ಈ ಭಾರಿ ಮಣ್ಣಿನ ಗಣೇಶ ಮೂರ್ತಿಗಳಿಗೆ ಹೆಚ್ಚಿದ ಬೇಡಿಕೆ
- 15 Jan 2024 , 6:07 AM
- Haveri
- 98
ಹಾವೇರಿ: ಗಣೇಶ ಉತ್ಸವಕ್ಕೆ ಇನ್ನು ಒಂದೇ ದಿನ ಭಾಕಿ ಇದೆ. ಕೊರೊನಾದ ಭೀತಿಯ ನಡುವೆಯು ಜನರು ಸಿದ್ಧಿ ವಿನಾಯಕನನ್ನು ಮನೆಗೆ ಬರಮಾಡಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ. ಜಿಲ್ಲೆಯ ಬಂಕಾಪುರ ಪಟ್ಟಣದಲ್ಲಿ ಜನರು ಮಾರುಕಟ್ಟೆಯಲ್ಲಿ ಬಾಳೆಕಂಬ, ಬಗೆ ಬಗೆಯ ಹಣ್ಣು, ಹೂ, ಪಟಾಕಿ, ಅಲಂಕಾರಿಕ ಸಾಮಗ್ರಿಗಳನ್ನು ಉತ್ಸಾಹದಿಂದ ಖರೀದಿಸುತ್ತಿದ್ದಾರೆ. ಗಣೆಶನ ಭಕ್ತಿಯಲ್ಲಿ ಪರವಶರಾದ ಭಕ್ತರು ಕೊರೊನಾ ಭಯದ ಬೀತಿಯನ್ನು ಮರೆತು, ಬೆಲೆ ಏರಿಕೆ ನಡುವೆಯೂ ಹಬ್ಬದಾಚರಣೆಗೆ ಬೇಕಾಗುವ ಸಾಮಗ್ರಿಗಳನ್ನು ಖರೀದಿಸುವಲ್ಲಿ ತಲ್ಲಿನರಾಗಿದ್ದಾರೆ.

ಕಳೆದ ವರ್ಷದಿಂದ ಪ್ಲಾಸ್ಟರ್ ಆಪ್ ಪ್ಯಾರಿಷ್ ಗಣೇಶ ಮೂರ್ತಿಗಳ ಹಾವಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ ಹಾಗು ಪಟ್ಟಣದ ಪುರಸಭೆ ಅಧಿಕಾರಿಗಳು ಮಾರಾಟ ಮಳಿಗೆಗಳಿಗೆ ಬೇಟಿ ನೀಡಿ ಜಾಗೃತಿ ಮೂಡಿಸಿದ ಪ್ರತಿಫಲವಾಗಿ ಈ ಬಾರಿ ಪಿಒಪಿ ಗಣೇಶ ಮೂರ್ತಿಗಳ ಹಾವಳಿ ಕಡಿಮೆ ಯಾಗಿದ್ದು, ಮನೆಗಳಲ್ಲಿ ಪ್ರತಿಷ್ಠಾಪಿಸುವ ಮಣ್ಣಿನ ಗಣೇಶ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಸಾರ್ವಜನಿಕ ಗಣೆಶನ ಎತ್ತರದ ಮೂರ್ತಿಗಳಿಗೆ ಈ ಬಾರಿ ಸರಕಾರ ಕಡಿವಾಣ ಹಾಕಲಾಗಿದ್ದು, ಇದರಿಂದ ಕಲಾವಿದರೂ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಗಣೆಶ ಮೂರ್ತಿಗಳು ಸೇರಿದಂತೆ ಹಣ್ಣು, ಹಂಪಲುಗಳ ದರದಲ್ಲಿಯೂ ಕೂಡಾ ಏರಿಕೆ ಕಂಡುಬಂದಿದ್ದು, ಪ್ಲಾಸ್ಟಿಕ್ ಅಲಂಕಾರಿಕ ವಸ್ತು ಗಳನ್ನು ಸಾರ್ವಜನಿಕರು ಮುಗಿ ಬಿದ್ದು ಖರೀದಿಸುತ್ತಿರುವ ದೃಶ್ಯ ಪಟ್ಟಣದಲ್ಲಿ ಸಾಮಾನ್ಯವಾಗಿ ಕಂಡುಬಂದಿತು.











