ಎಪಿಎಂಸಿ ಜಿಎಸ್‍ಟಿ ಪದ್ದತಿಯನ್ನು ಬದಲಾವಣೆ ಮಾಡಿ : ಸುರೇಶಗೌಡ್ರ ಪಾಟೀಲ ಆಗ್ರಹ

  • 15 Jan 2024 , 12:40 AM
  • Haveri
  • 196

ಬ್ಯಾಡಗಿ: ರಾಜ್ಯದ ಎಪಿಎಂಸಿ ಮಾರುಕಟ್ಟೆಗಳಲ್ಲಿ ಜಿಎಸ್‍ಟಿ ತೆರಿಗೆಯನ್ನು ದಲ್ಲಾಳಿಗಳು ತುಂಬುವ ಬದಲಾಗಿ, ಖರೀದಿದಾರರೆ ತುಂಬುವ ವ್ಯವಸ್ಥೆ ಜಾರಿಯಾಗಬೇಕಿದೆ. ಎಂದು ಮೆಣಸಿನಕಾಯಿ ವರ್ತಕರ ಸಂಘದ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಸುರೇಶಗೌಡ್ರ ಪಾಟೀಲ ಹೇಳಿದರು.

promotions

ಇಲ್ಲಿನ ವರ್ತಕರ ಸಂಘದ ಸಭಾಭವನದಲ್ಲಿ ಜರುಗಿದ ಅಖಂಡ ಧಾರವಾಡ ಜಿಲ್ಲೆಯ ಎಪಿಎಂಸಿ ವರ್ತಕರ ವಿಶೇಷ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಕೋಟಿಗಟ್ಟಲೇ ವಹಿವಾಟು ನಡೆಸುವ ಖರೀದಿದಾರರು ಹಾಗೂ ವರ್ತಕರ ಜಿಎಸ್‍ಟಿ ಸಮಸ್ಯೆ ಬದಲಾಗಬೇಕಾಗಿದೆ. ದೇಶ ವಿದೇಶಗಳಿಗೆ ರಫ್ತು ಆದ ಜಿಎಸ್‍ಟಿ ಹಣ ವಾಪಸ್ಸು ಬರುತ್ತಿಲ್ಲ, ಸಾಕಷ್ಟು ಹಣ ಇನ್ನು ಉಳಿದುಕೊಂಡಿದ್ದು, ಇದರಿಂದ ವರ್ತಕರಿಗೆ ತೀವ್ರ ಸಮಸ್ಯೆ ಉಂಟಾಗಿದೆ. ದಲ್ಲಾಳಿಗಳ ಬದಲಾಗಿ, ಖರೀದಿದಾರರೆ ಜಿಎಸ್‍ಟಿ ಹಣ ತುಂಬುವ ವ್ಯವಸ್ಥೆ ಮಾಡಬೇಕಿದ್ದು, ಈ ನಿಟ್ಟಿನಲ್ಲಿ ರಾಜ್ಯದ ಎಲ್ಲ ಎಪಿಎಂಸಿಗಳಲ್ಲಿ ವರ್ತಕರು ಸಂಬಂಧಿಸಿದವರಿಗೆ ಸಾಕಷ್ಟು ಬಾರಿ ಒತ್ತಾಯ ಮಾಡಿದ್ದಾರೆ. ಶೀಘ್ರದಲ್ಲೆ ರಾಜ್ಯಮಟ್ಟದ ವರ್ತಕರ ಸಭೆ ನಡೆಸುವ ಮೂಲಕ ಜಿಎಸ್‍ಟಿ ಸಮಸ್ಯೆಗೆ ಖಾಯಂ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.

promotions

ಇದೆ ಸಂದರ್ಭದಲ್ಲಿ ಲೆಕ್ಕ ಪರಿಶೋದಕರಾದ ಎಸ್.ವೆಂಕರಮಣಿ, ಟಿ.ಆರ್ ರಾಜೇಶಕುಮಾರ, ವೆಂಕಟರಮಣಿ ಹಾಗೂ ಎಂ.ರಾಜೇಶಕುಮಾರ ಇವರೆಲ್ಲರನ್ನು ವರ್ತಕರು ಸನ್ಮಾನಿಸಿ ಗೌರವಿಸಿದರು. ಬಳಿಕ ಮಾತನಾಡಿದ ವಾಣಿಜ್ಯೋದ್ಯಮ ಸಂಸ್ಥೆಯ ಮಾಜಿ ಅಧ್ಯಕ್ಷರಾದ ವಿ.ಪಿ.ಲಿಂಗನಗೌಡ್ರ ಹಾಗೂ ಹುಬ್ಬಳ್ಳಿ ವರ್ತಕರ ಸಂಘದ ಅಧ್ಯಕ್ಷರಾದ ಬಸವರಾಜ ಯಕಲಾಸಪೂರ ಮಾತನಾಡಿ, ಜಿಎಸ್‍ಟಿ ಪದ್ದತಿಯನ್ನು ಬದಲಿಸಿ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಖರೀದಿದಾರರೇ ಹಣ ತುಂಬುವಂತಾಗಬೇಕು, ಆಂದ್ರಪ್ರದೇಶ ಮತ್ತು ತೆಲಂಗಾಣ ರಾಜ್ಯದ ಪದ್ದತಿಯನ್ನು ಇಲ್ಲಿ ಕೂಡ ಜಾರಿಗೊಳಿಸುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ರಾಜ್ಯ ಜೈವಿಕ ಇಂಧನ ಮಂಡಳಿ ನಿಗಮದ ಮಾಜಿ ಅಧ್ಯಕ್ಷ ಎಸ್ ಆರ್.ಪಾಟೀಲ, ಹುಬ್ಬಳ್ಳಿ ವಾಣಿಜ್ಯೋಧ್ಯಮ ಸಂಸ್ಥೆಯ ಉಪಾಧ್ಯಕ್ಷ ಜಿ.ಜಿ.ಹೊಟ್ಟಿಗೌಡ್ರ, ರಾಣೇಬೆನ್ನೂರು ವರ್ತಕರ ಸಂಘದ ಅಧ್ಯಕ್ಷ ಎಸ್.ಕೆ ಉಪ್ಪಿನ, ವರ್ತಕರಾದ ಎ.ಆರ್.ನದಾಫ, ರಾಜಣ್ಣ ಮೋರಗೇರಿ ಉಪಸ್ಥಿತರಿದ್ದರು.

Read More Articles