೆ ಎಂದು ಭಾಸವಾಗುತ್ತಿದೆ.

ವರದಿ : ಡಿ ಎಸ್ ಭಾವಿಮನಿ.

Read More Articles