ಸಾವಿನಲ್ಲೂ ಒಂದಾದ ತಾಯಿ ಮಗ
- 5 Jan 2024 , 5:09 PM
- Haveri
- 112
ಬಂಕಾಪುರ : ಪಟ್ಟಣದ ಕೊಟ್ಟಿಗೇರಿ ಗ್ರಾಮದಲ್ಲಿ ಇಂದು ಹೃದಯ ವಿದ್ರಾವಕ ಘಟನೆ ನಡೆದಿದೆ ಇಂದು ನಿವಾಸಿ ರತ್ನಮ್ಮ ಕೋಂ.ಬಸಯ್ಯ ಹಿರೇಮಠ (74) ರವರು ಶನಿವಾರ ರಾತ್ರಿ ನಿಧನರಾಗಿ, ರವಿವಾರ ಅವರ ಅಂತ್ಯ ಸಂಸ್ಕಾರ ನಡೆಯಿತು. ಅವರ ಹಿರಿಯ ಪುತ್ರ ಚಂದ್ರಕಾಂತಯ್ಯ ಬಸಯ್ಯ ಹಿರೇಮಠ (46) ರವರು ಮಂಗಳವಾರ ಬೆಳಗಿನಜಾವ ನಿಧನರಾದರು. ಒಂದೇ ಮನೆಯಲ್ಲಿ, ಒಂದು ದಿನದ ಅಂತರದಲ್ಲಿ ಎರಡು ಸಾವುಸಂಭವಿಸಿರುವುದು ಪಟ್ಟಣದ ಸಾರ್ವಜನಿಕರ ಅನುಕಂಪಕ್ಕೆ ಕಾರಣವಾಗಿದೆ. ರತ್ನಮ್ಮ ಕೋಂ.ಬಸಯ್ಯ ಹಿರೇಮಠ ರವರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದರೆ, ಚಂದ್ರಕಾಂತಯ್ಯ ಬಸಯ್ಯ ಹಿರೇಮಠ ರವರು ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.












