ಗುಗ್ಗಳೋತ್ಸವ ಮಹೋತ್ಸವಕ್ಕೆ ಶ್ರೀ ಶಿವದೇವ ಶರಣರಿಂದ ಚಾಲನೆ
- 18 Dec 2023 , 12:55 AM
- Haveri
- 191
ಬಂಕಾಪುರ : ಸಮಿಪದ ಸದಾಶಿವಪೇಟೆಯ ಶರಣಬಸವೇಶ್ವರ ದಾಸೋಹಮಠದಲ್ಲಿ ಮಂಗಳವಾರ ಶ್ರೀ ವೀರಭದ್ರೇಶ್ವರ ಜಯಂತೋತ್ಸವದ ಪ್ರಯುಕ್ತ ನಡೆದ ಗುಗ್ಗಳೋತ್ಸವ ಮಹೋತ್ಸವಕ್ಕೆ ಶ್ರೀ ಶರಣಬಸವೇಶ್ವರ ಮಠದ ಪೀಠಾದಿಪತಿಗಳಾದ ಶ್ರೀ ಶಿವದೇವ ಶರಣರು ಇಂದು ಚಾಲನೆ ನೀಡಿದರು. ಗುಗ್ಗಳ ಮಹೋತ್ಸವ ಶ್ರೀ ಶರಣಬಸವೇಶ್ವರ ಮಠದಿಂದ ಪ್ರಾರಂಭಗೊಂಡು ಪುರವಂತರ ವೀರಾವೇಶದ ವುಡಪುಗಳೊಂದಿಗೆ ಗ್ರಾಮದ ಮುಖ್ಯ ರಸ್ತೆಗಳಲ್ಲಿ ಸಾಗಿ ಬಂದಿತು. ಭಕ್ತರು ಗುಗ್ಗಳ ಕೋಡಗಳಿಗೆ ಹಣ್ಣು, ಕಾಯಿ ಸಮರ್ಪಿಸಿ ಭಕ್ತಿಯಿಂದ ನಮನ ಸಲ್ಲಿಸಿದರು. ನಂತರ ಶ್ರೀ ಗದಿಗೇಶ್ವರ ಮಠಕ್ಕೆ ತೆರಳಿ ಲಿಂಗೈಕ್ಯ ಶ್ರೀಗಳ ಗದ್ದುಗೆ ಆವರಣದಲ್ಲಿ ಶ್ರೀ ವೀರಭದ್ರ ಪೌರಾಣಿಕ ಕಥೆ ಹಿನ್ನಲೆಯುಳ್ಳ ವಡಪುಗಳನ್ನು ಹೇಳುವದರಮೂಲಕ ನೋಡುವ ಭಕ್ತರ ಮೈ ಮನಸ್ಸನ್ನು ರೋಮಾಂಚನಗೋಳಿಸಿದರು. ಅಲ್ಲಿಂದ ಸಾಗಿಬಂದ ಗುಗ್ಗಳ ಮಹೋತ್ಸವ ಶ್ರೀ ಶರಣಬಸವೇಶ್ವರ ಮಠದ ಆವರಣಕ್ಕೆ ಬಂದು ಸಮಾರೋಪಗೋಂಡಿತು. ತನ್ನಿಮಿತ್ಯ ಶ್ರೀಮಠದಲ್ಲಿ ಶ್ರೀ ವೀರಭದ್ರೇಶ್ವರ ಮೂರ್ತಿಗೆ ಮಹಾರುದ್ರಾಭಿಷೇಕ, ಸಹಶ್ರಭಿಲ್ವಾರ್ಚನೆ, ಸಹಶ್ರನಾಮಾವಳಿ ಸೇರಿದಂತೆ ವಿವಿದ ಪೂಜಾ ಕೈಂಕರ್ಯಗಳು ನೆರವೇರಿದವು. ನಂತರ ಹರಿದುಬಂದ ಭಕ್ತ ಜನಸಾಗರಕೆ ಅನ್ನಪ್ರಸಾದದ ಸೇವೆ ನಡೆಯಿತು. ಈ ಸಂದರ್ಭದಲ್ಲಿ ಬೀರಪ್ಪ ಮತ್ತಿಗಟ್ಟಿ, ಓಂ ಪ್ರಕಾಶ ಅಂಗಡಿ, ಗದಿಗೇಪ್ಪ ಕಿವುಡನವರ, ಬಸಪ್ಪ ಚಿಗರಿ, ಶಂಬಣ್ಣ ಶೆಟ್ಟರ, ಶಂಕ್ರಪ್ಪ ಕಿವುಡನವರ ಸೇರಿದಂತೆ ಇತರರು ಇದ್ದರು.












