ರೈತರು ಮಳೆ ನೀರನ್ನು ಸಮರ್ಪಕವಾಗಿ ಬಸಿಕೊಳ್ಳಬೇಕು; ಕೃಷಿ ಪಂಡಿತ ಪುರಸ್ಕೃತ ಚನ್ನಬಸಪ್ಪ ಮಾರ್ಗದರ್ಶನ

  • 18 Dec 2023 , 2:15 AM
  • Haveri
  • 158

ಬ್ಯಾಡಗಿ: ಮಳೆಗಾಲದಲ್ಲಿ ಯಥೇಚ್ಛವಾಗಿ ಹರಿದು ಹೋಗುವ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಿದೆ. ಹೊಲ ಗದ್ದೆಗಳಲ್ಲಿ ಬದು ನಿರ್ಮಾಣ, ಕೃಷಿ ಹೊಂಡ ನಿರ್ಮಾಣ ಮಾಡಿ ಭಾವಿ ಕೆರೆಗಳಿಗೆ ನೀರು ತುಂಬಿಸುವುದರ ಜೊತೆಗೆ ಕೆರೆಕಟ್ಟೆಗಳನ್ನು ಕಾಪಾಡಿಕೊಳ್ಳುವುದಕ್ಕೆ ಒತ್ತುನೀಡಬೇಕು.

promotions

ಎಂದು ಕೃಷಿ ಪಂಡಿತ ಪುರಸ್ಕೃತರಾದ ಚನ್ನಬಸಪ್ಪ ಕಂಬಳಿ ತಿಳಿಸಿದರು. ತಾಲೂಕಿನ ಕದರಮಂಡಲಗಿ ಗ್ರಾಮದ ಸಾವಯುವ ಕೃಷಿಕರಾದ ಡಿ.ಬಿ.ಕುಸಗೂರು ಅವರ ಹೊಲದಲ್ಲಿ ಭಾನುವಾರ ಜರುಗಿದ "ಸಾವಯುವ ಕೃಷಿಯಿಂದ ಭೂಮಿ ಉಳಿಸಿ" ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಾವಯುವ ಕೃಷಿ ಹಾಗೂ ಶೂನ್ಯ ಬಂಡವಾಳ, ಅರಣ್ಯ ಬೆಳೆ ಪದ್ದತಿಗಳನ್ನು ಅಳವಡಿಸಿಕೊಂಡು ನೆಲಜಲ ರಕ್ಷಣೆ ಮಾಡಿಕೊಂಡಲ್ಲಿ ರೈತರು ಆರ್ಥಿಕ ಸಬಲರಾಗಲು ಸಾದ್ಯವಾಗಲಿದೆ. ನೈಸರ್ಗಿಕ ಪದ್ಧತಿ, ಸಾವಯುವ ಪದ್ಧತಿ ಹಾಗೂ ರಾಸಾಯನಿಕ ಕೃಷಿ ಪದ್ದತಿಗಳು ಎಲ್ಲೆಡೆ ರೂಡಿಯಲ್ಲಿದ್ದರು, ಬಹುತೇಕ ರೈತರು ಹಸಿರು ಕ್ರಾಂತಿ ಬಳಿಕ ರಾಸಾಯನಿಕ ಬಳಕೆಗೆ ಹೆಚ್ಚಿನ ಪ್ರಮಾಣದಲ್ಲಿ ಮೊರೆಹೋದ ಪರಿಣಾಮ ಇವತ್ತು ನೆಲ, ಜಲ ಹಾಳಾಗ್ತಿದೆ. ರೈತರಿಗೆ ಖರ್ಚು ಹೆಚ್ಚಾಗಿ ಆದಾಯ ಇಳಿಮುಖವಾಗಿದೆ. ನೈಸರ್ಗಿಕ ಕೃಷಿಯಿಂದ ನಷ್ಟವಿಲ್ಲ, ವಿವಿಧ ಹಣ್ಣಿನ ಮರಗಳನ್ನು ನಾವು ಹೊಲದ ಸುತ್ತ ಬೆಳೆಸಬೇಕಿದೆ. ಇದರಿಂದ ದೀರ್ಘಾವಧಿ ಮರಗಳು, ವರ್ಷಕ್ಕೊಮ್ಮೆ ಆದಾಯ ನೀಡಲಿದ್ದು, ಇದರಿಂದ ರೈತರಿಗೆ ಆರ್ಥಿಕ ಸಬಲತೆ ಸಾದ್ಯವಾಗುತ್ತದೆ. ರೈತರು ವಾಣಿಜ್ಯ ಬೆಳೆಗಳತ್ತ ಮುಖಮಾಡಿದ್ದು, ಸಾವಯುವ ಪದ್ದತಿ ರೂಡಿಸಿಕೊಳ್ಳಬೇಕು. ಹೈನುಗಾರಿಕೆ ರೈತರಿಗೆ ಲಾಭದಾಯಕವಾಗಿದ್ದು, ಸಗಣಿ, ಗಂಜಲು ಹೊಲಕ್ಕೆ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಸಾವಯುವ ಪದ್ದತಿಯನ್ನು ಹಂತಹಂತವಾಗಿ ಅಳವಡಿಸಿಕೊಳ್ಳುವಂತೆ ತಿಳಿಸಿದರು. ಶುಂಠಿ ಬೆಳೆಗಾರರದ ಮಲ್ಲಿಕಾರ್ಜುನಸ್ವಾಮಿ ಕೆ.ಎಚ್.ಮಾತನಾಡಿ, ಒಂದು ಗ್ರಾಮ ಮಣ್ಣಿನಲ್ಲಿ ಕೋಟಿಗಟ್ಟಲೆ ಸೂಕ್ಷಾಣುಜೀವಿಗಳು ಹಿಂದೆ ಬದುಕಿದ್ದವು. ಎರೆಹುಳು ರೈತನಮಿತ್ರ ಜೀವಿಯಾಗಿದ್ದು, ತನ್ನ ಆಯುಷ್ಯದಲ್ಲಿ 300 ಬಾರಿ ಭೂಮಿಯ ಆಳಕ್ಕೆ ಇಳಿದು ರಂದ್ರ ಕೊರೆಯಲಿದ್ದು, ಭೂಮಿಯಲ್ಲಿ ಮಳೆನೀರು ಇಂಗಲು ಸಹಕಾರಿಯಾಗಲಿದೆ. ಆದರೆ ಎಲ್ಲರೂ ರಾಸಾಯನಿಕ ಬಳಸಿದ ಪರಿಣಾಮ ಮಣ್ಣಿನಲ್ಲಿ ಎಲ್ಲವೂ ನಾಶವಾಗಿ ಶೂನ್ಯ ಸಂಖ್ಯೆ ತಲಪುತ್ತಿರುವುದಕ್ಕೆ. ಕೆಲದಿನಗಳಲ್ಲಿ ಭೂಮಿ ಸಂಪೂರ್ಣವಾಗಿ ಬಂಜರಾಗುವ ಮೂಲಕ ರೈತರಿಗೆ ಆತಂಕ ಎದುರಾಗಲಿದೆ. ಮಣ್ಣು ರೈತನ ಆಸ್ತಿ, ರೈತನ ಜೀವನ ಅದರ ಮೇಲೆ ಅವಲಂಭಿತವಾಗಿದೆ. ಆದರೆ ರಾಸಾಯನಿಕ ಔಷಧಿ ಬಳಕೆಯಿಂದ ಕ್ಷಣಾರ್ಧದಲ್ಲಿ ಸತ್ತುಹೋಗುತ್ತಿದೆ. ರೈತರೇ ಈಗಲೇ ಎಚ್ಚೆತ್ತುಕೊಳ್ಳಿ, ಇಲ್ಲದಿದ್ದಲ್ಲಿ ನಮ್ಮ ನಾಶಕ್ಕೆ ನಾವೇ ಕಾರಣರಾಗುತ್ತೇವೆ. ಇಸ್ರೇಲ್‍ನಲ್ಲಿ ನ್ಯಾನೋ ಟೆಕ್ನಾಲಜಿ ಮೂಲಕ ಜೀವಕೋಶಗಳನ್ನು ಭೂಮಿಗೆ ಬಿಡುವ ಪದ್ದತಿ ಆರಂಭವಾಗಿದೆ. ಹೊಲದಲ್ಲಿ ಪರಾಗಸ್ಪರ್ಶಕ್ಕೆ ಜೇನು, ಭೂಮಿ ಕಾಪಾಡಲು ಎರೆಹುಳು ಇಲ್ಲವಾದ್ರೆ ಕೃಷಿ ವಿನಾಶದ ಹಾದಿ ತುಳಿಯಲಿದೆ ಎಂದು ಎಚ್ಚರಿಸಿದರು. ಇದೇ ಸಂದರ್ಭದಲ್ಲಿ ಸಾವಯುವ ಪದ್ದತಿಯ ಶುಂಠಿ ಆದಾಯ ಹೆಚ್ಚಿಸಿಕೊಳ್ಳುವ ವಿಧಾನ, ಔಷಧಿ ಸಸ್ಯಗಳ ಬೆಳೆಸಿ ಆರ್ಥಿಕ ಲಾಭಮಾಡಿಕೊಳ್ಳುವ ವಿಧಾನವನ್ನು ತಿಳಿಸಿದರು. ಸುಮಾರು 100 ಹೆಚ್ಚು ರೈತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಕೃಷಿಕರಾದ ಮಲ್ಲಿಕಾರ್ಜುನ ಕರಿಲಿಂಗಣ್ಣನವರ, ಸುರೇಶ ಹುಳಬುತ್ತಿ, ಎಂ.ನಾಗೇಂದ್ರಪ್ಪ, ಹೊನ್ನಪ್ಪ ಎಂ.ಎಚ್, ನಾಗಣ್ಣ ಕುರುಬರ, ಶಂಕರಾನಂದ ಸಾಗರ, ಮೂರ್ತಿ ಜಿ.ಕೆ, ರಾಜು ಕರಿನಾಗಣ್ಣನವರ, ಮಂಜುನಾಥ ಎಂ.ಎಚ್, ಎಸ್.ಎಸ್.ಅಜಗೊಂಡ್ರ, ಸಾಹಿತಿ ಜೀವರಾಜ ಛತ್ರದ, ಯೋಗಶಿಕ್ಷಕ ಉದಯಶಂಕರ ಕುಸಗೂರು ಉಪಸ್ಥಿತರಿದ್ದರು.

promotions

Read More Articles