ಜೀವದ ಹಂಗು ತೊರೆದು ಬಾಡಿಗೆ ತೆಪ್ಪದಲ್ಲಿ ಹರಸಾಹಸ
- 14 Jan 2024 , 11:13 PM
- Haveri
- 107
ಬಂಕಾಪುರ: ರೈತರು ಕೃಷಿ ಚಟುವಟಿಕೆಗೆ ಹೊಲಗಳಿಗೆ ತೆರಳಲು ದಾರಿಯಿಲ್ಲದೇ ತುಂಬಿ ತುಳುಕುತ್ತಿರುವ ಕೆರೆಯಲ್ಲಿ ಜೀವದ ಹಂಗು ತೊರೆದು ಬಾಡಿಗೆ ತೆಪ್ಪದಲ್ಲಿ ತೇರಳುವಂತ ಪರಸ್ಥಿತಿ ಸಮಿಪದ ಶಿಡ್ಲಾಪುರ ಗ್ರಾಮದ ರೈತರಿಗೆ ಬಂದೋದಗಿದೆ. ಪ್ರತಿ ಮಳೆಗಾಲದಲ್ಲೂ ಕೂಡ ಕೆರೆ ತುಂಬಿದಾಗ ರೈತರು ತಮ್ಮ, ತಮ್ಮ ಹೋಲ, ಗದ್ದೆಗಳಿಗೆ ತೆರಳಲು ಹರಸಾಹಸ ಪಡುವಂತ ಪರಸ್ಥಿತಿ ಬಂದೋದಗಿದೆ. ಕೃಷಿ ಕೆಲಸ, ಕಾರ್ಯಗಳಿಗೆ, ಕೂಲಿ ಕಾರ್ಮಿಕರನ್ನು ತೆಪ್ಪದಲ್ಲಿ ಕುಳ್ಳರಿಸಿಕೊಂಡು ಸಾಗುವಂತ ಪರಸ್ಥಿತಿ ನಿರ್ಮಾಣವಾಗಿದೆ. ಅದಲ್ಲದೇ ಬೀಜ, ಗೋಬ್ಬರದಿಂದ ದಿಂದ ಹಿಡಿದು ಕೃಷಿಗೆ ಬೇಕಾದ ಸಲಕರಣೆಗಳನ್ನು ತೆಪ್ಪದಲ್ಲೇ ಕೊಂಡೊಯ್ಯಬೇಕಾದ ಅನಿವಾರ್ಯತೆಯಿದೆ. ಬೇಸಿಗೆಯಲ್ಲಿ ಕೆರೆಯ ನೀರಿನ ಹರಿವು ಕಡಿಮೆ ಇದ್ದಾಗ ಕೆರೆಯ ಆವರಣದಲ್ಲಿಯೆ ರೈತರು ಚಕ್ಕಡಿ, ಗಳೆ, ಎತ್ತುಗಳನ್ನು ತೆಗೆದುಕೊಂಡು ಹೋಗಿ ಕೃಷಿ ಚಟುವಟಿಕೆಗಳನ್ನು ನಡೆಸುತ್ತಾರೆ. ಆದರೆ ಮಳೆಗಾಲದಲ್ಲಿ ಹೋಲ, ಗದ್ದೆಗಳಿಗೆ ತೆರಳಲು ದಾರಿ ಇಲ್ಲದ ಕಾರಣ ರೈತರು ಅನಿವಾರ್ಯವಾಗಿ ತೆಪ್ಪವನ್ನು ಬಳಸಿ ಕೃಷಿ ಚಟಿವಟಿಕೆಗೆ ತೆರಳಬೇಕಾಗಿದೆ. ಇದರಿಂದ ಕೃಷಿ ಕೂಲಿ ಕಾರ್ಮಿಕರು ಜೀವ ಭಯದಿಂದ ಕೆಲಸಕ್ಕೆ ಬರಲೂ ಕೂಡಾ ತಿರಸ್ಕರಿಸುತ್ತಿದ್ದಾರೆ. ಕೂಲಿ ಕಾರ್ಮಿಕರನ್ನು ಪುಸಲಾಯಿಸಿ ಕೃಷಿ ಕಾರ್ಯಕ್ಕೆ ಕರೆದೊಯ್ಯುವುದು ಇಲ್ಲಿನ ರೈತರಿಗೆ ಹರಸಾಹಸದ ಕೆಲಸವಾಗಿದೆ ಎಂದು ಅಲ್ಲಿನ ರೈತರು ಆರೋಪ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಏತ ನೀರಾವರಿ ಯೋಜನೆಯಲ್ಲಿ ವರದಾನದಿಯಿಂದ ಪೈಪ್ ಲೈನ್‍ಗಳ ಮೂಲಕ ಡೋಂಕೇರಿ ಕೆರೆಗೆ ನೀರು ತುಂಬಿಸುವ ಯೋಜನೆ ಪೂರ್ಣಗೋಳ್ಳುವ ಹಂತದಲ್ಲಿದ್ದು, ಯೋಜನೆ ಪರಿಪೂರ್ಣ ವಾದನಂತರ ಬೇಸಿಗೆಯಲ್ಲೂ ಕೂಡಾ ಹೊಲ, ಗದ್ದೆಗಳಿಗೆ ತೆರಳಲು ಅವಕಾಸವಿಲ್ಲದಂತಾಗಿದೆ. ಈ ವಿಷಯಕ್ಕೆ ಸಂಬಂದಿಸಿದಂತೆ ರೈತರು ಹೊಲ, ಗದ್ದೆಗಳಿಗೆ ತೆರಳಲು ಸೇತುವೆ ನಿರ್ಮಿಸಿ ರೈತರಿಗೆ ಅನಕೂಲ ಮಾಡಿಕೋಡುವಂತೆ, ಸುಮಾರು ವರ್ಷಗಳಿಂದ ಸಂಬಂದಪಟ್ಟ ಅಧಿಕಾರಿಗಳಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಗಮನಕ್ಕೂ ತಂದರೂ ಕೂಡಾ ಇದುವರೆಗೂ ಯಾವುದೇ ಪ್ರಯೋಜನವಾಗಿರುವುದಿಲ್ಲ. ಎಂದು ಅಲ್ಲಿನ ರೈತರು ಆರೋಪ ವ್ಯಕ್ತಪಡಿಸುತ್ತಿದ್ದಾರೆ. ಸಂಬಂದ ಪಟ್ಟ ಅಧಿಕಾರಿಗಳು ರೈತರು ಜೀವಹಾನಿಯಾದ ನಂತರ ಬಂದು ಸಾಂತ್ವನ ಹೇಳುವ ಮೊದಲು ಎಚ್ಚೆತ್ತುಕೊಂಡು ಕೆರೆಯ ಅಡ್ಡಲಾಗಿ ಸೇತುವೆ ನಿರ್ಮಿಸಿ ರೈತರ ಹೊಲ, ಗದ್ದೆಗಳಿಗೆ ಓಡಾಡಲು ಅನಕೂಲ ಮಾಡಿಕೊಡುವಂತೆ ಅಲ್ಲಿನ ರೈತರಾದ ಸೋಮಣ್ಣ ದೊಡ್ಡಮನಿ, ಮುತ್ತಪ್ಪ ಕಲಕಟ್ಟಿ, ಮಂಜುನಾಥ ಸಣ್ಮನಿ, ಶಿವಪ್ಪ ಸುಂಕದ, ನಿಂಗಪ್ಪ ಹರಿಜನ, ಹನಮಂತಪ್ಪ ಕಲಕಟ್ಟಿ, ಬಸವಂತಪ್ಪ ಬಡೆಪ್ಪನವರ, ಸಿದ್ದಪ್ಪ ಕೆಂಗಣ್ಣವರ, ಉಮೇಶ ಯಲಗಚ್ಚ, ರೇಣುಕಾ ಬಡೆಪ್ಪನವರ, ಮಂಜವ್ವ ಕಲಕಟ್ಟಿ, ಶಾಂತವ್ವ ಸಣ್ಣಮನಿ ಸೇರಿದಂತೆ ಇತರರು ಅಧಿಕಾರಿಗಳಲ್ಲಿ ಮನವಿ ಮಾಡಿ ಕೊಂಡಿದ್ದಾರೆ.

ಈಗಾಗಲೇ ಚೆಂಡಿನ ಹೂ ಕೋಯ್ಲು ಪ್ರಾರಂಭವಾಗಿದ್ದು, ಮಹಿಳಾ ಕೂಲಿ ಕಾರ್ಮಿಕರನ್ನು ತೆಪ್ಪದಲ್ಲಿ ಕರೆದುಕೊಂಡು ಹೋಗುವ ಅನಿವಾರ್ಯತೆಯಿದೆ. ತೆಪ್ಪವನ್ನು ಹಗ್ಗದ ಸಹಾಯದಿಂದ ನಡೆಸಲಾಗುತ್ತಿದ್ದು, ಸ್ವಲ್ಪ ಎಚ್ಚರ ತಪ್ಪಿದರೂ ಜೀವಕ್ಕೆ ಆಪತ್ತು ಕಟ್ಟಿಟ್ಟ ಬುತ್ತಿ. ಅಧಿಕಾರಿಗಳು ಸೇತುವೆ ನಿರ್ಮಿಸಿ ರೈತರ ಜೀವ ಕಾಪಾಡಲಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಸ್ಥಳೀಯ ರೈತ ರವಿ ಸುಂಕದ.

ಮಳೆಗಾಲದಲ್ಲಿ ರೈತರು ಹೊಲ, ಗದ್ದೆಗಳಿಗೆ ತೆರಳಲು ಸಮಸ್ಯೆ ಎದುರಿಸುತ್ತಿರುವುದನ್ನು ಈಗಾಗಲೇ ಪರಿಶೀಲಿಸಿದ್ದೆನೆ. ಲೀಖಿತವಾಗಿ ಮೇಲಾಧಿಕಾರಿಗಳ ಗಮನಕ್ಕೆ ತಂದು ರೈತರ ಸಮಸ್ಯಗಳಿಗೆ ಶಾಸ್ವತ ಪರಿಹಾರ ಕಲ್ಪಿಸಲಾಗುವುದು ಎಂದು ಹೇಳುತ್ತಾರೆ, ಆರ್.ಎಮ್.ನಾಯಕ ಕಂದಾಯ ನಿರೀಕ್ಷಕರು.










