ಬೆಳಗಾವಿ: ಲಾಕ್ ಡೌನ್ ಇರುವ ಹಿನ್ನೆಲೆಯಲ್ಲಿ ಉಮೇಶ ಕತ್ತಿ ಮನೆಗೆ ಊಟಕ್ಕೆ ಹೋಗಿದ್ದು ನಿಜ ಆದರೆ ಅಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡಬೇಕೆನ್ನುವುದು ಅಥವಾ ರಮೇಶ ಕತ್ತಿಗೆ ರಾಜ್ಯಸಭಾ ಟಿಕೆಟ್ ನೀಡಬೇಕು ಎನ್ನುವುದರ ಬಗ್ಗೆ ಚರ್ಚೆ ಆಗಿಲ್ಲ ಎಂದು ಶಾಸಕ ಅನಿಲ್ ಬೆನಕೆ ತಿಳಿಸಿದ್ದಾರೆ ಒಟ್ಟು 12 ಜನ ಶಾಸಕರು ಅದರಲ್ಲಿ ಭಾಗಿ ಯಾಗಿದ್ದೆವು ಅಲ್ಲಿ ಕೆಲ ಹಿರಿಯ ಶಾಸಕರು ಇದ್ದರು ಆದರೆ ನಾವು ಮೂರ್ನಾಲ್ಕು ಜನರು ಊಟ ಮಾಡಿ ಹೊರ ಬಂದೆವು, ಕ್ಷೇತ್ರಕ್ಕೆ ಅನುದಾನದ ಕೊರತೆ ಇದೆ ಅದರ ಬಗ್ಗೆ ಚರ್ಚಿಸಲಾಗುವುದು ನಮ್ಮ ಕ್ಷೇತ್ರಕ್ಕೆ ಬಂದ ಅನುದಾನವನ್ನು ಕೋವಿಡ್ ಕಾರ್ಯಕ್ಕೆ ಬಳಸಲಾಗಿದೆ ಎಂದು ಬೆಳಗಾವಿ ಉತ್ತರ ವಲಯದ ಶಾಸಕ ಅನಿಲ್ ಬೆನಕೆ ಹೇಳಿದ್ದಾರೆ.