ಸರಳವಾಗಿ ಮೊಹರಂ ಹಬ್ಬ ಆಚರಿಸಲಾಯಿತು
- 14 Jan 2024 , 11:45 PM
- Vijayapur
- 110
ವಿಜಯಪುರ: ಚಡಚಣ ತಾಲೂಕಿನ ಧುಮಕನಾಳ ಗ್ರಾಮದಲ್ಲಿ ಪ್ರತಿ ವರ್ಷದಂತೆ ಮೊಹರಂ ಆಚರಿಸಲಾಯಿತು. ಲಾಕಡೌನ್ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸರಳವಾಗಿ ಮುಸ್ಲಿಂ ಬಾಂಧವರು ತ್ಯಾಗ ಬಲಿದಾನದ ಸಂಕೇತವಾಗಿ ಆಚರಿಸುವ ಮೊಹರಂ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಮೊಹರಂ ಹಬ್ಬದ ಅಂಗವಾಗಿ ಆಸುರಖಾನಗಳಲ್ಲಿ ಪ್ರತಿಷ್ಠಾಪಿಸಿದ ಲಾಲಸಾಬ ಅಲಿ, ಹುಸೇನಬಾಷಾ ಆಲೈ ದೇವರುಗಳಿಗೆ ಹಿಂದೂ ಹಾಗೂ ಮುಸ್ಲೀಂ ಬಾಂಧವರು ಹೂ, ಸಕ್ಕರೆ ಮತ್ತು ಅಲಂಕಾರಿಕ ತೊಡುಗೆ ಸಲ್ಲಿಸುವ ಮೂಲಕ ತಮ್ಮ ಭಕ್ತಿಯ ನಮನ ಸಲ್ಲಿಸಿದರು. ತಮ್ಮ ಇಷ್ಠಾರ್ಥ ಹಲವು ವೇಷಭೂಷಣವನ್ನು ತೊಟ್ಟು ತಮಟೆಯ ತಾಳಕ್ಕೆ ಕುಣಿದು ಕುಪ್ಪಳಿಸಿ ದೇವರುಗಳಿಗೆ ತಮ್ಮ ಭಕ್ತಿ ನಮನ ಸಲ್ಲಿಸಿದರು. ಮೊಹರಮ್ ನ ಕೊನೆಯ ದಿನವಾಗಿದ್ದರಿಂದ ನಿನ್ನೆ ಸರಳವಾಗಿ ಪ್ರತಿ ವರ್ಷದಂತೆ ಈ ವರ್ಷವು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮುಲ್ಲಾಸಾಬ ಪೀರಸಾಬ ಅಬುಸಾಬ ವಾಲಿಕಾರ ಮತ್ತು ಗ್ರಾಮದ ಮುಖಂಡರು ಉಪಸ್ಥಿತಿರಿದ್ದರು. ಯಾವುದೇ ಅಡೆತಡೆಯಾಗದೇ ಸರಕಾರದ ನಿಯಮಾವಳಿಗಳ ಪ್ರಕಾರ ಹಬ್ಬವನ್ನು ವಿೃಂಭಣೆಯಿಂದ ಆಚರಿಸಿಲಾಯಿತು .












