ಮುಖಂಡರ ಜೊತೆ ಚರ್ಚಿಸಿ ಒಂದು ಸೂಕ್ತ ನಿರ್ದಾರ ತೆಗೆದು ಕೊಳ್ಳುತ್ತೇವೆ ಸಚಿವ ರಮೇಶ ಭರವಸೆ

ಬೆಳಗಾವಿ: ತಾಲೂಕಿನ ಪಿರಣವಾಡಿ ಗ್ರಾಮದ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾನ ವಿವಾದ ವಿಚಾರವಾಗಿ ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಕುರುಬ ಸಮಾಜದ ಮುಖಂಡರ ಜೊತೆ ಚರ್ಚೆ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಸಂಗೋಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ವಿವಾದವನ್ನು ಬೇಗ ಬಗೆಹರಿಸಲಾಗುವುದು.

promotions

ಮಾಜಿ ಸಿಎಂ ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ ಜೊತೆ ಚರ್ಚೆ ಮಾಡುತ್ತೇವೆ ಈ ಬಗ್ಗೆ ಈಗಾಗಲೇ ನಿರಂಜನಾಂದ ಪುರಿ ಸ್ವಾಮಿಜಿ ಜೊತೆ ಮಾತನಾಡಿದ್ದೇನೆ ಶೀಘ್ರದಲ್ಲೇ ಸಮಸ್ಯೆ ಇತ್ಯರ್ಥ ಪಡಿಸಲಾಗುವುದು ಎಂದು ಮುಖಂಡರಿಗೆ ಭರವಸೆ ನೀಡಿದ್ದಾರೆ. ಈಗ ಎಲ್ಲರ ಜೊತೆ ಸಭೆ ಮಾಡಿ ಕಾನೂನು ಪ್ರಕಾರವಾಗಿ ಸೂಕ್ತ ನಿರ್ದಾರ ತೆಗೆದುಕೊಳ್ಳಲಾಗುವುದು ಎಂದು ರಮೇಶ ಜಾರಕಿಹೊಳಿ ಬೆಳಗಾವಿಯಲ್ಲಿ ಹೇಳಿದ್ದಾರೆ.

promotions

Read More Articles