ರಸ್ತೆ ಕಾಮಗಾರಿಗೆ ಶಾಸಕ ವೀರೂಪಾಕ್ಷಪ್ಪ ಬಳ್ಳಾರಿ ಭೂಮಿಪೂಜೆ

  • 15 Jan 2024 , 12:11 AM
  • Haveri
  • 118
<p>
<strong>ಬ್ಯಾಡಗಿ: </strong>ಗುಡ್ಡದಮಲ್ಲಾಪುರ ಏತನೀರಾವರಿ ಯೋಜನೆ ವ್ಯಾಪ್ತಿಯ ಬಹುತೇಕ ಕೆರೆಕಟ್ಟೆಗಳು ಭರ್ತಿಯಾಗಿದ್ದು, ಸುಮಾರು 10 ಸಾವಿರಕ್ಕೂ ಹೆಚ್ಚು ಹೆಕ್ಟೇರು ಭೂಮಿ ನೀರಾವರಿಗೆ ಒಳಪಡಲಿವೆ ಎಂದು ಶಾಸಕ ವೀರೂಪಾಕ್ಷಪ್ಪ ಬಳ್ಳಾರಿ ಹೇಳಿದ್ದಾರೆ. ತಾಲೂಕಿನ ಹೆಡಿಗ್ಗೊಂಡ ಗ್ರಾಮದಲ್ಲಿ 1 ಕೋ.ರೂ.ವೆಚ್ಚದಲ್ಲಿ 550 ಮೀಟರ್ ರಸ್ತೆ ನಿರ್ಮಿಸಲು ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕರು ಗುಡ್ಡದಮಲ್ಲಾಪುರ ಏತನೀರಾವರಿ ಯೋಜನೆ ವ್ಯಾಪ್ತಿಯ ಚಿಕ್ಕಬಾಸೂರು, ಹಿರೇಹಳ್ಳಿ, ದುಮ್ಮಿಹಾಳ, ಘಾಳಪೂಜಿ, ಹಿರೇಅಣಜಿ ಗ್ರಾಮಗಳು ಸೇರಿದಂತೆ ಹತ್ತಾರು ಹಳ್ಳಿಗಳ ಕೆರೆಗಳಿಗೆ ನೀರು ಹರಿಸಲಾಗಿದೆ. ಇದರಿಂದ ತಾಲೂಕಿನ ಮಲೆನಾಡು ಪ್ರದೇಶದ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ. ರೈತರು ಭೂಸ್ವಾಧೀನ ಪ್ರಕ್ರಿಯೆಯ ಪರಿಹಾರ ಹಣ ಸೇರಿದಂತೆ ಸಣ್ಣಪುಟ್ಟ ಸಮಸ್ಯೆಗಳಿಗೆ ಕಾಲುವೆಯಲ್ಲಿ ನೀರು ಹರಿಯುವುದನ್ನು ಸ್ಥಗಿತಗೊಳಿಸುವುದು, ಕಾಲುವೆ ಒಡೆಯಲು ಯತ್ನಿಸುವುದು ಸೇರಿದಂತೆ ಇತರೆ ಹಾನಿಗೆ ಎಂದಿಗೂ ಯತ್ನಿಸಬಾರದು, ಇದರಿಂದ ನೀರು ಹರಿಸಲು ತೊಂದರೆಯಾಗಲಿದೆ.
</p>

<p>
ರೈತರು ಭೂಸ್ವಾಧೀನ ಸಮಸ್ಯೆ ಕುರಿತು ಸಮಸ್ಯೆಯಿದ್ದಲ್ಲಿ ನೇರವಾಗಿ ತಹಸೀಲ್ದಾರ, ಶಾಸಕರ ಸಂಪರ್ಕ ಕಾರ್ಯಾಲಯ ಇಲ್ಲವೆ ನಮ್ಮನ್ನು ಬೇಟಿಯಾಗಬಹುದು ಎಂದರು. ಗ್ರಾಮೀಣ ಪ್ರದೇಶದ ರಸ್ತೆಗಳು ಗುಣಮಟ್ಟವಾಗಿ ನಿರ್ಮಿಸಿದಲ್ಲಿ ಸಾರಿಗೆ ಓಡಾಟಕ್ಕೆ ಸುಗಮವಾಗಲಿದ್ದು, ಈ ನಿಟ್ಟಿನಲ್ಲಿ ಎಲ್ಲ ಗ್ರಾಮಗಳಿಗೆ ಕೂಡು ರಸ್ತೆಗಳ ಅಭಿವೃದ್ದಿಗೆ ಒತ್ತು ನೀಡುವೆ. ತಿಳವಳ್ಳಿ- ಬ್ಯಾಡಗಿ, ಕಾಗಿನೆಲೆ-ಬ್ಯಾಡಗಿ ಹಾಗೂ ಹಂಸಭಾವಿ ಕಡೆಗೆ ತೆರಳುವ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ಎಲ್ಲ ರಸ್ತೆಗಳನ್ನು ಈಗಾಗಲೇ ಅಭಿವೃದ್ದಿಪಡಿಸಿದೆ. ಇನ್ನುಳಿದ ರಸ್ತೆಗಳನ್ನು ಆಯ್ಕೆಮಾಡಿಕೊಂಡು ಹಂತಹಂತವಾಗಿ ನೂತನ ರಸ್ತೆ ನಿರ್ಮಿಸಲಾಗುವುದು. ಗ್ರಾಮೀಣ ಪ್ರದೇಶದ ಹೊಲಗಳಿಗೆ ತೆರಳುವ ರಸ್ತೆ ನಿರ್ಮಿಸಿಕೊಳ್ಳಲು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಎಲ್ಲೆಡೆ ಅವಕಾಶ ಕಲ್ಪಿಸಿದ್ದು, ಆಯಾ ಗ್ರಾಮಸ್ಥರು ಯೋಜನೆ ಬಳಸಿಕೊಂಡು ಗ್ರಾಮವನ್ನು ಅಭಿವೃದ್ದಿಪಡಿಸಿಕೊಳ್ಳಬೇಕು. ಇದರೊಂದಿಗೆ ಸರ್ಕಾರದ ಹತ್ತಾರು ಯೋಜನೆಗಳನ್ನು ಉಪಯೋಗಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು ಈ ಸಂದರ್ಭದಲ್ಲಿ ಲೋಕೋಪಯೋಗಿ ಅಭಿಯಂತರ ಸುರೇಂದ್ರ ದೊಡ್ಡಮನಿ, ಇಂಜಿನೀಯರ್ ಎ.ಎಸ್.ಪಾಟೀಲ, ಗ್ರಾಮ ಪಂಚಾಯತಿ ಪಿಡಿಓ ರಮೇಶ ಹುಲಸೋಗಿ, ಗ್ರಾ.ಪಂ. ಮಾಜಿ ಸದಸ್ಯರಾದ ಸಹದೇವಪ್ಪ ಬನ್ನಿಹಳ್ಳಿ, ಮೂಕಪ್ಪ ಅಂಗರಗಟ್ಟಿ, ಶೇಖಪ್ಪ ಕಾಶಿ, ಗುತ್ತಿಗೆದಾರ ಲಿಂಗರಾಜ ಚಪ್ಪರದಹಳ್ಳಿ ಇತರರು ಉಪಸ್ಥಿತರಿದ್ದರು.
</p>

promotions

Read More Articles