ಮುಂದಿನ ವಾರವೂ ನಾನು ಉಮೇಶ ಕತ್ತಿ ಮನೆಗೆ ಊಟಕ್ಕೆ ಹೋಗುತ್ತೇನೆ ಎಂದ ಶಾಸಕ ಅಭಯ ಪಾಟೀಲ್

ಬೆಳಗಾವಿ: ಉಮೇಶ್‌ ಕತ್ತಿ ಉತ್ತರ ಕರ್ನಾಟಕ ಭಾಗದ ಅತೃಪ್ತ ಶಾಸಕರೊಂದಿಗೆ ಔತಣಕೂಟ ಹೆಸರಿನಲ್ಲಿ ಸಭೆ ನಡೆಸಿದ್ದಾರೆ ಎಂಬ ಮಾಹಿತಿ ಬೆನ್ನಲ್ಲೇ ಗಡಿನಾಡು ಬೆಳಗಾವಿಯ ಕೆಲ ಶಾಸಕರು ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕಳೆದ ಮೂರು ವಾರದಿಂದ ನಮ್ಮ ಸಭೆಗಳು ಆರಂಭವಾಗಿವೆ ಆಗಿನಿಂದ ನಾವು ಉಮೇಶ ಕತ್ತಿ ಮನೆಗೆ ಊಟಕ್ಕೆ ಹೋಗುತ್ತಿದ್ದೇವೆ. ಮುಂದಿನ ವಾರವೂ ನಾನು ಹೋಗುತ್ತೇನೆ. ಕ್ಷೇತ್ರದ, ಪರಿವಾರದ ಬಗ್ಗೆ ಬಸನಗೌಡ ಪಾಟೀಲ್ ಯತ್ನಾಳ ಸೇರಿದಂತೆ ಇತರರ ಜೊತೆ ಚರ್ಚೆ ಆಗಿರುವುದು ನಿಜ ಆದರೆ ರಮೇಶ ಕತ್ತಿ ಅವರಿಗೆ ರಾಜ್ಯಸಭಾ ಟಿಕೆಟ್ ನೀಡುವುದರ ಬಗ್ಗೆ ಎಲ್ಲಿಯೂ ಚರ್ಚೆ ಆಗಿಲ್ಲ, ನನ್ನ ಕ್ಷೇತ್ರಕ್ಕೆ ಅನುದಾನದ ಕೊರತೆ ಇದೆ ಅದನ್ನು ನಾನು ವಿಧಾನಸಬೆಯಲ್ಲೂ ಹೇಳಿದ್ದೇನೆ ಎಂದು ಬೆಳಗಾವಿ ದಕ್ಷಿಣ ಮತ ಕ್ಷೇತ್ರದ ಶಾಸಕ ಅಭಯ ಪಾಟೀಲ್ ಬೆಳಗಾವಿಯಲ್ಲಿ ತಿಳಿಸಿದ್ದಾರೆ.

promotions

Read More Articles