ಬೆಳೆ ಪರಿಹಾರ ನೀಡುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ: ಮುಖ್ಯಮಂತ್ರಿಗಳಿಗೆ ಮನವಿ

  • 14 Jan 2024 , 10:18 PM
  • Haveri
  • 116

ಹಾವೇರಿ: ಕೊರೊನಾ ಮಾಹಾಮಾರಿ ಬಂದಾಗಿನಿಂದ ರೈತರು ತಮ್ಮ ಕುಟುಂಬಗಳನ್ನು ನಡೆಸುವದೆ ತುಂಬಾ ಕಠಿಣವಾಗಿದೆ ಮೇಲಿಂದ ಮೇಲೆ ಅತೀವೃಷ್ಟಿ ಅನಾವೃಷ್ಟಿ ಯಿಂದ ರೈತ ಕೈಸುಟ್ಟುಕೊಂಡಿದ್ದಾನೆ ಜಮೀನಿನಲ್ಲಿ ಬೆಳೆದ ಬೆಳೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಆದರೆ ಬೆಳೆವಿಮಾ, ಬೆಳೆ ಪರಿಹಾರ ನೀಡುವಲ್ಲಿ ಸರಕಾರದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಮುಖ್ಯ ಮಂತ್ರಿಗಳಾದ ಬಿ.ಎಸ್.ಯಡಿಯೂರೆಪ್ಪ ಅವರಿಗೆ ಕೃಷಿ ಸಚಿವ ಬಿ.ಸಿ.ಪಾಟೀಲ ಅವರಿಗೆ ರೈತಸೇನಾ ಕರ್ನಾಟಕ ರಾಜ್ಯಾಧ್ಯಕ್ಷರಾದ ವಿರೇಶ ಸೊಬರದಮಠ ಸ್ವಾಮಿಜಿ ಅವರು ಮನವಿ ಸಲ್ಲಿಸಿ ಆಗ್ರಹಿಸಿದರು.

promotions

ಕೃಷಿ ಸಚಿವರಿಗೆ ಮನವಿ ಸಲ್ಲಿಸಿದವರು ರಾಜ್ಯದಲ್ಲಿ ರೈತರ ಪರಸ್ಥಿತಿ ಬಹಳ ಚಿಂತಾಜನಕವಾಗಿದೆ 2019-20 . ಪ್ರತಿ ರೈತರ ಖಾತೆಗಳಿಗೆ ತಲಾ 2 ಲಕ್ಷದಂತೆ ಸಾಲಮನ್ನಾ ಮಾಡಬೇಕು ಮಳೆಯಾಗಿ ಪ್ರವಾಹದಿಂದ ರಾಜ್ಯದ ನೊಂದ ರೈತರಿಗೆ ಪ್ರತಿ ಹೆಕ್ಟೇರ್ ಗೆ 35000 ರೂಪಾಯಿಗಳ ಪರಿಹಾರವನ್ನು ಘೋಷಣೆ ಮಾಡಬೇಕು, ಈ ಭಾಗದ ಜ್ವಲಂತ ಸಮಸ್ಯೆ ಮಲಪ್ರಭಾ ನದಿಗಳ ಪಕ್ಕ ಪಕ್ಕದಲ್ಲಿ ಇರುವಂತಹ ಗ್ರಾಮಗಳ ಸ್ಥಳಾಂತರ ಕಾರ್ಯವನ್ನು 2008 ರಲ್ಲಿ ಅತೀ ಪ್ರವಾಹದಿಂದ ನೆರೆಹಾವಳಿ ಉಂಟಾದಾಗ ಕೆಲವು ಗ್ರಾಮಗಳ ಸ್ಥಳಾಂತರ ಮಾಡಿರುತ್ತೀರಿ, ಉಳಿದ ಗ್ರಾಮಗಳ ಸ್ಥಳಾಂತರ ಪ್ರಕ್ರೀಯೆಯನ್ನು ಕೈಬಿಟ್ಟಿದ್ದು ಈಗ ಆ ಗ್ರಾಮಗಳು ಗಂಡಾಂತರ ಎದುರಿಸುವಂತಾಗಿದೆ ಇದರ ಜೊತೆಗೆ ಮಲಪ್ರಭಾ ನದಿಯ ಹೂಳು ಎತ್ತುವ ಕಾರ್ಯ ಅತೀ ಜರೂರ ಆಗಬೇಕಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

promotions

ರೈತ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷರಾದ ವಿರೇಶ ಸೊಬರದಮಠ ಸ್ವಾಮಿಜಿ, ರೈತಸೇನಾ ಕರ್ನಾಟಕದ ರಾಜ್ಯ ಸಮೀತಿ ನರಗುಂದ ಮಹಾದಾಯಿ ಹೋರಾಟ ವೇದಿಕೆಯ ಅಂದಾನಗೌಡ ಪಾಟೀಲ, ಗೌರವಾಧ್ಯಕ್ಷ ವೀರಬಸಪ್ಪ ಹೂಗಾರ ನರಗುಂದ ವೇದಿಕೆಯ ಅಧ್ಯಕ್ಷರಾದ ಪಕೀರಪ್ಪ ಜೋಗಣ್ಣವರ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಣ್ಣ ಓಲೇಕಾರ, ರಾಜ್ಯ ಸಮೀತಿ ಸದಸ್ಯರಾದ ರಾಜ್ಯ ವಕ್ತಾರಾದ ಗುರು ರಾಯನಗೌಡರ, ಹಾವೇರಿ ಜಿಲ್ಲಾಧ್ಯಕ್ಷ ಸಿದ್ಧಲಿಂಗೇಶ(ವರುಣ) ಎಂ ಪಾಟೀಲ, ರಾಜ್ಯ ಸಮೀತಿಯ ಸದಸ್ಯರಾದ ಕಿರಣ ಎಮ್ ಪಾಟೀಲ, ಹಾವೇರಿ ಜಿಲ್ಲಾ ಉಪಾಧ್ಯಕ್ಷ ಪ್ರಶಾಂತ ದುಂಡಿಗೌಡರ, ಹನುಮಂತ ಮಡಿವಾಳರ ಸೇರಿದಂತೆ ಹಲವರು ಸೇರಿ ಮನವಿ ಸಲ್ಲಿಸಿದರು.

Read More Articles