ಇಳಿವಯಸ್ಸಿನಲ್ಲಿಯು ಯುವಕರಂತೆ ಕೆಲಸ ಮಾಡುತ್ತಿದ್ದ ಸಿದ್ದನಗೌಡ ಪಾಟೀಲ್
- 15 Jan 2024 , 4:45 AM
- Belagavi
- 114
ಹುಕ್ಕೇರಿ: ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಡ್ಯಾಮಿನ ಎಚ್.ಡಿ.ಪಿ ಪ್ರೌಢ ಶಾಲೆಯಲ್ಲಿ ಇಂದು ಗುರುವಾರ ಕನ್ನಡ ಸಾಹಿತ್ಯ ಪರಿಷತ್ತ ಹುಕ್ಕೇರಿ ಘಟಕ, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತ ಹುಕ್ಕೇರಿ ಘಟಕ ಹಾಗೂ ಕರ್ನಾಟಕ ಪತ್ರಕರ್ತರ ಸಂಘ ಹುಕ್ಕೇರಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಬೆಳಗಾವಿ ಪ್ರಥಮ ಕನ್ನಡದ ಮೇಯರ್ ಡಾ.ಸಿದ್ದನಗೌಡ ಪಾಟೀಲ ಇವರ ನಿಧನಕ್ಕೆ ಭಾವಪೂರ್ಣ ಶ್ರದ್ಧಾಜಂಲಿ ಏರ್ಪಡಿಸಲಾಗಿತ್ತು. ಹಿರಿಯ ಸಾಹಿತಿ ಎಸ್.ಎಮ್. ಶಿರೂರ ಮಾತನಾಡಿ ಸಿದ್ಧಗೌಡ ಪಾಟೀಲ ಇವರ ನಿಧನದಿಂದ ಕನ್ನಡ ಸಾಹಿತ್ಯಕ್ಕೆ ತುಂಬಲಾರದ ಹಾನಿಯಾಗಿದೆ ಬೆಳಗಾವಿ ಜಿಲ್ಲೆಯ ಕನ್ನಡ ಭಾಷೆ ಹೋರಾಟದಲ್ಲಿ ಮುಂಚೂಣಿಯಲಿದ್ದರು ಎಂದು ಮಾತನಾಡಿದರು.

ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತ ಹುಕ್ಕೇರಿ ತಾಲ್ಲೂಕಾ ಅಧ್ಯಕ್ಷ ಪ್ರಕಾಶ ಹೊಸಮನಿ ಮಾತನಾಡಿ ಕನ್ನಡಪರ ಹೋರಾಟದಲ್ಲಿ ಸದಾ ಮುಂಚಿಣಿಯಲ್ಲಿದ್ದರು ಇಳಿವಯಸ್ಸಿನಲ್ಲಿಯು ಯುವಕರಂತೆ ಕೆಲಸ ಮಾಡುತ್ತಿದ್ದ ಸಿದ್ಧನಗೌಡ ಪಾಟೀಲರು ಕನ್ನಡದ ದಿಟ್ಟ ಸೇನಾನಿಯಾಗಿದ್ದರು ಗಡಿನಾಡು ಬೆಳಗಾವಿಯಲ್ಲಿ ಕನ್ನಡದ ಕಂಪನು ಪಸರಿಸಲು ಅವರ ಕೊಡುಗೆಯುಅಪಾರವಾಗಿದೆ ಎಂದು ಹೇಳಿ ಸಿದ್ದನಗೌಡ ಪಾಟೀಲರು ನಡೆದು ಬಂದ ದಾರಿ ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನು ಎಚ್.ಡಿ.ಪಿ ಪ್ರೌಢ ಶಾಲೆಯ ಮುಖ್ಯೋಪಾದ್ಯಾಯರು ಎಮ್.ಎಸ್. ಮಲ್ಲೋಳಿ ಮಾತನಾಡಿ ಸಿದ್ದನಗೌಡ ಪಾಟೀಲರು ಮಾಡಿರುವ ಸೇವೆಗಳನ್ನು ನೆನಪಿಸಿಕೊಂಡರು ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಕಾ.ಹೊ.ಶಿಂಧೆ ಹಾಗೂ ವಿಶ್ವೇಶ್ವರಯ್ಯ ಪ್ರೌಢ ಶಾಲೆಯ ಮುಖ್ಯಾಪಾಧ್ಯಾಯರು ಉದಯಕುಮಾರ ಕಮ್ಮಾರ, ಯುವ ಸಾಹಿತಿ ಶಿವಾನಂದ ನಾವಿ ಕರ್ನಾಟಕ ಪತ್ರರ್ಕರ ಸಂಘ ಹುಕ್ಕೇರಿ ಘಟಕದ ಉಪಾಧ್ಯಕ್ಷ ರಮೇಶ ನಾಯಿಕ, ಕಾರ್ಯದರ್ಶಿ ದೀಪಕ ನಾಡಗೌಡ, ಎ.ಎಮ್ ಕರ್ನಾಚಿ, ಸಹಶಿಕ್ಷಕರಾದ ಜಿ.ಎಸ್ ಕರೆನ್ನವರ, ಏಕನಾಥ ಮಾಸ್ತಿ, ಮತ್ತು ಮಹಾವೀರ ತೆಳಗಡೆ, ಲಕ್ಷ್ಮಣ ಪೂಜಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು











