ಶ್ರೀ ಕಮಲಾದೇವಿ ದೇವಸ್ಥಾನದಲ್ಲಿ ತಾಬೂತ ಪ್ರತಿಷ್ಠಾಪನೆ

ಹಿಡಕಲ್ ಡ್ಯಾಂ : ತ್ಯಾಗ ಬಲಿದಾನ ಮತ್ತು ಸತ್ಯದ ಸಂದೇಶ ಸಾರುವ ಮೊಹರಂ ಹಬ್ಬವನ್ನು ಹುಕ್ಕೇರಿ ತಾಲೂಕಿನ ರುಸ್ತುಂಪೂರ ಗ್ರಾಮದಲ್ಲಿ ಆಚರಿಸಿದರು. ರುಸ್ತುಂಪೂರ ಗ್ರಾಮದ ಶ್ರೀ ಕಮಲಾದೇವಿ ದೇವಸ್ಥಾನದಲ್ಲಿ ಪ್ರತಿ ವರ್ಷ ಪೂರ್ವಜರ ಕಾಲದಿಂದಲೂ ಮೊಹರಂ ಹಬ್ಬದ ತಾಂಬೂತವನ್ನು ಪ್ರತಿಷ್ಠಾಪನೆ ಮಾಡಿ ಹಿಂದೂ ಮುಸ್ಲಿಂರಲ್ಲಿ ಭಾವೈಕ್ಯತೆಯ ಸಂದೇಶ ಸಾರಲಾಗುತ್ತಿದೆ. ಮೊಹರಂ ಹಬ್ಬವನ್ನು ಈ ಬಾರಿ ಸರಳವಾಗಿ ಆಚರಿಸಲಾಯಿತು. ರುಸ್ತುಂಪೂರ ಗ್ರಾಮದ ಜನರು ಮೊಹರಂ ಹಬ್ಬದ ತಾಬೂತವನ್ನು ಪ್ರತಿಷ್ಠಾಪನೆ ಮಾಡಿ ಆಚರಿಸುತ್ತಾ ಬಂದಿದ್ದಾರೆ.

promotions

promotions

Read More Articles