ಭಕ್ತಾದಿಗಳ ನೀರಿನ ದಾಹ ತೀರಿಸಲು ಬಸವೇಶ್ವರ ದೇವಸ್ಥಾನಕ್ಕೆ ಪಾಟೀಲ ಕುಟುಂಬದವರಿಂದ ಸಿಂಟೆಕ್ಸ್ ದಾನ

  • 15 Jan 2024 , 1:57 AM
  • Haveri
  • 103

ಬಂಕಾಪುರ : ಶ್ರಾವಣಮಾಸದ ಕೊನೆಯ ದಿನವಾಗಿದ್ದರಿಂದ ಇಂದು ಪಾಟೀಲ ಕುಟುಂಬದವರು ಹಳ್ಳಿಕೇರಿ ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ಬಂದ ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಸಿಂಟೇಕ್ಸ್ ದಾನವಾಗಿ ನೀಡುವುದರ ಮೂಲಕ ನೀರಿನ ವ್ಯವಸ್ಥೆ ಕಲ್ಪಿಸಿದರು.

promotions

ಶ್ರಾವಣಮಾಸ ಅಮಾವಾಸ್ಯೆಯ ನಿಮಿತ್ಯ ಶ್ರೀ ಹಳ್ಳಿಕೇರಿ ಬಸವೇಶ್ವರರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಬದಲ್ಲಿ ಆಶುಕವಿ ಜಗದೀಶ ಹುರಳಿ ಮಾತನಾಡಿ, ಊರ ಹೋರಗಡೆ ನೆಲೆಸಿರುವ ಹಳ್ಳಿಕೇರಿ ಬಸವಣ್ಣನ ದೇವಸ್ಥಾನದಲ್ಲಿ ನೀರಿನ ವ್ಯವಸ್ಥೆ ಇಲ್ಲದೇ ಇರುವದರಿಂದ ಬರುವ ಭಕ್ತರಿಗೆ ತುಂಬಾ ತೋಂದರೆಯಾಗಿತ್ತು. ಇದನ್ನರಿತ ಪಾಟೀಲರು ಅವರ ಮಾತೋಶ್ರೀ ಕಮಲವ್ವ ಹೆಸರಿನಲ್ಲಿ ಅವರ ಪುತ್ರರಾದ ವಿ.ಸಿ.ಪಾಟೀಲ ಹಾಗು ಎಸ್.ಸಿ.ಪಾಟೀಲರು ದೇವಸ್ಥಾನಕ್ಕೆ ಸಿಂಟೆಕ್ಸ್ ದಾನವಾಗಿ ನೀಡಿ ಅನಕೂಲ ಕಲ್ಪಿಸಿದ್ದಾರೆ.

promotions

ಇದರಿಂದ ಪಾದಾಚಾರಿಗಳಿಗೆ, ದನಗಾಹಿಗಳಿಗೆ, ದೇವಸ್ಥಾನಕ್ಕೆ ಬಂದ ಭಕ್ತರಿಗೆ ಕುಡಿಯುವ ನೀರಿನ ದಾಹವನ್ನು ನೀಗಿಸಿದಂತಾಗಿದೆ ಎಂದು ಹೇಳಿದರು. ದಾನಿಗಳಾದ ವಿ.ಸಿ.ಪಾಟೀಲ ಮಾತನಾಡಿ, ನಾವು ಕೂಡಾ ಶ್ರೀ ಹಳ್ಳಿಕೇರಿ ಬಸವೇಶ್ವರರ ಭಕ್ತರಾಗಿದ್ದು, ದೇವಸ್ಥಾನಕ್ಕೆ ಬಂದಾಗಲೋಮ್ಮೆ ಹೊರಗಡೆಯಿಂದ ಬಂದ ಭಕ್ತರು ನೀರಿನ ದಾಹದಿಂದ ಬಳಲುತ್ತಿರುವುದನ್ನು ಗಮನಿಸಿದ್ದೇವು. ಆದ್ದರಿಂದ ಬಂದ ಭಕ್ತರಿಗೆ ಅನಕೂಲವಾಗಲೇಂದು ಸಿಂಟೆಕ್ಸ ದಾನವಾಗಿ ನೀಡಿ ನಳದಮೂಲಕ ಭಕ್ತರಿಗೆ ನೀರು ತಲುಪಿಸುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು. ಶಂಕರಗೌಡ ಪಾಟೀಲ, ರಮೇಶ ಪಾಟೀಲ, ರಾಮಣ್ಣ ವಳಗೇರಿ, ಈರಣ್ಣ ಕೂಲಿ, ಶಂಬಣ್ಣ ವಳಗೇರಿ, ಸುರೇಶ ಕುರಗೋಡಿ, ಸುರೇಶ ಕೂಲಿ, ಕೊಟೇಪ್ಪ ಸಕ್ರಿ, ನಿಂಗಪ್ಪ ಹರವಿ, ಶಿವನಗೌಡ ಪಾಟೀಲ, ಸುರೇಶ ಸವಣೂರ ಸೇರಿದಂತೆ ಇತರರು ಇದ್ದರು.

Read More Articles