ಯುವಾ ಬ್ರಿಗೇಡದಿಂದ ವೃದ್ಧೆಗೆ ಮನೆ ಹಸ್ತಾಂತರ, ಮನೆ ಹಸ್ತಾಂತರ ಮಾಡಿದ ಚಕ್ರವರ್ತಿ ಸೂಲಿಬೆಲೆ

ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೊಸೂರ ಗ್ರಾಮದ ವೃದ್ಧೆ ಮೀರಮ್ಮ ಬಾಗವಾನ್ ಕಳೆದ ವರ್ಷ ಪ್ರವಾಹ ದಲ್ಲಿ ಮನೆಯನ್ನು ಕಳೆದು ಕೊಂಡಿದ್ದರು ಈ ಮನೆ ನಿರ್ಮಾಣ ದ ಕಾಯ೯ ವನ್ನು 2ಲಕ್ಷ 64ಸಾವಿರ ರೂ ಗಳಲ್ಲಿ ಒಂದು ವರ್ಷದಲ್ಲಿ ನಿಮಾ೯ಣ ಮಾಡಿ. ಹಸ್ತಾಂತರ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ ಅವರು ಯುವಾ ಬ್ರಿಗೇಡ್ ಕಳೆದ ವರ್ಷ ಪ್ರವಾಹ ದಲ್ಲಿ ಮನೆಯನ್ನು ಕಳೆದುಕೊಂಡಿದ್ದ ಅಜ್ಜಿ ಗೆ ನಮ್ಮ ಯುವಾ ಬ್ರಿಗೇಡ್ ನ ಸದಸ್ಯರ ಪ್ರಯತ್ನದಿಂದ ಒಂದು ವರ್ಷದಲ್ಲಿ ಮನೆಯನ್ನು ನಿಮಾ೯ಣ ಮಾಡಲು ಸಾಧ್ಯವಾಗಿದ್ದು ಇಂದು ಈ ಮನೆಯನ್ನು ಹಸ್ತಾಂತರ ಮಾಡಲಾಯಿತು ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮೀರಮ್ಮ ಬಾಗವಾನ್ ಅಜ್ಜಿಗೆ "ನಮ್ಮನೆ" ಎಂಬ ಹೆಸರಿನಿಂದ ಮನೆ ನಿರ್ಮಾಣ ಮಾಡಿ ಕೊಟ್ಟ ಚಕ್ರವರ್ತಿ ಸೂಲಿಬೆಲೆ ಹಾಗೂ ಯುವಾ ಬ್ರಿಗೇಡ್ ಸದಸ್ಯ ರಿಗೆ ಧನ್ಯವಾದಗಳನ್ನು ತಿಳಿಸಿದರು ಈ ಸಂದರ್ಭದಲ್ಲಿ ಯುವಾ ಬ್ರಿಗೇಡ್ ಹೊಸೂರ ಗ್ರಾಮದ ವರಿಂದ ಚಕ್ರವರ್ತಿ ಸೂಲಿಬೆಲೆ ಅವರನ್ನು ಸನ್ಮಾನಿಸಲಾಯಿತು. ರಾಜ್ಯ ಸಂಚಾಲಕರಾದ ಕಿರಣ ರಾಮ್ ಹಾಗೂ ಊರಿನ ಹಿರಿಯರು ಉಪಸ್ಥಿತರಿದ್ದರು

promotions

promotions

Read More Articles