ನೋಡಲ್ ಅಧಿಕಾರಿ ನೇಮಕದ ಆದೇಶದ ಅಧಿಸೂಚನೆಯನ್ನು ರದ್ದು ಪಡಿಸಲು ಮನವಿ
- 15 Jan 2024 , 5:10 AM
- Belagavi
- 122
ಬೆಳಗಾವಿ: ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಮೇಲೆ ಸಬಲೀಕರಣ ಇಲಾಖೆಯವರು ತಾಲೂಕು ಮಟ್ಟದ ನೋಡಲ್ ಅಧಿಕಾರಿ ನೇಮಕ ಮಾಡಿ ಆದೇಶ ಹೊರಡಿಸಿದನ್ನು ರಾಜ್ಯ ಸರಕಾರ ತಡೆಹಿಡಿಯಬೇಕು ಎಂದು ಸಮಗ್ರ ಕರ್ನಾಟಕ ರಾಜ್ಯ ವಿಕಲಚೇತನ ಹಾಗೂ ಗ್ರಾಮೀಣ ಮತ್ತು ನಗರ ಪುನರ್ವಸತಿ ಕಾರ್ಯಕರ್ತರಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. 2007 -2008ನೇ ಸಾಲಿನಲ್ಲಿ ಎನ್.ಪಿ.ಆರ್.ಪಿ.ಡಿ ಯೋಜನೆ ಯಡಿಯಲ್ಲಿ ವಿಕಲಚೇತನರ ಪುನರ್ವಸತಿ ಕಲ್ಪಿಸುವುದಕ್ಕಾಗಿ ಆ ಸಂಧರ್ಭದಲ್ಲಿ ಪುನರ್ವಸತಿ ಕಾರ್ಯಕರ್ತರೆಂದು ಮತ್ತು ಗ್ರಾಮ ಪಂಚಾಯತಿಯಲ್ಲಿ 10ನೇ ತರಗತಿ ಉತೀರ್ಣರಾದವರನ್ನು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರೆಂದು ಅತಿ ಕಡಿಮೆ ಗೌರವ ಧನದ ಆಧಾರದ ಮೇಲೆ ತಾಲೂಕು ಮಟ್ಟದ ಆಯ್ಕೆ ಸಮಿತಿ ಮೂಲಕ ಆಯ್ಕೆ ಮಾಡಿರುವುದರಿಂದ ಸುಮಾರು 13 ವರ್ಷದಿಂದ ಇಲಾಖೆಯು ಹೇಳುವ ಕೆಲಸಗಳು ಮತ್ತು ಇತರೆ ಇಲಾಖೆಯಲ್ಲಿ ಸಿಗುವಂತಹ ವಿಕಲಚೇತನರ ಸೌಲಭ್ಯಗಳನ್ನು ಕೊಡಿಸುತ್ತಾ ತಾಲೂಕಾ ಮಟ್ಟ, ಜಿಲ್ಲಾ ಮಟ್ಟ, ರಾಜ್ಯ ಮಟ್ಟದ ಸಭೆ ಸಮಾರಂಭಗಳು ತರಬೇತಿಗಳನ್ನು ನಡೆಸುತ್ತ ಕೆಲಸ ಮಾಡುತ್ತಿದ್ದೇವೆ. ಸರ್ಕಾರದ ಅಧೀನ ಕಾರ್ಯದರ್ಶಿ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿರುವ ತಾಲೂಕು ನೋಡಲ್ ಅಧಿಕಾರಿಗಳ ನೇಮಕ ಅಧಿಕಾರಿಗಳು ನಿರ್ವಹಿಸಬೇಕಾದ ಕರ್ತವ್ಯ ಮತ್ತು ಜವಾಬ್ದಾರಿಗಳು ಈಗಾಗಲೇ ತಂದಿರುವ ಪುನರ್ವಸತಿ ಯೋಜನೆಯ ಮಾರ್ಗಸೂಚಿಯಲ್ಲಿನ ಅಂಶಗಳೇ ಆಗಿರುತ್ತವೆ. ಅವುಗಳನ್ನು ನಾವೆಲ್ಲರೂ ಅಂದರೆ ತಾಲೂಕು ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರು ಸುಮಾರು 13 ವರ್ಷದ ನಿರ್ವಹಿಸಿಕೊಂಡು ಬರುತ್ತಿದ್ದೇವೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು 2007 -2008 ನೇ ಸಾಲಿಂದ ಪ್ರತ್ಯೇಕವಾಗಿದೆ ಎಂದು ಹೇಳಿ ಇಲಾಖೆ ಯೋಜನೆಗಳು ವಿಕಲಚೇತನರಿಗೆ ಇಲಾಖೆಯ ಸ್ವತಂತ್ರವಾಗಿ ಸೌಲಭ್ಯ ಒದಗಿಸುವ ಕೆಲಸದಲ್ಲಿ ತೊಡಗಿದ್ದರು ಮಧ್ಯದಲ್ಲಿ ನೋಡಲ್ ಅಧಿಕಾರಿಗಳ ನೇಮಕ ವಿಕಲಚೇತನರಿಗೆ ಸ್ವತಂತ್ರ ಇಲಾಖೆ ಇಲ್ಲದಂತಾಗುವುದರಲ್ಲಿ ಸಂದೇಹವೇ ಇಲ್ಲ. ಹಾಗಾಗಿ ಸರ್ಕಾರದ ಅಧೀನ ಕಾರ್ಯದರ್ಶಿಗಳು ಹೊರಡಿಸಿರುವ ಅಧಿಸೂಚನೆಯನ್ನು ತಡೆಹಿಡಿದು ತಾಲೂಕು ಪುನರ್ವಸತಿ ಕಾರ್ಯಕರ್ತರನ್ನು ಬಲವಂತಪಡಿಸಿ ನೋಡಲ್ ಅಧಿಕಾರಿಗಳನ್ನು ಒಂದು ವರ್ಷದಲ್ಲಿಸರ್ಕಾರದ ಅಧೀನ ಕಾರ್ಯದರ್ಶಿಗಳು ಹೊರಡಿಸಿರುವ ಅಧಿಸೂಚನೆಯನ್ನು ತಡೆಹಿಡಿದು ತಾಲೂಕು ಪುನರ್ವಸತಿ ಕಾರ್ಯಕರ್ತರನ್ನು ಬಲಪಡಿಸಿ ನೋಡಲ್ ಅಧಿಕಾರಿಗಳೆಂದು ಮಂದುವರಿಸಿದ್ದಲ್ಲಿ ಸಹಕಾರಿ ಆಗುತ್ತದೆ, ನೋಡಲ್ ಅಧಿಕಾರಿ ನೇಮಕ ಆದೇಶ ತಡೆ ಹಿಡಿಯದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಂದು ಹೇಳಿದರು. ಶಂಕರಗೌಡ ಪಾಟೀಲ ಮಾತನಾಡಿ ನಾವು ವಿಕಲಚೇತನರ ಕಲ್ಯಾಣ ಇಲಾಖೆಯಲ್ಲಿ ಸುಮಾರು 13 ವರ್ಷದಿಂದ ಎಮ್. ಆರ್. ಡಬ್ಲ್ಯೂ. ಮತ್ತು ವಿ.ಆರ್.ಡಬ್ಲ್ಯೂ ಎಂದು ಕೆಲಸ ಮಾಡುತ್ತಿದ್ದೇವೆ. ರಾಜ್ಯ ಸರಕಾರ ಒಂದು ಅಧಿಸೂಚನೆ ಹೊರಡಿಸಿದೆ ಆದರೆ ನಮ್ಮ ಇಲಾಖೆಗೆ ಸಂಬಂಧವಿಲ್ಲದ ಅಧಿಕಾರಿಗಳನ್ನು ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ. ನಮ್ಮ ಹಕ್ಕುಗಳನ್ನು ಕಸಿದುಕೊಳ್ಳುವಂತ ಕೆಲಸ ಆಗುತ್ತದೆ ಸರಕಾರ ಈ ಆದೇಶವನ್ನು ವಾಪಸ ಪಡೆದುಕೊಳ್ಳಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಪವಾಸ ಸತ್ಯಾಗ್ರಹ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಎಲ್ಲಾ ಕಾರ್ಯಕರ್ತರು ಉಪಸ್ಥಿತರಿದ್ದರು.











