ಟ್ರಸ್ಟ ಪದಾಧಿಕಾರಿಗಳ ನೇತೃತ್ವದಲ್ಲಿ ಮೂರ್ತಿ ವಿಸರ್ಜನೆ
- 15 Jan 2024 , 2:14 AM
- Haveri
- 231
ಬ್ಯಾಡಗಿ: ತಾಲೂಕಿನ ಶ್ರೀ ದಾನಮ್ಮದೇವಿ ದೇವಸ್ಥಾನದಲ್ಲಿ ಪ್ರತಿಷ್ಟಾಪಿಸಿದ ಗಣೇಶ ಮೂರ್ತಿ ವಿಸರ್ಜನೆ ಭಾನುವಾರ ಸಂಜೆ ಟ್ರಸ್ಟನ ಪದಾಧಿಕಾರಿಗಳು ಹಾಗೂ ಸ್ಥಳೀಯ ಭಕ್ತರ ನೆರವಿನಲ್ಲಿ ಇಲ್ಲಿನ ಕಾಕೋಳ ರಸ್ತೆಯ ಹೊಂಡದಲ್ಲಿ ನೆರವೇರಿತು. ಈ ವೇಳೆ ಟ್ರಸ್ಟನ ಅಧ್ಯಕ್ಷೆ ಮಹೇಶ್ವರಿ ಪಸಾರದ, ಮುಖಂಡರಾದ ಡಾ.ಎಸ್.ಎನ್.ನಿಡಗುಂದಿ, ರಾಜಣ್ಣ ಮೋರಗೇರಿ, ವೇ.ಮೂ. ಅರುಣಸ್ವಾಮಿ ಹಿರೇಮಠ, ಸುದೀರ ಹವಳದ, ವೀರಭದ್ರಗೌಡ್ರ ಹೊಮ್ಮರಡಿ ಇತರರಿದ್ದರು.












