ಶ್ರದ್ಧಾ ಭಕ್ತಿಯಿಂದ ಮೊಹರಂ ಹಬ್ಬ ಆಚರಣೆ
- 14 Jan 2024 , 10:00 PM
- Haveri
- 224
ಬಂಕಾಪುರ: ಪಟ್ಟಣದಲ್ಲಿ ಮುಸ್ಲಿಂ ಬಾಂಧವರು ತ್ಯಾಗ ಬಲಿದಾನದ ಸಂಕೇತವಾಗಿ ಆಚರಿಸುವ ಮೊಹರಂ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿ, ರವಿವಾರದಂದು ಆಲೈ ದೇವರುಗಳ ಮೈತೋಳೆಯುವ ಮೂಲಕ ಮೊಹರಂ ಹಬ್ಬವನ್ನು ಸಮಾರೋಪಗೊಳಿಸಿದರು. ಈ ಬಾರಿ ಕೋವಿಡ್-19 ನಿಯಮಾವಳಿ ಪ್ರಕಾರ ಪಂಜಾ ಮೇರವಣಿಗೆಗೆ ಸರಕಾರ ಅನುಮತಿ ನೀಡದೆ ಇರುವುದರಿಂದ ಆಸುರಖಾನಗಳಲ್ಲಿ ಪ್ರತಿಷ್ಠಾಪಿಸಿರುವ ಆಲೈ ದೇವರುಗಳನ್ನು ಆಸುರಖಾನಗಳ ಆವರಣದಲ್ಲಿಯೇ ಮುಸಲ್ಮಾನ ಬಾಂಧವರು ದೇವರನ್ನು ಹೊತ್ತು ಐದು ಸುತ್ತು ಸುತ್ತುವ ಮೂಲಕ ದೇವರುಗಳ ಮೈತೊಳೆಯಲಾಯಿತು. ತಮ್ಮ ಇಷ್ಠಾರ್ಥ ಸಿದ್ದಿಗಾಗಿ ಕೆಲವರು ಹುಲಿ ವೇಷತೋಟ್ಟು ಹಲಗೆ ತಾಳಕ್ಕೆ ಕುಣಿದು ಆಲೈದೇವರುಗಳಿಗೆ ತಮ್ಮ ಭಕ್ತಿ ನಮನ ಸಲ್ಲಿಸಿದರು. ರವಿವಾರ ಬೆಳಗಿನಜಾವ ಅಗ್ನಿ ಕುಂಡಕ್ಕೆ ಭಕ್ತರು ಕಟ್ಟಿಗೆ, ಉಪ್ಪು, ಕೊಬ್ಬರಿ ಹಾಕುವ ಮೂಲಕ ಅಗ್ನಿ ಕುಂಡವನ್ನು ಹಾಯ್ದು ಭಕ್ತಿಯ ಪರಾಕಾಷ್ಠೆ ಮೆರೆದರು. ಹಬ್ಬದ ಅಂಗವಾಗಿ ವಿವಿದ ಕಡೆಗಳಲ್ಲಿ ಸಾರ್ವಜನಿಕರಿಗೆ ತಂಪು ಪಾನಿಯವನ್ನು ವಿತರಿಸಲಾಯಿತು. ಅಂಜುಮಾನ್ ಸಂಸ್ಥೆ ಅಧ್ಯಕ್ಷ ಮಹಮ್ಮದಹುಸೇನ ಖತೀಬ, ತಹಮಿದ ಖಾಜಿ, ಇಮ್ರಾನಖಾನ ಕನವಳ್ಳಿ, ಅಯೂಬಖಾನ ಪಠಾಣ, ಮುನ್ನಾ ಗುಲ್ಮಿ, ಬಾಬಾ ತರೀನ, ಖ್ವಾಜಾವೈಸ್ ಖಲೀಫಾ, ಹಜರೆಸಾಬ ಜಮಾದಾರ, ನೂರಅಹ್ಮದ ಡೊರಳ್ಳಿ, ಕಲಂದರ ಜಂಗಳಿ, ಎ.ಸಿ.ಜಮಾದಾರ, ಎ,ಎ.ಗಂಜೆನವರ, ಇಂಬ್ರಾಹಿಂಸಾಬ ಪಂಚಖಾನ, ಫಾರುಖ್ ಖೇಲಿ, ಗೌಸ್‍ಖಾನ ಕನವಳ್ಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












