ಬೆಳೆ ಪರಿಹಾರ ನೀಡುವಂತೆ ಅಗ್ರಹಿಸಿ ರೈತ ಸೇನಾ ಕರ್ನಾಟಕ ಸಂಘದಿಂದ ಮುಖ್ಯಮಂತ್ರಿಗೆ ಮನವಿ
- 15 Jan 2024 , 2:54 AM
- Haveri
- 117
ಶಿಗ್ಗಾವಿ: ಕಳೆದ ವರ್ಷ ತೀವ್ರ ಪ್ರವಾಹದಿಂದ ಹಾಗೂ ಅತಿವೃಷ್ಟ ಅನಾವೃಷ್ಟಿ ಯಿಂದ ರೈತರು ತತ್ತರಿಸಿಹೋಗಿದ್ದಾರೆ ಅವರಿಗೆ ಸರ್ಕಾರದಿಂದ ಯಾವುದೇ ಅನುದಾನ ಬೆಳೆ ಪರಿಹಾರ ನೀಡುವಂತೆ ಅಗ್ರಹಿಸಿ ರೈತ ಸೇನಾ ಕರ್ನಾಟಕ ಸಂಘದ ಜಿಲ್ಲಾ ಅಧ್ಯಕ್ಷ ಶಿದ್ದಲಿಂಗೇಶ. ಎಮ್.ಪಾಟೀಲ ಅವರ ನೇತೃತ್ವದಲ್ಲಿ ಸಂಘದ ಕಾರ್ಯಕರ್ತರು ತಹಶೀಲ್ದಾರ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ರಾಜ್ಯದ್ಯಂತ ಮುಂಗಾರುಮಳೆ ಅತಿವೃಷ್ಟಿ ಆಗಿರುವುದರಿಂದ ಜಿಲ್ಲೆ ಯಾದ್ಯಂತ ಹಾಗೂ ತಾಲೂಕಿನಲ್ಲಿ ಮುಂಗಾರು ಬೆಳೆಗಳಾದ ಗೋವಿನಜೋಳ, ಹತ್ತಿ, ಬಾಳೆ, ಹೆಸರು, ಸೋಯಾ ಬಿನ್, ಶೇಂಗಾ, ಬತ್ತ ಸೇರಿದಂತೆ ಮುಂತಾದ ಬೆಳೆಗಳು ಅತಿವೃಷ್ಟಿಯಿಂದ ಇಳುವರಿ ಬರದ ರೀತಿಯಲ್ಲಿ ಹಾನಿಯಾಗಿವೆ. ರೈತರು ಸಾಲಸೂಲ ಮಾಡಿ ಹೆಚ್ಚಿನ ಕೂಲಿಕೊಟ್ಟು ಹಣ ಖರ್ಚು ಮಾಡಿ ಕಷ್ಟದಲ್ಲಿದ್ದಾರೆ, ಈ ಸಂದರ್ಭದಲ್ಲಿ ಅಲ್ಪಸ್ವಲ್ಪ ಬಂದ ಬೆಳೆಗಳಿಗೆ ಕೇಂದ್ರ ಸರ್ಕಾರ ಬೆಂಬಲ ಬೆಲೆ ಅನ್ವಯದಲ್ಲಿ ರಾಜ್ಯ ಸರ್ಕಾರದಿಂದ ಶೇಕಡಾ 40 ಪರ್ಸೆಂಟೇಜ್ ಹೆಚ್ಚಿಗೆ ಮಾಡಿ ಶೀಘ್ರದಲ್ಲಿ ಖರೀದಿ ಕೇಂದ್ರ ಸ್ಥಾಪನೆ ಮಾಡಬೇಕು. ಈ ಕಾರ್ಯದಲ್ಲಿ ಯಾವುದೇ ಒಬ್ಬ ರೈತನಿಗೂ ಕೂಡಾ ಅನ್ಯಾಯವಾಗದ ರೀತಿಯಲ್ಲಿ ಜಿಲ್ಲಾ ಮತ್ತು ತಾಲೂಕ ಆಡಳಿತ ಕಾಳಜಿ ವಹಿಸಬೇಕು. ಪ್ರತಿ ಹೆಕ್ಟೇರಗೆ 35000 ಸಾವಿರ ಪರಿಹಾರ ಘೋಷಣೆ ಮಾಡಬೇಕು. 2018-19 ನೇ ಸಾಲಿನ ಅತಿ ಮಳೆಯಿಂದಾದ ಹಾನಿಗೆ ಪರಿಹಾರ ಬಂದಿರುವದಿಲ್ಲ ಇದರ ಬಗ್ಗೆ ಕುಲಂಕುಷವಾಗಿ ಪರಿಶಿಲಿಸಿ ನ್ಯಾಯ ಒದಗಿಸಬೇಕು. ರೈತರಿಗೆ ಕೃಷಿಗೆ ಸಂಬಂಧಿಸಿದಂತೆ ಬೀಜ,ಗೊಬ್ಬರಗಳ ಕೊರತೆ ಎದ್ದು ಕಾಣಿಸುತ್ತಿದೆ. ತಕ್ಷಣ ಎಲ್ಲಾ ರೈತರಿಗೂ ಬೀಜ ಗೊಬ್ಬರ ಪೂರೈಕೆ ಮಾಡಬೇಕು, 2018-19 ನೇ ಸಾಲಿನಲ್ಲಿ ಅತಿವೃಷ್ಟಿ ಮಳೆಗೆ ಆದ ಪರಿಣಾಮದಿಂದ ನಗರ ಮತ್ತು ಗ್ರಾಮಗಳಲ್ಲಿ ತಾಲೂಕಿನದ್ಯಂತ ಸಾವಿರಾರು ಮನೆಗಳು ಕುಸಿದು ಸಂಪೂರ್ಣ ಹಾನಿಗೀಡಾಗಿರುತ್ತವೆ.

ಇದಕ್ಕೆ ಸಂಬಂಧ ಪಟ್ಟ ಅನೇಕ ರೈತರಿಗೆ ಪರಿಹಾರದಲ್ಲಿ ತರತಮ್ಯ ಮಾಡಿದ್ದು ಅತ್ಯಂತ ನೋವಿನ ಸಂಗತಿಯಾಗಿರುತ್ತದೆ. ಇನ್ನು ಸಾವಿರಾರು ರೈತ ಕುಟುಂಬಗಳಿಗೆ ಪರಿಹಾರ ಸಿಗದೆ ಇರುವದರಿಂದ ಕುಟುಂಬಗಳು ಬೀದಿಯಲ್ಲಿ ವಾಸಮಾಡುವಂತ ಅನಿವಾರ್ಯತೆ ಬಂದಿದೆ. ಈ ಎಲ್ಲ ಸಂಕಷ್ಟಗಳಿಗೆ ತಕ್ಷಣವೇ ಜಾರಿಗೊಳಿಸಿ ಪರಿಹಾರ ಒದಗಿಸಬೆಕು ಎಂದು ಮನವಿಯಲ್ಲಿ ವಿನಂತಿಸಿದ್ದಾರೆ. ಈ ಸಂದರ್ಭದಲ್ಲಿ ನೀಲಪ್ಪ ಮಾಕಪ್ಪನವರ, ಪ್ರಶಾಂತ ದುಂಡಿಗೌಡ್ರ, ಬಾಬು ಯಲಿಗಾರ, ಮಹೇಶ ಕಾಮನಳ್ಳಿ, ಶೇಖಣ್ಣ ಬಳ್ಳಾರಿ, ಶಂಭು ಕತ್ತಿ, ಮುನೀರಹಮ್ಮದ ಶೇತಸನದಿ, ಮಂಜುನಾಥ ಕುರಬರ, ಯಲ್ಲಪ್ಪ ಜಕ್ಕಣ್ಣವರ, ರಾಮಣ್ನ ಇಂದೂರ, ಮಹಾಂತೇಶ ಓಲೆಕಾರ, ಬಸಟ್ಟೆಪ್ಪ ಹರವಿ, ನಾಗರಾಜ ಕಾಂಬಳೆ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.










