ಹಬ್ಬದ ನೆಪದಲ್ಲಿ ಜೀವಕ್ಕೆ ಆಪತ್ತು ತಂದುಕೊಳ್ಳುವ ಪ್ರಯತ್ನ ಬೇಡಾ; ಎಸ್.ಪಿ ಕೆ.ಜಿ.ದೇವರಾಜ
- 5 Jan 2024 , 7:16 PM
- Haveri
- 139
ಶಿಗ್ಗಾವಿ: ಜೀವನಾಶ ಮಾಡುತ್ತಿರುವ ಕೊರೊನಾ ಮಹಾಮಾರಿ ಪ್ರಭಾವ ಇನ್ನೂ ನಿಂತಿಲ್ಲ, ಹಬ್ಬದ ಆಚರಣೆಯ ನೆಪದಲ್ಲಿ ಜೀವಕ್ಕೆ ಆಪತ್ತು ತಂದುಕೊಳ್ಳುವ ಪ್ರಯತ್ನ ಮಾಡಬೇಡಿ, ಸರಳ ಸಂಪ್ರದಾಯಿಕ ಹಬ್ಬ ಆಚರಣೆ ಮಾಡುವ ಮೂಲಕ ಪ್ರತಿಯೊಬ್ಬರು ಸಾಮಾಜಿಕ ಕಳಕಳಿ ತೋರಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ ಹೇಳಿದರು. ಪಟ್ಟಣದ ಶಿಶುವಿನಾಳ ಶರೀಫ್ ಶಿವಯೋಗಿಗಳ ಸಭಾಭವನದಲ್ಲಿ ಗೌರಿ ಗಣೇಶ ಹಬ್ಬ ಹಾಗೂ ಮೊಹರಂ ಆಚರಣೆಯ ಪೂರ್ವಭಾವಿ ಜನಸ್ನೇಹಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಜನರು ಪೊಲೀಸ್ ಇಲಾಖೆ ಸಿಬ್ಬಂದಿಯಂತೆ ಜವಾಬ್ದಾರಿಯುತವಾಗಿ ತಮ್ಮ ತಮ್ಮ ಕೆಲಸ ನಿರ್ವಹಿಸಿ, ಅನಾವಶ್ಯಕ ಜನರನ್ನು ಒಂದೆಡೆಗೆ ಸೇರಿಸಬೇಡಿ. ಪ್ರತಿಷ್ಠಾಪನಾ ಅವಧಿ ಸಿಮಿತವಾಗಿರಲಿ, ಆರಕ್ಷಕರು ನಿಮ್ಮ ರಕ್ಷಣೆಗೆ ಇದ್ದಾರೆ ಸಾರ್ವಜನಿಕರ ಸಹಕಾರ, ಇಲಾಖೆಗೆ ಬೇಕು, ಸರ್ಕಾರದ ಮಾರ್ಗಸೂಚಿ ಪಾಲನೆ ಮಾಡಿ, ಅವಘಡಗಳು ಸಂಭವಿಸದಂತೆ ಮುಂಜಾಗೃತಾ ಕ್ರಮಗಳನ್ನು ಪಾಲನೆ ಮಾಡಬೇಕೆಂದರು. ತಾಲೂಕಾ ಭಾಜಪ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿ, ಚತುರ್ಥಿ ಹಾಗೂ ಮೊಹರಂ ಹಬ್ಬಗಳ ಸಂಪ್ರದಾಯಿಕ ಆಚರಣೆ ಇರಲಿ, ಆದರೇ ಅದ್ದೂರಿ ಆಚರಣೆಗಳು ಬೇಡಾ, ಸಾಮಾಜಿಕ ಅಂತರ ಕಾಯ್ದುಕೊಂಡು ಹಬ್ಬವನ್ನು ಆಚರಿಸಿ ಎಂದು ಸಲಹೆ ನೀಡಿದರು. ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಶಿಗ್ಗಾವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ವಹಿಸಿದ್ದರು.

ಪುರಸಭೆಯ ಮಾಜಿ ಅಧ್ಯಕ್ಷ ಸುಭಾಸ ಚೌಹಾಣ ಮಾತನಾಡಿ ಈ ಬಾರಿ ಕೊರೊನಾ ರೋಗ ಮಹಾ ಮಾರಿಯಿಂದ ದೇಶದ ಜನರನ್ನು ಜೀವ ಹಾನಿ ಮಾಡಿದೆ. ಹೆಚ್ಚು ಜನ ಸೇರಿದಷ್ಟು, ಸಮಸ್ಯೆಗಳು ನಮ್ಮ ಸಮುದಾಯಕ್ಕೆ ಕಾರಣ ಪ್ರತಿಷ್ಠಾಪನೆ ಅವಧಿಯನ್ನು ಸರಳ ಆಚರಿಸೋಣ, ಅಲ್ಲದೇ ಕೇವಲ ಐದೇ ದಿನಕ್ಕೆ ಗಣೇಶಮೂರ್ತಿ ವಿಸರ್ಜಿಸೋಣ, ಹಬ್ಬ ಧಾರ್ಮಿಕ ಸಂಪ್ರದಾಯಿಕ ಆಚರಣೆಗೆ ಮಾತ್ರ ಸಿಮಿತವಾಗಿರಲಿ. ಸರ್ಕಾರದ ಮಾರ್ಗಸೂಚಿ ಪಾಲಿಸಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸೋಣ ಎಂದರು. ತಹಶೀಲ್ದಾರ ಸಿ.ಎಸ್. ಭಂಗಿ, ಮಜೀದ್ ಮಾಳಗಿಮನಿ. ಫಕ್ಕೀರಪ್ಪ ಕುಂದೂರು, ಡಿವೈಎಸ್ಪಿ ಓ.ಬಿ. ಕಲ್ಲೇಶಪ್ಪ. ಸಿಪಿಐ ಬಸವರಾಜ ಹಳಬಣ್ಣವರ, ಪಿಎಸ್‍ಐ ಕೆ.ಎನ್. ಹಳ್ಳಿಯವರ, ಇಲಾಖೆ ಸಿಬ್ಬಂಧಿಗಳು ಪುರಸಭೆಯ ಸದಸ್ಯರಾದ ಮಂಜುನಾಥ ಬ್ಯಾಹಟ್ಟಿ, ಗೌಸ್‍ಖಾನ್ ಮುನ್ಸಿ. ಜಾಪರಖಾನ ಪಠಾಣ, ಸಾಧೀಕ್ ಮಲ್ಲೂರು, ಪುರಸಭೆಯ ಅಧಿಕಾರಿಗಳು ಅಲ್ಲದೇ ಹಿಂದೂ, ಮಸಲ್ಮಾನ ಸಮಾಜ ಭಾಂಧವರು ಈ ಸಭೆಯಲ್ಲಿ ಉಪಸ್ಥಿತರಿದ್ದರು.











